ಹೊಸ-ವರ್ಷ (೨೦೧೦) ಮೊದಲ ರವಿವಾರದಂದು ನನ್ನ ಕೈಬರಹ ಉತ್ತಮವಾಗಿದೆ ಅನ್ನಿಸಿದೆ !
ನಾವು ಸುಮಾರು ೧೦ ವರ್ಷಗಳಿಂದೀಚೆಗೆ, ಹೆಚ್ಚುಕಡಿಮೆ, ಕನ್ನಡದ ಸುಂದರ ಅಕ್ಷರಗಳಲ್ಲಿ ಬರೆಯುವುದನ್ನು, ಪತ್ರವ್ಯವಹಾರ ಮಾಡುವುದನ್ನು, ಬಿಟ್ಟೇ ಬಿಟ್ಟಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಸಮಯದ ಅಭಾವವೊಂದಾದರೆ, ಅದರ ಅವಶ್ಯಕತೆಇಲ್ಲವೇನೋ ಎಂದು ನಾವೇ ಅಂದುಕೊಂಡು ನಮ್ಮ ತಾಯ್ನುಡಿಯನ್ನು ಕಡೆಗಾಣಿಸಿ ಬದುಕಲು ಸಾಧ್ಯವೇ. ಅದನ್ನು ಉಳಿಸಿ-ಬೆಳಸಿ ನಮ್ಮ ಮುಂದಿನ ಪೀಳಿಗೆಗೆ ಸ್ಥಾನಾಂತರಿಸುವ ಗುರುತರ ಜವಾಬ್ದಾರಿ ನಮ್ಮಮೇಲಿಲ್ಲವೇ ?
ಒಂದುಕಡೆ, ’ಶೈನಾ ಕನ್ನಡ ಕೈಬರಹದ ಪತ್ರಿಕೆ,’ ಜನ್ಮತಾಳಿ, ಹಲವಾರು ಕನ್ನಡ-ಪ್ರೇಮಿಗಳ ಮನಪಸಂದ್ ಕನ್ನಡ ಅಕ್ಷರಗಳಲ್ಲಿ, ಲೇಖನಗಳು ಬರುತ್ತಿವೆ. ಸಾವಿರಾರು ಜನ ಕನ್ನಡಿಗರು, ತಮ್ಮ ಮಾತೃ-ಭಾಷೆಯಲ್ಲಿ ಪತ್ರವ್ಯವಹಾರಮಾಡಲು ಹಾತೊರಿಯುತ್ತಿರುವುದು ಕಾಣಬರುತ್ತಿದೆ ! ಇದು ಒಂದು ಧನಾತ್ಮಕ ಬೆಳವಣಿಗೆಗಳಲ್ಲೊಂದು !
ಕನ್ನಡದಲ್ಲಿ ಬರೆಯಲು ಕುಳಿತಾಗ ಏನಾದರೂ ಹೊಸದೊಂದನ್ನು ಕೊಡುವ ಯೋಚನೆ ಬರುತ್ತಿತ್ತು. ಆದರೆ, ಅದನ್ನು ಓದುವ ಹವ್ಯಾಸ ವಿರುವವರು, ಸಂಪದದಲ್ಲಿ ಕಾಣಿಸುತ್ತಿಲ್ಲವೋ ಅಥವಾ ಇದ್ರಿಂದ ಪ್ರಯೋಜನ ಆದೃ ಏನು ಎನ್ನುವ ಮನೋಭಾವವೂ ಆವರಿಸಿರುವಂತೆ ತೋರುತ್ತಿದೆ. ಕೊನೆಯ ಪಕ್ಷ ಮನೆಪೂರ್ತಿಯಾದರೂ ಸ್ವಲ್ಪ ಪತ್ಗ್ರವ್ಯವಹಾರ, ವರ್ಷಕ್ಕೊಮ್ಮೆ ಕಳಿಸುವ ಹೊಸವರ್ಷ, ಯುಗಾದಿ, ದೀಪಾವಳಿ ಹಬ್ಬದ ಶುಭಾಷಯಗಳನ್ನಾದರೂ ಚಿಕ್ಕದಾಗಿ ಚೊಕ್ಕಕನ್ನಡದ ಅಕ್ಷರಗಳಲ್ಲಿ ಬರೆಯಬಾರದೇಕೆ ?
ಶೈನಾಪತ್ರಿಕೆ ಹೊಸದನ್ನೇನೂ ಹೇಳುತ್ತಿಲ್ಲ. ಮರೆತಮಾತನ್ನು ನೆನಪಿಗೆ ತರುತ್ತಿದೆ. ಆದರೆ ಅದು ಮಾಡುತ್ತಿರುವ ಕೆಲಸ ಅನನ್ಯ !
ಮೊದಲಿಗೆ, 'ಸುಧಾ ಕನ್ನಡ ವಾರಪತ್ರಿಕೆ' ಯಲ್ಲಿ ಪ್ರಕಟಿತವಾದ 'ಹೊಸವರ್ಷದ ಉಪಲಬ್ಧಿ ಮತ್ತು ವಿಚಾರ ವಿಶ್ಲೇಷಣೆ' ಯನ್ನು ನಾನು ನನ್ನ ಕೈಬರಹದಲ್ಲಿ ಬರೆದಿದ್ದೇನೆ. ತಾವೆಲ್ಲಾ ಇದರಲ್ಲಿ ಭಾಗವಹಿಸುವುರೆಂದು, ನಂಬುತ್ತೇನೆ.