ಚೈತ್ರೊದಯ - ಜಿ.ಎಸ್.ಎಸ್ ಕಾವ್ಯವಾಚನ

ಚೈತ್ರೊದಯ - ಜಿ.ಎಸ್.ಎಸ್ ಕಾವ್ಯವಾಚನ

ಭಾನುವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರ ತುಂಬಿತುಳುಕಿತ್ತು.. ತಲುಪುವ ವೇಳೆಗಾಗಲೆ ಇನ್ನೇನು ಖುರ್ಚಿಗಳೇ ಸಿಗುವುದಿಲ್ಲವೇನೋ ಎಂದು ಕೊರಗುತ್ತಲೇ ಒಳನೆಡೆದರೂ ಎಲ್ಲರಿಗೂ ಸುಲಭವಾಗಿ ಕೂಡಲು ಸಾಧ್ಯವಾಯಿತು. ಬಿ.ಸುರೇಶ್, ಮುಖ್ಯಮಂತ್ರಿ ಚಂದ್ರು ಇತರರು ಸುತ್ತಮುತ್ತಲಿದ್ದುದು ಕಂಡು ಬಂತು. ಕಾರ್ಯಕ್ರಮ ಶುರುವಾಗುತ್ತಲಿತ್ತು.

ನನ್ನ ನೆಚ್ಚಿನ ಕವಿ ಜಿ.ಎಸ್. ಶಿವರುದ್ರಪ್ಪನವರ (ಜಿ.ಎಸ್.ಎಸ್) ಕಾವ್ಯವಾಚನ ಅನೇಕ ರಂಗಗಳ ಹೆಸರಾಂತ ಮಂದಿಯಿಂದ. ಕಿವಿಗೆ ರಸದೌತಣ... ಪ್ರೊ.ಸಿದ್ದಲಿಂಗಯ್ಯ ಅವರಿಂದ ಮೊದಲು ಮಾಡಿ, ಟಿ.ಎನ್ ಸೀತಾರಾಮ್, ಎಚ್.ಎಸ್ ವೆಂಕಟೇಶ್ ಮೂರ್ತಿ, ಎಸ್. ಷಡಕ್ಷರಿ, ಡಾ|ಯು.ಆರ್ ಅನಂತಮೂರ್ತಿ, ಪಂಡಿತ್ ಪರಮೇಶ್ವರ ಹೆಗಡೆ, ಸಿ.ಆರ್ ಸಿಂಹ, ಸುಮ ಸುದೀಂದ್ರ, ವಿಶ್ವೇಶ್ವರ ಭಟ್, ಚಿರಂಜೀವಿ ಸಿಂಗ್, ನಟಿ ಜಯಮಾಲ, ಡಾ| ಚಂದ್ರಶೇಖರ ಕಂಬಾರ, ಕೆ. ಸುಭ್ರಮನಿಯಂ, ನಾಡೋಜ ಚನ್ನವೀರ ಕಣವಿ, ಮನು ಭಾಳಿಗರ್, ಡಾ| ಭುಜಂಗಶಟ್ಟಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಬಿ.ಸುರೇಶ್, ಮಂಡ್ಯ ರಮೇಶ್, ನಟಿ ಮೇಧನಾ, ಎಸ್ ದಿವಾಕರ್, ಬಿ.ಟಿ ಲಲಿತಾನಾಯಕ್, ಎಸ್. ಆರ್ ರಾಮಕೃಷ್ಣ, ಜಾನಪದ ಕಲಾವಿದ ಆಂಜನೇಯ ಜೋಗಿ, ಶಿವಮೊಗ್ಗ ಸುಬ್ಬಣ್ಣ ಕೊನೆಯದಾಗಿ ಬಿ. ಜಯಶ್ರೀ ಕಾವ್ಯವಾಚನ ಮಾಡಿ ಕವಿಗೆ ನಮನ ಸಲ್ಲಿಸಿದರು.

ಇದೇ ಸಮಯದಲ್ಲಿ ನಾಡೋಜ ರಾಷ್ಟ್ರಕವಿಗೆ ನುಡಿನಮನ ಸಲ್ಲಿಸುವುದರ ಜೊತೆಗೆ ಅವರಿಗೆ ಶಾಲು ಹೊದಿಸಿ ಸನ್ಮಾನವನ್ನೂ ಮಾಡಿದರು. ಜಿ.ಎಸ್.ಎಸ್ ನಾಡೋಜಾ ಗೆ ಹೂಗುಚ್ಚ ನೀಡಿದರು.

ಎಲ್ಲರನ್ನೂ ವೇದಿಕೆಯ ಮೇಲೆ ನೋಡುವ ಭಾಗ್ಯದೊಂದಿಗೆ, ಅವರ ಧ್ವನಿಯಲ್ಲಿ ನೆಚ್ಚಿನ ಕವಿಯ ಕವನಗಳ ವಾಚನ ಇನ್ನೂ ನನ್ನ ಕಿವಿಯಲ್ಲಿ ಗುನುಗುನಿಸುತ್ತಿದೆ. ಟ್ವಿಟರ್ ನಲ್ಲಿ ಕಾರ್ಯಕ್ರಮದ ಬಗ್ಗೆ ಆಗ್ಗಿಂದ್ದಾಗ್ಗೆ ಸಂಪದ ತಂಡ ಅಪ್ಡೇಟ್ಗಳನ್ನು ನೀಡುತ್ತಿದ್ದದ್ದನ್ನು ಕೆಲವರು ಗಮನಿಸಿರಬಹುದು. ಹರಿ, ಅನಿಲ ಮತ್ತು ನಾನು ಕವಿತೆ ಕೇಳುವುದರ ಜೊತೆಗೆ ಈ ಕೆಲಸದಲ್ಲೂ ನಿರತರಾಗಿದ್ದೆವು... #kannada #chitrodaya #gss ಈ ಟ್ಯಾಗ್ ಗಳನ್ನು ಬಳಸಿ ನಮ್ಮ ಟ್ವೀಟ್ ಗಳನ್ನು ನೋಡಬಹುದು.

ಕೊನೆಗೆ ಜಿ.ಎಸ್.ಎಸ್ ಬಗೆಗಿನ ಸಾಕ್ಷಚಿತ್ರ ಕೂಡ ತೋರಿಸಲಾಯಿತು.. ಈ ಕಾರ್ಯಕ್ರಮವನ್ನು ನೆಡೆಸಿಕೊಟ್ಟವರು "ರಸಿಕ ಕೇಳೋ" ತಂಡದ ಸದಸ್ಯರು. ಅವರಿಗೆ ಅಭಿನಂದನೆಗಳು.

ಈ ಕಾರ್ಯಕ್ರಮದ ಕೆಲವು ತುಣುಕುಗಳನ್ನು (ಬಿ.ಸುರೇಶ್ ಹಾಗೂ ಸಿ.ಆರ್ ಸಿಂಹ ಕಾವ್ಯವಾಚನ ಜೊತೆಗೆ ರಾಷ್ಟ್ರಕವಿ ವಿವರಿಸಿದ "ಕವಿತೆ ಎಂದರೇನು?") ಈ ಕೊಂಡಿಯಲ್ಲಿ ಕೇಳಿ, ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Rating
No votes yet

Comments