ಮರೆಯಾದವಳು ...
ಬರಹ
ಸುರಿಯುವ ಮಳೆಯಲ್ಲೂ, ಮಂಜು ಮಸುಕಲ್ಲೂ
ರಣಬಿಸಿಲಲ್ಲೂ ಕೈ ಹಿಡಿದು ನಡೆಸಿದವಳು
ಸುಮ್ಮನೆ ನಿಂತವಳು
ಹಿಂತಿರುಗಿ ನೋಡದೆ
ಕಣ್ಣಿಂದ ಮರೆಯಾದಳು.
ಇರುಳಲ್ಲೂ, ಹಗಲಲ್ಲೂ ಅವಳದೇ ದ್ಯಾನ
ರಾತ್ರಿ ತಾರೆ ಸಮೂಹದಲ್ಲೂ
ಅವಳಿಗಾಗಿ ಹುಡುಕಾಟ
ಯಾವದೋ ಶಕುನದ ಕೈಯಲ್ಲಿ ಸಿಲುಕಿ ಮರೆಯಾಗಿ ಹೋದಳು.
ಕಾರಣವೂ ಹೇಳದೆ, ಕಾರಣವೂ ಇಲ್ಲದೆ
ಆ ಬೊಗಸೆ ಕಣ್ಗಳಲ್ಲೆ, ಕಿರುನಗೆ ಬೀರಿ
ಅದೆಲ್ಲೋ ಹಾರಿಹೋದಳು ಮಂದಹಾಸಬೀರಿ
ಸಾಲದೆ ಮೋಡಿಯಲ್ಲಿ ಮರೆಯಾದಳು
ಆ ಬೆಳದಿಂಗಳಲ್ಲೂ ಕಾಯುತ್ತಿದ್ದೆ
ಸುರಿಯುವ ಮಳೆಯಲ್ಲೂ ನೆನೆಯುತ್ತಿದ್ದೆ
ಸುಡುವ ಬಿಸಿಲಲ್ಲೂ ಸುಡುತ್ತಿದ್ದೆ
ಚಳಿಯಲ್ಲೂ ಅವಳ ನೆನೆದು ನಡುಗುತ್ತಿದ್ದೆ
ಬೊಗಸೆ ಕಂಗಳಲ್ಲಿ ಪ್ರೀತಿ ತುಂಬಿ ಎಲ್ಲಿ
ಮರೆಯಾಗಿ ಹೋದಳು .....
ಕೃಪೆ - ಮಂಡೀರ ದಿವ್ಯಾ, ಮಡಿಕೇರಿ
ಇಂದಿನ ದಿನಪತ್ರಿಕೆಯೊಂದರಲ್ಲಿ ಬಂದ ಕವನ, ಏಕೋ ಸಂಪದಿಗರೊಂದಿಗೆ ಹಂಚೋಣವೆಂದೆನಿಸಿತು.