ಮನದ ತಳಮಳ !!
ಚಿಗುರು ಮನವನು
ಚಿವುಟಿ ಬಂತು,
ಮನದ ಮುಗ್ಧತೆಯನು
ಕೊಚ್ಚಿ ತೊಳೆದು
ಸುಪ್ತ ಕಾಮನೆಯು
ಗರಿಗೆದರಿ ನಲಿದು
ಯೌವನದ ಹರವು
ಧರೆಯುಕ್ಕಿ ಹರಿಯಿತು
ಶಾಂತ ಮನಕೆ
ಕಿಚ್ಚು ಹಚ್ಚಿ
ಸಹಜ ಸೌಂದರ್ಯ ಅದ್ಭುತವಾಗಿ
ಮನದ ಅರಗಿಣಿಗೆ
ಅರಸುತ ಹೊರಟಿತು
ಹುಚ್ಚು ಮನಸಿನ ಗುಪ್ತಗಾಮಿನಿ
ಅರಸಿ ಹೊರಟಿತೇ ಮನದ ತಳಮಳ ? ? !!!!!!
Rating