ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ
ರವೀಂದ್ರ ಕಲಾಕ್ಷೇತ್ರದ ಬಳಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಮೇಳ ನಡೆಯುತ್ತಿದೆ. ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರುತ್ತಿದ್ದಾರೆ.
ನಿನ್ನೆ ಶನಿವಾರ ನಾವು ಇಲ್ಲಿಗೆ ಹೋಗಿದ್ದೆವು. ಮುಖ್ಯವಾಗಿ ಮೈಸೂರು ಪ್ರಸಾರಾಂಗ, ಹಂಪಿ ವಿಶ್ವವಿದ್ಯಾನಿಲಯದ ಸ್ಟಾಲುಗಳಿಗೆ ಭೇಟಿ ಕೊಡದೆ ಬರುವಂತಿಲ್ಲ. ಏಕೆಂದರೆ ಅಲ್ಲಿರುವ ಸುಮಾರು ಪುಸ್ತಕಗಳು ಚೆಂದ ಇರೋದಷ್ಟೇ ಅಲ್ಲ, ಬೆಲೆ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ಐದು ರೂಪಾಯಿ, ನಾಲ್ಕು ರೂಪಾಯಿ, ಏಳು ರೂಪಾಯಿ... ಹೀಗೆ! ಅದೂ ಒಳ್ಳೆಯ ಪುಸ್ತಕಗಳು (ಮತ್ತೆಲ್ಲೂ ಸಿಗದ ಪುಸ್ತಕಗಳು ಕೂಡ).
ನಿನ್ನೆ ನಾನು ಕೊಂಡ ಪುಸ್ತಕಗಳು:
ಕನ್ನಡ ಗದ್ಯಾವಲೋಕನ - ಬಸವಾರಾಧ್ಯ
ಕರ್ಣಾಟಭಾರತ ಕಥಾಮಂಜರಿ
ಗಾಳಿಹೆಜ್ಜೆ ಹಿಡಿದ ಸುಗಂಧ - ಕುಸುಮಾಕರ ದೇವರಗೆಣ್ಣೂರ
ಕನ್ನಡ ಸಾಹಿತ್ಯ ಪರಿಷತ್ತು ಸಂಕ್ಷಿಪ್ತ ಕನ್ನಡ ನಿಘಂಟು
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಲೇಖನಗಳ ಸೂಚಿ
ಐದು ಮೂಕ ನಾಟಕಗಳು - ಶ್ರೀನಿವಾಸರಾಜು
ವಿಜಯದಾಸರು - ಪ್ರಸಾರಾಂಗ ಪ್ರಚಾರ ಪುಸ್ತಕ ಮಾಲೆ
ತೀರ್ಥಹಳ್ಳಿ ಸುತ್ತಿನ ಲಾವಣಿಗಳು - ಎ ಹಿರಿಯಣ್ಣ
ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು - ಮೈಲಹಳ್ಳಿ ರೇವಣ್ಣ
ಕನ್ನಡ ಶಾಸನಗಳು - ಡಾ. ಬಾ. ರಾ. ಗೋಪಾಲ
ತಮಿಳುನಾಡಿನ ಕನ್ನಡ ಶಾಸನಗಳು - ಡಾ. ಪಿ. ವಿ. ಕೃಷ್ಣಮೂರ್ತಿ
ವಿಶ್ವವಿದ್ಯಾನಿಲಯದ ಪ್ರಸಾರಾಂಗ - ಡಾ. ಕೆ ವಿ ಪುಟ್ಟಪ್ಪ
ಫ್ರಾನ್ಜ್ ಕಾಫ್ಕ - ಎಲ್ ಎಸ್ ಶೇಷಗಿರಿರಾವ್
ಕೃಷಿ ಮತ್ತು ಪೇಟೆಂಟ್ - ಡಾ. ಟಿ ಎಸ್ ಚನ್ನೇಶ್
ಶ್ರೀ ವ್ಯಾಸರಾಯರ ಕೃತಿಗಳು - ಡಾ. ಟಿ ಎನ್ ನಾಗರತ್ನ
ಹಾಸ್ಯ - ಪ್ರೊ. ಎಸ್ ವಿ ರಂಗಣ್ಣ
ಜೊತೆಗೆ ಪಕ್ಕದಲ್ಲೇ ಇರುವ ಪ್ರಾಧಿಕಾರದ ಎಂದಿನ ಪುಸ್ತಕ ಮಳಿಗೆಯಲ್ಲಿರುವ ಎಲ್ಲ ಪುಸ್ತಕಗಳಿಗೆ ೧೫% ರಿಯಾಯಿತಿ ಇದೆ. ಕೆ ಎಸ್ ನರಸಿಂಹಸ್ವಾಮಿಯವರ ಸಮಗ್ರ ಕಾವ್ಯದ ಎರಡು ಪುಸ್ತಕಗಳು ಬಂದಿವೆ. ಚೆಕ್ ಮಾಡಿ. ನಾನು ಕೊಂಡು ತಂದೆ. ನಾವು ಅಲ್ಲಿ ಹೋದಾಗ ಸಂಸದಲ್ಲಿ ಭಾವಗೀತೆ ಕಾರ್ಯಕ್ರಮ ಕೂಡ ಇತ್ತು. ಶಿವಮೊಗ್ಗ ಸುಬ್ಬಣ್ಣ ಹಾಗು ಜೊತೆಗಿದ್ದ ಕಲೆಗಾರರು ಕೆಲವು ಭಾವಗೀತೆಗಳನ್ನು ಹಾಡುತ್ತಿದ್ದರು.
(ಚಿತ್ರ: ಮೊಬೈಲ್ ಫೋನು ಬಳಸಿ ತೆಗೆದದ್ದು)
Comments
ಉ: ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ
In reply to ಉ: ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ by vinutha.mv
ಉ: ರವೀಂದ್ರ ಕಲಾಕ್ಷೇತ್ರದಲ್ಲಿ ಪುಸ್ತಕ ಮೇಳ