ಗಾನ ಗಾರುಡಿಗ... ಸುಗಮ ಸಂಗೀತ ಕ್ಷೆತ್ರದ ಕಂಚಿನ ಕಂಠದ ಸರದಾರ ಇನ್ನಿಲ್ಲ.............
ಸುಗಮ ಸಂಗೀತ ಕ್ಷೆತ್ರದ ಮಹಾನ್ ಗಾಯಕ ಸಿ.ಅಶ್ವಥ್ ಇಂದು ಬೆಳಿಗ್ಗೆ ವಿಧಿವಶರಾದರು. ಅವರ ಸಂಗೀತ ಕ್ಷೆತ್ರದ ಸೇವೆಯನ್ನು ನೆನೆಯುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಬೇಡುತ್ತಾ... ಅವರ ಬಗ್ಗೆ ಕಿರು ಪರಿಚಯವನ್ನು ಕೊಡಲು ಪ್ರಯತ್ನಿಸಿರುವೆ. ದಯವಿಟ್ಟು ಒಪ್ಪಿಸಿಕೊಳ್ಳಿ......
1939 ಡಿಸೆಂಬರ್ 29 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜನನ, ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಬಿ.ಎಸ್ಸಿ. ಪದವಿ ಪಡೆದು ಸುಮಾರು 27 ವರ್ಷ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಲೇ ಸುಗಮ ಸಂಗೀತದ ಗೀಳನ್ನು ಬೆಳೆಸಿಕೊಂಡು ಸುಗಮ ಸಂಗೀತದಲ್ಲಿ ಮಹಾನ್ ಗಾಯಕರಾಗಿ ಬೆಳೆದರು. ಸುಮಾರು 75 ಅಲ್ಬಮ್ ಕನ್ನಡ ಭಾವಗೀತೆಗಳ ಮತ್ತು ಕನ್ನಡದ ಪ್ರಸಿದ್ದ ಸಾಹಿತಿಗಳ ಗೀತೆಗಳನ್ನು ಜನಸಾಮನ್ಯರಿಗೆ ತಲುಪುವಂತೆ ರಾಗಸಂಯೋಜನೆ ಮಾಡಿದ ಹೆಗ್ಗಳಿಗೆ ಸಿ.ಅಶ್ವಥ್ ರದು. ಇದಲ್ಲದೆ ತಮ್ಮನ್ನು ತಾವು ರಂಗ ಭೂಮಿಯಲ್ಲು ಮತ್ತು ಚಲನ ಚಿತ್ರ ರಂಗದಲ್ಲು ತೊಡಗಿಸಿಕೊಂಡು ಕಿರುತೆರೆಯ ದಾರವಾಹಿಗಳ ಗೀತೆಗಳನ್ನು ಹಾಡಿ ಕರ್ನಾಟಕ ಜನತೆಯ ಮನೆಮಾತಾದರು.
ಶಿಶುನಾಳ ಶರಿಫರ ಗೀತೆಗಳನ್ನು ಜನಸಾಮನ್ಯರಿಗೆ ತಲುಪುವಂತೆ ಮಾಡಿದ ಹೆಗ್ಗಳಿಗೆ ಸಿ.ಅಶ್ವಥ್ ರದು.
ಅವರ ಕನ್ನಡವೆ ಸತ್ಯ ಸಂಗೀತ ಕ್ಷೆತ್ರದ ದಲ್ಲಿ ಮಾಡಿದ ಮಹತ್ತರ ಮೈಲಿಗಲ್ಲು.. ಬೆಂಗಳೂರಂತ ಊರಲ್ಲಿ ಚಿತ್ರಗೀತೆಗಳಿಲ್ಲದೆ ಕೇವಲ ಭಾವಗೀತೆಗಳನ್ನೊಳಗೊಂಡ ಕಾರ್ಯಕ್ರಮಕ್ಕೆ ನೆರೆದಿದ್ದ ಜನಸಾಗರ ಬರೊಬ್ಬರೀ 1.5 ಲಕ್ಷ. ಅಷ್ಟು ಜನಸಾಗರವನ್ನು ತಮ್ಮ ಕಂಚಿನ ಕಂಠದಿಂದ 3-4 ತಾಸು ಕುಣಿಯುವಂತೆ ಮಾಡಿದ್ದರು.
ಎಂತಾ ವಿಪರ್ಯಾಸ ಹುಟ್ಟಿದ ದಿನದಂದೆ ಜವರಾಯನು ನಮ್ಮೆಲ್ಲರ ಮೆಚ್ಚಿನ ಗಾಯಕನನ್ನು ನಮ್ಮಿಂದ ಅಗಲಿಸಿದ್ದಾನೆ.
ಆವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಬೇಡೋಣ