ಸರಸ-ವಿರಸ

ಸರಸ-ವಿರಸ

ಬರಹ

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ  ’you are my ಸಂಕಟ’ ಅಂದರೆ ಏನು ಮಾಡುವುದು.  ಹೋಗಲಿ,  ಟೀ.ವಿ ಕನ್ನಡದಲ್ಲಿ  "ಹೇನಾಯ್ತು ? " ಅಂತ ಕೇಳಲೇ?  "ಹೇನಿಲ್ಲ" ಅಂದುಬಿಟ್ಟರೆ ? ಸರಿ, ಸರಸವಾಗಿ ಡಾ|ರಾಜ್ ಶೈಲಿಯಲ್ಲಿ "ಕೋಪವೇತಕೇ ನನ್ನಲೀ ಹೇಳುಬಾ ಪ್ರೇಯಸೀ " ಎಂದು ಹಾಡೋಣ ಅಂತ ಹತ್ತಿರ ಹೋದರೆ, ಅವಳ ಮುಖ  "ಬಾರಾ... ಜಗಳಕೆ ಬಾರಾ" ಎಂದು ಹಾಡುವಂತೆ ತೋರಿತು. 
ಇದ್ಯಾವುದೂ ಬೇಡ. ಸರಸದ ಮಾತೇ ಸರಿ ಎಂದು ತೀರ್ಮಾನ ಮಾಡಿ "ನೀ ಸಿಟ್ಟು ಮಾಡಿಕೊಂಡಾಗ ಕೆಂಪು ಕೆಂಪಾಗಿ ಕಾಣೋದು ನೋಡಿ ಮನೆಯಲ್ಲಿ ಟೊಮ್ಯಾಟೋ ಮುಗಿದಿರೋದು ನೆನಪಾಯ್ತು ನೋಡು " ಅಂದೇ ಬಿಟ್ಟೆ. ಸದ್ಯ, ’ನಿಮ್ಮ ಹೊಟ್ಟೆ ನೋಡಿದಾಗಲೆಲ್ಲ ಕುಂಬಳಕಾಯಿ ಹುಳಿ ತಿನ್ನಬೇಕು ಅನ್ನಿಸುತ್ತೆ’ ಅಂತ ಅವಳು ಹೇಳಲಿಲ್ಲ. ನನ್ನ ಆ ಮಾತಿಗೆ ಅವಳು ಇನ್ನೂ ಕೆಂಪಾದಳು. ನಾಚಿಕೆಯಿಂದಲೋ ಅಥವಾ ಹೆಚ್ಚಿನ ಸಿಟ್ಟಿನಿಂದಲೋ ತಿಳಿಯದಾಯಿತು. ಮುಂದುವರೆಸಿದೆ "ಇದನ್ನೇ ಹೇಳೋದು... ಕೆಂಪೇ ಕೆಂಪೋತ್ಪತ್ತಿ:  ಅಂತ ".  ಆಗ ನಿಜಕ್ಕೂ ನಾಚಿಕೆಯ ಕೆಂಪೇರಿ ನಗು ಅಳು ಎರಡೂ ಒಟ್ಟಿಗೆ ಬಂದೇ ಬಿಟ್ಟಿತು. 
"ಈಗಲಾದರೂ ವಿಷಯ ಹೇಳು ಕೆಂಪಮ್ಮಾ " ಅಂದೆ. ನಾರಿ ನುಡಿದಳು "ಇವತ್ತು ಬೆಳಿಗ್ಗೆ ಇಂದ ನಾನೂ ಕಾಯ್ತಾ ಇದ್ದೀನಿ. ನನಗೆ ಶುಭಾಶಯ ಹೇಳಲೇ ಇಲ್ಲ ನೀವು". ಹೌದು, ಈಗಲೂ ಹೇಳಿಲ್ಲ ! ನಾನೇನು ಮಾಡಲಿ ಯಾವುದೋ ತಿಂಗಳು ಯಾವುದೋ ದಿನ ಹುಟ್ಟಿದರೆ ಹೇಗೆ ನೆನಪು ಇರುತ್ತೆ. ಅದೇ, ನಮ್ಮ ಪಕ್ಕದ ಮನೆ ರೋಜ ನೋಡಿ. ಜನವರಿ ಒಂದನೇ ತಾರೀಖು ಹುಟ್ಟಿದಳಂತೆ. ಹಾಗಂತ ಇವಳೇ ಹೇಳಿದ್ದು. ವಿಷಯ ತಿಳಿದಾಗಿನಿಂದ ಪ್ರತೀ ವರ್ಷ ತಪ್ಪದೆ, ಅವಳ ಗಂಡ ಅವಳಿಗೆ ವಿಶ್ ಮಾಡದಿದ್ದರೂ, ನಾನಂತೂ ಮಾಡಿದ್ದೇನೆ. ಹೋಗ್ಲಿ ಬಿಡಿ, ವಿಷಯಕ್ಕೆ ಬರೋಣ. 
ಸಮಾಧಾನ ಮಾಡುವಂತೆ ಹೇಳಿದೆ "ಅಲ್ವೇ, ನನಗೆ ನೆನಪಿಲ್ಲಾ ಅಂತ ಅಂದುಕೊಂಡಿದ್ದೀಯಾ. ಆ ಹಾಳಾದ ಹೂವಿನ ಅಂಗಡಿಯವನಿಗೆ ಬೆಳಿಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಹೂವಿನ ಬುಕೆ ತೆಗೆದುಕೊಂಡು ಬಾ ಅಂತ ನೆನ್ನೆ ಸಂಜೆ ದುಡ್ಡು ಕೊಟ್ಟಿದ್ದೆ. ನೋಡು, ಇನ್ನೂ ಬಂದಿಲ್ಲ. ಅಲ್ಲಾ, ಹೂವಂತಹ ನಿನ್ನ ಮನಸ್ಸನ್ನು ಹೂವಿನಿಂದ ವಿಶ್ ಮಾಡುವುದು ಬಿಟ್ಟು ಬರೀ ಕೈಯಲ್ಲಿ ವಿಶ್ ಮಾಡಲಿಕ್ಕೆ ನಾನೇನು ಬಿಕನಾಸೀನೇ? " ಅಂತ ನನ್ನ ನಾನೇ ಬೈದುಕೊಂಡೆ. ಸೂರ್ಯಕಾಂತಿ ಹೂವಿನಂತೆ ಅರಳಿದ ಅವಳ ಮುಖದಲ್ಲಿನ ಬಾಯಿಂದ ನುಡಿ ಮುತ್ತುಗಳು ಉರುಳಿತು "ಬರೀ ಹೂವಿನ ಬುಕೆ ನಾ". 
ಸಾವರಿಸಿಕೊಂಡು  "ಹೂವಿನ ಬುಕೆ ಇಂದ ಒಂದು ಕೆಂಪು ರೋಜನ್ನು ತೆಗೆದುಕೊಂಡು ಮುಡಿದ ಮೇಲೆ ಹೊರಗಡೆ ಊಟಕ್ಕೆ ಹೋಗೋಣ ಅಂತ ನನ್ನ ಪ್ಲಾನು" ಅಂತ ಇಲ್ಲದ ಪ್ಲಾನು ಹೊರಬಿಟ್ಟೆ. ಅವಳು ಬಿಟ್ಟಾಳೆಯೇ "ಮತ್ತೊಂದು ರೋಸ್ ತೆಗೆದುಕೊಂಡು ನಿಮ್ಮ ಕಿವಿ ಮೇಲೆ ಇಟ್ಕೊಂಡು ಹೋದರೆ ಹೇಗೆ? ಅಲ್ರೀ, ಬೆಳಿಗ್ಗೆ ಸೊಪ್ಪಿನ ಹುಳಿ ಮಾಡು ಅಂತ ಹೇಳಿದ್ದು, ನಾಳೆಗಾ? ". ಥತ್! ಯಾಕೋ ಇವತ್ತು ಎದ್ದ ಘಳಿಗೆ ಚೆನ್ನಾಗಿಲ್ಲ. ಒಂದು ಹೇಳಿದರೆ ಇನ್ನೊಂದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇನೆ.
"ಅಲ್ಲ, ವಿಶಾಲೂ. ನಿನಗೆ ಸೊಪ್ಪಿನ ಹುಳಿ ಇಷ್ಟ ಅಲ್ವಾ. ಅದಕ್ಕೇ ಹೇಳಿದ್ದು" ಅಂದೆ. ವಿಶಾಲೂ "ನನಗೆ ಸೊಪ್ಪು ಇಷ್ಟ ಅಂತ ನಾನೇ ಮಾಡಿಕೊಂಡು ತಿನ್ನಬೇಕಾ. ನೀವು ಮಾಡೋದು ತಾನೇ ? " ಅನ್ನೋದೇ. ಯಾಕೋ ವ್ಯಾಪಾರ ಗಿಟ್ತಾ ಇಲ್ಲ ಅಂತ ಅಂದುಕೊಂಡು "ಸರಿ, ಅದು ಬಿಡು. ಈಗ ಹೇಳು, ಯಾವ ಹೋಟಲ್ಲಿಗೆ ಹೋಗೋಣ ?". ವಿಶಾಲೂ ಹೇಳಿದಳು "ಎಂಟನೇ ಕ್ರಾಸ್’ನಲ್ಲಿರೋ ಜನತಾ ಹೋಟೆಲ್ಲಿಗೆ ಹೋಗೋಣ ? ". ನಾನು ಬಿಗುಮಾನದಿಂದ ನುಡಿದೆ "ಥತ್! ಇಂತಹ ದಿನಾನೂ ನಿನ್ನನ್ನ ಆ ದರಿದ್ರ ಹೋಟೆಲ್ಲಿಗೆ ಕರೆದುಕೊಂಡು ಹೋಗ್ತೀನಾ?  ಬೇರೇ ಕಡೆ ಹೋಗೋಣ". ವಿಶಾಲೂ ಪ್ರತಿ ನುಡಿದಳು "ಅಲ್ರೀ, ಹಾಗಲ್ಲ, ಊಟ ಆದ ಮೇಲೆ ಅಲ್ಲಿಂದ ರಾಜರತ್ನಂ ಜುವೆಲರ್ಸ್’ಗೆ ನೆಡೆದೇ ಹೋಗಬಹುದು. ಸುಮ್ಮನೆ ಆಟೋ ಖರ್ಚು ಇರೋಲ್ಲ. ". ಪಕ್ಕದಲ್ಲೇ ಬಾಂಬ್ ಸಿಡಿದ ಹಾಗೆ ಆಯಿತು.
ಮತ್ತೆ ಸಾವರಿಸಿಕೊಂಡು ನುಡಿದೆ "ಅಲ್ಲಾ, ಇವತ್ತು ಭಾನುವಾರ ಅಲ್ವಾ? ಅಂಗಡಿ ರಜಾ".  ವಿಶಾಲೂ ನುಡಿದಳು "ಹೌದು, ಕಸ್ಟಮರ್ಸ್’ಗೆ ರಜ. ಆದರೆ ಡೆಲಿವರಿ ಕೊಡ್ತಾರೆ". ಇದೇನಪ್ಪ ಹೊಸ ವಿಷಯ ಅಂತ ಮಿಕಿ ಮಿಕಿ ನೋಡಿದೆ. ಅವಳು ಹೇಳಿದಳು "ಹೋದ ವಾರ ಆ ಕಡೆ ಹೋದಾಗ ಒಂದು ಸರ ನೋಡಿದ್ದೇ, ನೀವು ಹೇಳಿದ್ರೀ, ಒಂದು ಒಳ್ಳೇ ದಿನ ಕೊಡಿಸ್ತೀನಿ ಅಂತ. ಜ್ಞ್ನಾಪಕ ಇಲ್ವಾ? ಇದಕ್ಕಿಂತಾ ಒಳ್ಳೇ ದಿನ ಬೇಕಾ ? ನೆನ್ನೆ ಅಂಗಡಿಯವರಿಗೆ ಹೇಳಿ ಬಂದಿದ್ದೆ. ನಾಳೆ ಬರ್ತೀವಿ ತೆಗೆದಿಟ್ಟಿರಿ ಅಂತ. ಹೇಗಿದ್ರೂ ನೀವೂ ರೆಡಿ ಇದ್ದೀರಾ. ಮೊದಲು ಅಂಗಡಿಗೆ ಹೋಗಿ, ಸರ ತೆಗೆದುಕೊಂಡು ಆಮೇಲೆ ಊಟಕ್ಕೆ ಹೋಗೋಣ. ಸದ್ಯ, ಊಟದಲ್ಲಿ ನಿಧಾನ ಆಗಿ ಅಂಗಡಿ ಮುಚ್ಚಿಬಿಟ್ಟಾರು ".
ಮನದಲ್ಲೇ ಹಾಡಿಕೊಂಡೆ "ದಾರಿ ಕಾಣದಾಗಿದೇ ರಾಘವೇಂದ್ರನೇ...". ಇಬ್ಬರೂ ಹೊರಗೆ ಹೊರಟೆವು. ವಿಶೇಷವಾಗಿ ನಾವು ಹೊರಗೆ ಹೊರಟಾಗ ಹೇಗೋ ಕೊನೆ ಮನೆ ಅನಸೂಯಾಬಾಯಿಗೆ ತಿಳಿದು ಹೋಗುತ್ತದೆ. ಅವರೂ ಅದೇ ಸಮಯಕ್ಕೆ ಏನೋ ಕೆಲಸ ಇರುವ ಹಾಗೆ, ಹೊರಗೆ ಬಂದು ನಮ್ಮಿಂದ ವಿಷಯ ತಿಳಿದುಕೊಂಡ ಮೇಲೇನೇ ನಮಗೆ ಮುಂದೆ ಹೋಗಲು ಅನುಮತಿ ಸಿಗುವುದು. ಅಲ್ಲಿಯವರೆಗೆ ಜಪ್ಪಯ್ಯ ಅಂದರೂ ಬಿಡಲ್ಲ. ನನಗೋ ಅವರು ಬಂದರೇ ಆಗೋಲ್ಲ. ನಾನು ಸಿಡಿ ಸಿಡಿ ಅನ್ನುವುದು ಅವರು ಅದನ್ನು ಲೆಕ್ಕಿಸದೆ ಇರುವುದು ಎಲ್ಲ ಮಾಮೂಲು. ಇಂದೂ ಹಾಗೇ ಆಯಿತು. ನಾವು ಹೊರಗೆ ಕಾಲಿಡುತ್ತಿದ್ದಂತೆಯೇ ಅವರೂ ಹಾಗೇ ಸುಮ್ಮನೆ ಹಾದು ಹೋಗುವವರಂತೆ ನಮ್ಮನ್ನು ನೋಡಿ ನಿಂತು ಹಲ್ಲುಗಿಂಜಿದರು. ಇಂದು ಸಿಡಿಗುಟ್ಟುವ ಸರದಿ ವಿಶಾಲೂದು. ನಾನೇ ಹೋಗಿ ಅವರನ್ನು ಮಾತನಾಡಿಸಿದೆ. ಇದನ್ನು ನಿರೀಕ್ಷಿಸದ ಅವರು ಸೀದ ವಿಶಾಲೂ ಬಳಿ ಬಂದು "ರಾಮಣ್ಣಿಗೆ ಬಂದ ಜ್ವರ ವಾಸಿ ಆಯಿತಾ" ಅನ್ನೋದೇ ? 
ವಿಶಾಲೂ ಹೇಳಿದಳು "ಸ್ವಲ್ಪ ಮೈ ಬೆಚ್ಚಗಿದೆ ಅಂತ ಇದ್ದರು. ಅದಕ್ಕೆ ಸ್ವಲ್ಪ ಗಾಳಿಗೆ ತಿರುಗಾಡಿಕೊಂಡು ಬಂದರೆ ಸರಿ ಹೋಗಬಹುದು ಅಂತ ನಾನೇ ಹೊರಡಿಸಿಕೊಂಡು ಹೋಗುತ್ತಿದ್ದೇನೆ".  ಮೈ ಬೆಚ್ಚಗಾದರೆ ಹೊರಗೆ ತಿರುಗಾಡುವುದೇ? ಸುಳ್ಳು ಹೇಳಲಿಕ್ಕೂ ಬರುವುದಿಲ್ಲ ಇವಳಿಗೆ. ಆದರೆ ನನಗೆ ಜ್ವರ ಯಾವಾಗ ಬಂದಿತ್ತು ?  ನಾನು ಏನು ವಿಷಯ ಎಂದು ಸನ್ನೆ ಮಾಡಿ ಕೇಳಿದಾಗ ಅವಳು ನನ್ನನ್ನು ನೂಕಿಕೊಂಡು "ಸುಮ್ಮನೆ ಬನ್ನಿ"  ಅಂತ ಹೊರಡಿಸಿಕೊಂಡು ಹೋದಳು. ಇವತ್ತೇನೋ ಆಗಿದೆ. ಎಂದೂ ಬಿಡದ ಅನಸೂಯಾಬಾಯಿ ಹೆಚ್ಚು ವಿಷಯ ಕೇಳದೆ ನಮ್ಮನ್ನು ಹಾಗೇ ಬಿಟ್ಟುಬಿಟ್ಟರು. ಆಮೇಲೆ ವಿಷಯ ಹೇಳಿದಳು, ಅವರ ಸೊಸೆ ಸೀಮಂತಕ್ಕೆ ನನಗೂ ಊಟಕ್ಕೆ ಹೇಳಿದ್ದರಂತೆ. ಅಲ್ಲಿ ನನಗೇನು ಕೆಲಸ ಅಂತ ಇವಳು ನನಗೆ ಜ್ವರ ಅಂತ ಹೇಳಿದ್ದಳು. ಒಟ್ಟಾರೆ ನನಗೆ ಹಬ್ಬದೂಟ ಮಿಸ್ ಆಯಿತು.
ಅಂತೂ ನಮ್ಮ ಸವಾರಿ ಅಂಗಡಿಯ ಕಡೆ ನೆಡೆದಿತ್ತು. ಮನದಲ್ಲೇ ನೂರು ಬಾರಿ "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಕೇಳಿಕೊಂಡೆ. ಕಣ್ಣಲ್ಲಿ ಕಸವೇನೋ ಬಿತ್ತು ಎಂದು ಉಜ್ಜಿಕೊಂಡಾಗ ಕಣ್ಣಿನ ರೆಪ್ಪೆಯ ಕೂದಲು ಬೆರಳಿಗೆ ಅಂಟಿಕೊಂಡಿತು. "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಮನದಲ್ಲೇ ಮತ್ತೆ ಅಂದುಕೊಂಡು ಅದನ್ನು ಉಫ಼್ ಮಾಡಿದೆ. ಅಂಗಡಿಯ ಬಾಗಿಲಿಗೆ ಹೋದರೆ ..... ಬಾಗಿಲು ಬೀಗ !!!!!!! "ಯುರೇಕಾ" ಎಂದು ಕೂಗಲಿಲ್ಲ ಅಷ್ಟೇ!
ವಿಶಾಲೂ ಅಂಗಡಿಯವನಿಗೆ ಮನದಲ್ಲೇ ನೂರು ಬಾರಿ ಶಾಪ ಹಾಕಿದಳು. ನಾನು ನೂರು ಬಾರಿ ಆಶೀರ್ವಾದ ಮಾಡಿದ್ದೆ. ಅಲ್ಲಿಂದ ಸೀದ ಮನೆ ಕಡೆ ಹೊರಟೆವು. ಹೋಟಲ್ಲೂ ಇಲ್ಲ ಏನೂ ಇಲ್ಲ. ಹೇಗಿದ್ರೂ ಸೊಪ್ಪಿನ ಹುಳಿ ರೆಡಿ ಇತ್ತಲ್ಲ. ಕಣ್ಣುಗಳೆರಡೂ ಕನ್ನಂಬಾಡಿ ಕಟ್ಟೆಯಾಗಿತ್ತು. ಯಾವ ಕ್ಷಣದಲ್ಲಾದರೂ ಕಟ್ಟೆ ಒಡೆದು ನೀರು ಧೋ ಎಂದು ಸುರಿಯುವ ಸ್ಥಿತಿಯಲ್ಲಿತ್ತು. ಮನೆ ತಲುಪಿದ ಕೂಡಲೆ, ಅವಳ ಹುಟ್ಟುಹಬ್ಬಕ್ಕೆಂದು,  ಮೊದಲೇ ಖರೀದಿ ಮಾಡಿಟ್ಟಿದ್ದ ಚಿನ್ನದ ಸರ ತೆಗೆದು, ಅವಳ ಕೊರಳಿಗೆ ಹಾಕಿದೆ. ಈಗ ನಿಜಕ್ಕೂ ಜೋರಾಗಿ ಅಳು ಬಂದಿತ್ತು. ಒಳ್ಳೇದಕ್ಕೂ ಅಳು ಕೆಟ್ಟದಕ್ಕೂ ಅಳು. ನನಗೆ ಅರ್ಥವೇ ಆಗೋಲ್ಲ.
ಈಗ ನಿಜಕ್ಕೂ ಕೇಳಿದೆ "what is your ಸಂಕಟ ? ಸರ ಚೆನ್ನಾಗಿಲ್ವಾ? " ಅಂತ. ಏನೋ ಹೇಳಲಿಕ್ಕೆ ಬಾಯಿ ತೆರೆದಳು ಆದರೆ ಅದೇ ಸಮಯಕ್ಕೆ ಯಾರೋ ಬಾಗಿಲು ಬಡಿದರು. ತೆರೆದ ಬಾಯಿ ಮುಚ್ಚಿ, ಮುಚ್ಚಿದ್ದ ಬಾಗಿಲು ತೆರೆಯಲು, ಅಲ್ಲಿ ಅಂಗಡಿಯವನು ನಿಂತಿದ್ದ. "ಸಾರಿ ಮೇಡಮ್, ಬೇರೇ ಕೆಲಸ ಇತ್ತು ಅಂತ ಅಂಗಡಿ ಬೇಗ ಮುಚ್ಚಿದೆ. ಆದರೆ ಖಾಯಂ ಗಿರಾಕಿ ನೀವು ಅಂತ ನಿಮ್ಮ ಆರ್ಡರ್ ಮನೆಗೇ ತಲುಪಿಸೋಣ ಅಂತ ಬಂದೆ. ಇವತ್ತು ಸ್ಪೆಶಲ್ಲು ದಿನ ಅಲ್ವಾ.........." ನಮ್ಮ ಮನೆ ವಿಷಯ ನಮಗಿಂತಲೂ ಹೊರಗಿನವರಿಗೆ ಚೆನ್ನಾಗಿ ಗೊತ್ತಿರುತ್ತೆ.
ಅವನು ತಂದುಕೊಟ್ಟ ಪ್ಯಾಕೆಟ್ ತೆರೆದು ಅದರಿಂದ ಒಂದು ಡಬ್ಬಿ ಹೊರತೆಗೆದಳು. ನನ್ನೆದೆ ಇನ್ನೂ ಜೋರಾಗಿ ಹೊಡೆದುಕೊಳ್ಳಲು ಶುರು ಮಾಡಿತ್ತು. ನಾನು ಸರ್ಪ್ರೈಸ್ ಮಾಡಲು ತಂದಿದ್ದರೆ ಇವಳು ಇನ್ನೊಂದು ತೆಗೆದಿಟ್ಟು ಕೊಂಡಿದ್ದಾಳೆ. ಡಬ್ಬಿಯಿಂದ ಒಂದು ಉಂಗುರ ಹೊರತೆಗೆದು, ನನ್ನ ಬೆರಳಿಗೆ ತೊಡಿಸಿ "happy anniversary" ಅಂದಳು !!!!! 
ಅಂದರೇ,  ಇಂದು ಅವಳ ಹುಟ್ಟಿದಹಬ್ಬ ಅಲ್ಲಾ ! ನಾನು ಹುಟ್ಟಿದಹಬ್ಬ ಅಂತ ಸರ ತಂದಿದ್ದೆ. ಮುಂಚೇನೇ ಗೊತ್ತಿದ್ದರೆ ಏನು ದೊಡ್ಡ ಸರ ತರ್ತಾ ಇದ್ನೇ ?  ಇಂದು ನಮ್ಮ ಮದುವೆಯಾದ ದಿನ. ಇಬ್ಬರೂ ಒಬ್ಬರಿಗೊಬ್ಬರು ಸರ್ಪ್ರೈಸ್ ಮಾಡಿಕೊಂಡಿದ್ದೆವು ! ಕಡೆಗೂ ನನ್ನೆದೆಗೆ ಒರಗಿ "ಅಲ್ರೀ, ಇವತ್ತು ನಮ್ಮ ಮದುವೆಯಾದ ದಿನ ಅಂತ ಗೊತ್ತಿದ್ದೂ ನಾಟಕ ಆಡಿದಿರಾ" ಅಂದಳು. ನಾನು ನುಡಿದೆ "ಖಂಡಿತಾ ನೆನಪಿರಲಿಲ್ಲ. ಸಾಮಾನ್ಯವಾಗಿ ನಾನು ದುರ್ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ" !!!

ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು,  ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.