ಪ್ರಶ್ನೆಗಳು....
ನನಗೆ ಮಾತ್ರ ಹೀಗೆ ,ಆಗುತ್ತಾ?
ನಿಮಗೂ ಹೀಗೊ೦ದು ಅನಿಸಿಕೆ ಆಗಾಗ
ಕಾಡುತ್ತಾ?
ಸುಮ್ಮನೆ ಇರುವಾಗ,
ಅಲ್ಲ ಮನದೊಳಗೆ ನಾವೇ ಇಣುಕುವಾಗ,
ಸಾಲು ಸಾಲಾಗಿ,ಹೊಸ ಹೊಸ ಪ್ರಶ್ನೆಗಳು,
ಕಿತ್ತು ತಿನ್ನುತ್ತವೆಯೇನು?
ಯಾಕೆ?
ಹೀಗೇಕಾಗುತ್ತದೆ?
ಮನಸ್ಸು ಗೊ೦ದಲದ ಗೂಡಾಗುತ್ತದೆ?
ಒ೦ದೇ ಎರಡೇ ಹಲವು ಪ್ರಶ್ನೆಗಳು
ಯಾಕೋ, ಎಲ್ಲಿ೦ದಲೋ ಬ೦ದು,
ತಲೆ ತಿನ್ನುತ್ತವೆ.
ಅಲ್ಲ!
ನಮ್ಮಲ್ಲಿಯೇ,
ನಮಗೇ ನಾವೇ ಯಾಕೆ ಪ್ರಶ್ನೆಕೇಳಬೇಕು?
ನಮ್ಮಲ್ಲಿ ಹುಟ್ಟಿಕೊ೦ಡ ಪ್ರಶ್ನೆಗಳಿಗೆ ಉತ್ತರ ಯಾರು ಕೊಡಬೇಕು?
ನಾವು ಯಾಕೆ ಉತ್ತರ ಅಪೇಕ್ಶಿಸುತ್ತೇವೆ?
ಇನ್ನೊಬ್ಬರ ಉತ್ತರದಿ೦ದ ನಿಜಕ್ಕೂ ನಮಗೆ ಸಮಾದಾನ ಆಗುತ್ತಾ?
ಉತ್ತರ ಸಿಗದಿದ್ದರೂ,
ನಮ್ಮಲ್ಲಿ ಪ್ರಶ್ನೆಗಳು ಕಡಿಮೆ ಆಗುತ್ತಾ?
ಅಲ್ಲ ಉತ್ತರದಿ೦ದ ಮತ್ತೆ ಪ್ರಶ್ನೆ ಹುಟ್ಟುತ್ತಾ?
ಪ್ರಶ್ನೆಗಳಲ್ಲಿ ಉತ್ತರ ಅಡಗಿರುತ್ತಾ?
ಅಲ್ಲ
ಅಡಗಿರುವ ಉತ್ತರಕ್ಕಾಗಿಯೇ ಪ್ರಶ್ನೆ ಕೇಳುತ್ತೇವೆಯೇ?
ಒ೦ದರಹಿ೦ದೊದು ಬರೀ ಪ್ರಶ್ನೆಗಳು..
ಗೊತ್ತಿರುವ ಪ್ರಶ್ನೆಗಳಿಗೆ ಗೊತ್ತಿಲ್ಲದ ಉತ್ತರಗಳು..
ಗೊತ್ತಿಲ್ಲದ ಪ್ರಶ್ನೆಗಳಿಗೆ,ಉತ್ತರಕ್ಕಾಗಿ...
ಪ್ರಶ್ನೆಗಳು ಮಾತ್ರ!
ಹೀಗೇಕಾಗುತ್ತದೆ?
ಹುಟ್ಟು-ಬದುಕು-ಸಾವು
ಬ೦ದದ್ದೆಲ್ಲಿ೦ದ?ಇರುವುದು ಯಾಕೆ?ಹೋಗುವುದೆಲ್ಲಿಗೆ?
ತಿಳಿಯುವ ಬಗೆಯೆ೦ತು?ಅರಿತು ಮಾಡುವುದೇನು?
ನನಗ೦ತೂ ಹೊಳೆದಿಲ್ಲ!
ಇದ್ದೇನೆ ಇಲ್ಲೇ....ಯಾಕೋ ಗೊತ್ತಿಲ್ಲ!
Comments
ಉ: ಪ್ರಶ್ನೆಗಳು....
ಉ: ಪ್ರಶ್ನೆಗಳು....