ರಜೆ ಸಿಗದಿದ್ದಾಗ ಖ್ಯಾತನಾಮರ ಸಾವಿಗೆ ಮರುಗುವರೆಷ್ಟು ಜನ !!!
ಬೆಳಿಗ್ಗೆ ಆಫೀಸಿಗೆ “ವಿಷ್ಣುವರ್ಧನ್”ರ ಸಾವಿನ ನೋವಲ್ಲಿ ಹೋರಟಿದ್ದೆ. ಹೋಗುವಾಗ ಸಿಗ್ನಲ್ನಲ್ಲಿ ಬೈಕ್ ಸವಾರರು ಮಾತಾಡುವುದು ಕೇಳಿ ಮನಸ್ಸು ಕಲಕಿ ಹೋಯಿತು. “ಛೆ ನಮ್ಮ ಸರಕಾರಕ್ಕೆ ತಲೆನೆಯಿಲ್ಲ. ಇಂತಹ ಮೇರು ನಟ ಸತ್ತಾಗೂ ರಜೆ ಕೊಡಲಿಲ್ಲಾ. ಒಂದು ರಜೆ ಕೊಟ್ಟಿದ್ರೆ ಇವರ ಗಂಟೆನುಹೋಗುತ್ತಿತ್ತು. ಕರುಣೆಯಿಲ್ಲದ, ಗೌರವವಿಲ್ಲದ ಸರಕಾರ”. ನಂತರ ಇಬ್ಬರು ನಗುತ್ತಾ ಸಿಗ್ನಲ್ನಲ್ಲಿ ಹಸಿರು ದೀಪ ಹತ್ತುವ ಮೊದಲೇ ಚಲಿಸಿದರು.
ಇದರಲ್ಲಿ ಕರುಣೆಯಿಲ್ಲದವರು, ಗೌರವವಿಲ್ಲದವರು ಯಾರೂ? ಗಣ್ಯರ ಸಾವಿಗೆ ತಲೆ ಕೊಡುವ ಮಂದಿ ಇರುವಾಗ, ಇಂತಹವರ ಮಾತು ಕೇಳಿ ನೋವಾಗುವುದು ಸಹಜ. ರಜೆ ಇಲ್ಲದಿದ್ದರೆ “ಖ್ಯಾತನಾಮರ ಸಾವಿಗೆ” ಮರುಗುವರೆಷ್ಟು ಜನ ಎಂಬ ಅನುಮಾನ ನನ್ನನು ಕಾಡುತ್ತಲಿತ್ತು.
Rating