ಪುರಾಣದಲ್ಲೂ ನಡೆಯಿತೆ ಮ್ಯಾಚ್ ಫಿಕ್ಸಿಂಗ್?

ಪುರಾಣದಲ್ಲೂ ನಡೆಯಿತೆ ಮ್ಯಾಚ್ ಫಿಕ್ಸಿಂಗ್?

ಮ್ಯಾಚ್ ಫಿಕ್ಸಿಂಗ್ ಎಂದು ಕೇಳಿದ ಕೂಡಲೇ ನೆನಪಿಗೆ ಬರುವುದು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ . ಆದರೆ ಕ್ರಿಕೆಟಿನಂತೆ ಇತರ ಕ್ರೀಡೆಗಳಲ್ಲೂ ಮ್ಯಾಚ್ ಫಿಕ್ಸಿಂಗ್ ಇರುವ ವಿಚಾರ ಹಲವರಿಗೆ ಗೊತ್ತಿರುವುದಿಲ್ಲ ಅಥವಾ ಪ್ರಚಾರ ಪಡೆದಿರುವುದಿಲ್ಲ.
ಈಗ ನಾನು ಹೇಳುತ್ತಿರುವ ಫಿಕ್ಸಿಂಗ್ ಆಧುನಿಕ ಕ್ರೀಡೆಯದಲ್ಲ. ಪುರಾಣದಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್.
ಮೊದಲು ಮಹಾಭಾರತದಿಂದ ಪ್ರಾರಂಭಿಸುವ: -
ಇಲ್ಲಿ ಪಾಂಡವರು ಹಾಗೂ ಕೌರವರ ನಡುವೆ ಕುರುಕ್ಷೇತ್ರದಲ್ಲಿ ಯುದ್ಧ ನಡೆಯುತ್ತಿದೆ. ಭೀಷ್ಮರು ಇಚ್ಛಾಮರಣಿಯಾದ ಕಾರಣ, ಕೌರವರು ಯುದ್ಧದಲ್ಲಿ ಗೆಲ್ಲಬೇಕಿತ್ತು. ಆದರೆ ಪಾಂಡವರು ಗೆದ್ದದ್ದು ಹೇಗೆ?
ಇಲ್ಲಿ ಪಿತಾಮಹ ಭೀಷ್ಮಾಚಾರ್ಯರಿಗೆ ತಾವು ಯುದ್ಧದಲ್ಲಿ ಮಡಿದರೆ ಮಾತ್ರ ಪಾಂಡವರಿಗೆ ಗೆಲುವು ಖಚಿತ ಎಂದು ತಿಳಿದಿತ್ತು. ತಮ್ಮನ್ನು ಭೇಟಿಯಾಗಲು ಬಂದ ಪಾಂಡವರಲ್ಲಿ ಶಿಖಂಡಿಯನ್ನು ಎದುರು ನಿಲ್ಲಿಸಿ ಯುದ್ಧ ಮಾಡಿದರೆ ತಾನು ಯುದ್ಧ ಮಾಡುವುದಿಲ್ಲ ಎಂದರು. ಇದು ಮ್ಯಾಚ್ ಫಿಕ್ಸಿಂಗ್ ನಂ.೧
ಇನ್ನೊಂದು ಪ್ರಸಂಗ, ಗುರು ದ್ರೋಣಾಚಾರ್ಯರು ಇವರಿಗೆ ತಮ್ಮ ಮಗ ಅಶ್ವತ್ಥಾಮ ಚಿರಂಜೀವಿ ಎಂಬುದು ತಿಳಿದ ವಿಷಯ. ಆದರೂ ಯುದ್ಧದಲ್ಲಿ ಭೀಮನ ಹುಂಕಾರ ಹಾಗೂ ಯುಧಿಷ್ಠಿರ ಹೇಳಿಕೆಯನ್ನು ಕೇಳಿ ತಮ್ಮ ದೇಹ ತ್ಯಾಗ ಮಾಡಿದರು. ಇದು ಮ್ಯಾಚ್ ಫಿಕ್ಸಿಂಗ್ ನಂ.2
ಹೀಗೆ ಇವರಿಬ್ಬರು ಪಾಂಡವರೊಂದಿಗೆ ಫಿಕ್ಸಿಂಗ್ ಮಾಡಿ ಕೌರವ ಸುಯೋಧನನ ಸೋಲಿಗೆ, ಸಾವಿಗೆ ಕಾರಣರಾದರು.
ಇನ್ನು ರಾಮಾಯಣದಲ್ಲಿ:-
ರಾವಣನ ತಮ್ಮನಾದ ವಿಭೀಷಣ ರಾಮನೊಂದಿಗೆ ಸೇರಿ ರಾವಣನ ಸಾವಿಗೆ ಕಾರಣನಾಗಿ ನಂತರ ತಾನು ಲಂಕೆಯನ್ನು ಆಳಿದನು. ವಿಭೀಷಣನಿಗೆ ರಾವಣನನ್ನು ಮಾನವರಲ್ಲದೆ ಇತರರು ಸಾಯಿಸಲಾರರು ಎಂಬ ವಿಷಯ ಗೊತ್ತಿತ್ತು. ಹಾಗೆ ರಾಮನೊಂದಿಗೆ ಯುದ್ಧ ಸನ್ನಿತವಾದಾಗ ತಾನು ರಾಮನ ಪಕ್ಷ ವಹಿಸಿದನು. ಇದು ಮ್ಯಾಚ್ ಫಿಕ್ಸಿಂಗ್ ನಂ.೩
ಇನ್ನು ಮಿಕ್ಕಿದನ್ನು ನೀವೇ ಪುರಾಣದಲ್ಲಿ ಹುಡುಕಿರಿ. . .

Rating
No votes yet