ಕಾವೇರಿ ನಿರ್ಲಿಪ್ತವಾಗಿ ಹರಿಯುವ ಜೀವಜಲ

ಕಾವೇರಿ ನಿರ್ಲಿಪ್ತವಾಗಿ ಹರಿಯುವ ಜೀವಜಲ

Comments

ಬರಹ

 


ಈಗ್ಗೆ ಒಂದು ವಾರದ ಹಿಂದೆ, ಪತ್ರಿಕೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಹೇಳಿರುವ ಹೇಳಿಕೆ ವಿಚಿತ್ರವೆನಿಸಿತು. ಕಾವೇರಿಯ ವಿವಾದವನ್ನು ರಾಜಕೀಯ ಮಾಡುವ ಹುನ್ನಾರ. ಅದು ಆಗಲೆ ರಾಜಕೀಯದ ’ಕಪಿ’ಮುಷ್ಠಿಯಲ್ಲಿ ಸಿಕ್ಕಿ ದಶಕಗಳೆ ಕಳೆದೀವೆ. ಕಾವೇರಿ , ಒಂದು ನದಿ ಆಗಿರದೆ , ಎರಡೂ ರಾಜ್ಯಗಳ ಘನತೆ, ಗೌರವ, ಪ್ರತಿಷ್ಠೇ ಆಗಿದೆ. ಇದರ ಲಾಭ ಪಡೆಯುವಲ್ಲಿ ಎರಡೂ ರಾಜ್ಯದ ರಾಜಕಾರಣಿಗಳು ಸಫಲರಾಗಿದ್ದಾರೆ. ದಶಕಗಳೆ ಕಳೆದರೂ ತೀರಿಸಲಾಗದ ಸಮಸ್ಯೆ ಅಂತ ನನಗೆ ಅನ್ನಿಸಲ್ಲ. ಆದರೆ ಈ ತುಚ್ಚ ರಾಜಕಾರಣದ ಸ್ವಾರ್ಥತೆಯಿಂದ ಇನ್ನೂ ದಶಕಗಳೆ ಕಳೆದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಾಯಿಲ್ಲಾ. ಉದ್ರಿಕ್ತ ಹೇಳಿಕೆಗಳನ್ನು ನೀಡಿ ಜನರ ಭಾವನೆಗಳೂಂದಿಗೆ ಸರಸವಾಡೂ, ಅದನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡು, ತನ್ನ ಸ್ಥಾನವನ್ನು ಭದ್ರ ಪಡಿಸುವಲ್ಲಿ ರಾಜಕಾರಣಿ ಶ್ರಮವಹಿಸಿದ್ದಾನೆ ಹೊರತು ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಲ್ಲ.


 ಎರಡು ರಾಜ್ಯದಲ್ಲಿ ಬುದ್ದಿ ಜೀವಿಗಳ ಒಕ್ಕೊಟ ಮಾಡಿ, ಇವರನ್ನು ಹೊರತುಪಡಿಸಿ:


)          ರಾಜಕಾರಣಿಗಳನ್ನು


)          ನಕಲಿ ಸಮಾಜಸುಧಾರಕರನ್ನು


ಯುವಕರು, ಪ್ರೊಫೆಸರ್ಸ್, ನಿರ್ವಹಣೆ ಕಾರ್ಯದಲ್ಲಿ ಮತ್ತು Trouble shooting ನಲ್ಲಿ ಹೆಸರು ಮಾಡಿರುವರು, ಸಮಾಜವನ್ನು ಸಮನಾಗಿ ಕಾಣುವ ಹಿರಿಯರು, ಪತ್ರಕರ್ತರು, ಮತ್ತು ಚಿಂತನಕಾರರನ್ನು ಒಗ್ಗೂಡಿಸಿ ಸಮಸ್ಯೆ ಶುರುವಾದ ಕಾರಣಗಳನ್ನು, ಅದೂ ಬೆಳೆದುಕೊಂಡು ( ಬೆಳೆಸಿಕೊಂಡು) ಬಂದ ಹಾದಿಯ ಚರ್ಚೆ ಮಾಡಿ, ಸೂಕ್ತ ಸಲಹೆಗಳನ್ನ ಪಡೆದು ಸಮಸ್ಯೆಯನ್ನು ಬಗೆಹರಿಸಬಹುದು ಅಂತ ನನ್ನ ವಿಚಾರ.


 ಕಾವೇರಿ ನಿರ್ಲಿಪ್ತವಾಗಿ ಹರಿಯುವ ಜೀವಜಲ. ಈ ಭೂಮಿಯಲ್ಲಿ ಜಾತಿ, ನಾಡು, ಭಾಷೆಯೆಂಬ ಬೇಧ-ಭಾವಗಳನ್ನು ಅರಿಯದ ಪಂಚೇಂದ್ರಿಯ. ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆಯಿತ್ತು. ಅದು ನಿಜವಾದಲ್ಲಿ,ಮುಂದೆ ಇದು ಮೊರು ರಾಜ್ಯದ ಜಗಳವಾಗಬಹುದು. ಅಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet