ಮಂಕುತಿಮ್ಮನ ಕಗ್ಗ ----- ಅತೀಯಾಗಿ ಕಾಡುತಿರುವ ನಾಲ್ಕು ಸಾಲುಗಳು
ಹಳೆಬೇರು - ಹೊಸತಳಿರು
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ
ಹಳದೆಂದು ನೀನದನು ಕಳೆಯುವೆಯ, ಮರುಳೆ ?
ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ?
ಹಳೆ ಬೇರು ಹೊಸ ತಳಿರು - ಮಂಕುತಿಮ್ಮ
ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು. ನೀನು ಅದನ್ನು ಹಳೆಯದೆಂದು ಹಳಿಯುವುದು ಮೊರ್ಖತನವಾದೀತು. ತಳಪಾಯವೇ ಮುಂದಿನ ಬೆಳೆವಣೆಗೆಗೆ ಸಹಕಾರಿಯಲ್ಲವೆ. ಹಳೆಯ ಮರದ ಬೇರಿದ್ದರಲ್ಲವೆ ಹೊಸಚಿಗುರು ಮೊಡುವುದು.
ಹೊಸ ವರುಷದ ಆಚರಣೆಯಲ್ಲಿದ್ದಾಗ ಯಾಕೋ ಈ ಸಾಲುಗಳು ನೆನಪಾದವು ...........
ಹೊಸ ವರುಷದ ಹಾರ್ದಿಕ ಶುಭಾಷಯಗಳು !!!!!
Rating