ಸಾಗಲಿ ಜೀವನ ಯಾನ

ಸಾಗಲಿ ಜೀವನ ಯಾನ

 


ಸಾಗಲಿ ಜೀವನ ಯಾನ 


 ಆಸೆ ಮೊಡಿದ ಮುತ್ತಿನ ಕ್ಷಣ


ಕನಸಿನ ಹಕ್ಕಿಯು ಹಾಡಿದ ಗಾನ


ನೂರು ಕನಸುಗಳ ಹೊತ್ತ ದಿನ


ಸಾವಿರ ಭಾವಗಳ ಸುಪ್ತ ಮನ


   ಇದುವೇ ಜೀವನ, ಬಾಳಿನ ಪಯಣ !


ಕಲಿಕೆಯು ಇದರ ಅಡಿಪಾಯ


ಕಾಯಕ ಇದರ ಸ್ವರೂಪವು


ತಿಳಿಯುವ ಗುಟ್ಟು ನೂರೆಂಟು


ಆದರೂ ಬಿಡಿಸಲಾಗದ ಕಗ್ಗಂಟು


ಇದುವೇ ಜೀವನ, ಬಾಳಿನ ಪಯಣ !


ಅರಿವೆಗೆ ಬಾರದ ತಿರುವುಗಳು


ಎಂದೂ ಮರೆಯದ ನೋವುಗಳು


ಆದರೂ ಬಾಳುವ ಕಾತರ


ಏನೋ ತಿಳಿಯದ ಆತುರ


ಇದುವೇ ಜೀವನ, ಬಾಳಿನ ಪಯಣ !


 ಬಯಸದ ಭಾವನೆಗಳ ನಂಟು


ಮರೆತ ನೆನಪುಗಳ ಇಡಿಗಂಟು


ಕಾಡುತ ಸಾಗುವ ದಾರಿಯಲಿ


ಅರಿಯದೆ ತೊರುವ ದಿಕ್ಕುಗಳು


ಇದುವೇ ಜೀವನ, ಬಾಳಿನ ಪಯಣ !


ಏರಿಳಿಯುವ ತೆರೆಗಳಿಗುಂಟು ದಡವು


ಉರಿಯುವ ಧರೆಗುಂಟೂ ತಂಪಿನ ಮಳೆಯು


ಪ್ರತಿ ನೋವಿನ ಕೊನೆ ಸುಖವು


ಶಿಸ್ತು, ಸಂಯಮ, ಧೈರ್ಯ,


ಇವುಗಳು ನಮ್ಮಯ ಶಕ್ತಿಯು


ಇದುವೇ ಜೀವನ, ಬಾಳಿನ ಪಯಣ ! ಸಾಗಲಿ ಜೀವನ ಯಾನ !! 


ನನ್ನ "ಒಲವ ಮಾತುಗಳು ..... ನೀ ಕೇಳದೇಯೇ ಹೋಗುವೆಯಾ ??"  ಕವನ ಸಂಕಲನದಲ್ಲಿನ ಕವಿತೆ .


http://pothi.com/pothi/preview?pFile=659#preview-top


 


 

Rating
No votes yet