ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!
ಸಖೀ,
ಬಾನ ಚಂದಿರನೀ ಭುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು
ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು
ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು
ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು
ಕಚೇರಿಯಿಂದ ದೊರೆತ ಹತ್ತು ದಿನಗಳ ವರ್ಷಾಂತ್ಯದಾ ರಜೆ
ಕಳೆದಾದ ಮೇಲೆ ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ
ಹತ್ತು ದಿನಗಳನ್ನು ಕಳೆದೆವು ಹತ್ತು ಕ್ಷಣಗಳಂತೆ ಮಗಳೊಂದಿಗೆ
ನಡುವೆ ಅಗಲಿದರು ನಮ್ಮೆಲ್ಲರ ಮನ ಗೆದ್ದಿದ್ದಿಬ್ಬರು ದೇವರೂರಿಗೆ
ಮತ್ತೀಗ ಭಾರವಾದ ಹೃದಯವ ಹೊತ್ತು ಬಂದಿಹೆನು ಕಚೇರಿಗೆ
ಬಾರದಿರಲು ಆಗದು ತಿಂಗಳ ಸಂಬಳ ಬೇಕೇ ಬೇಕಲ್ಲ ಖರ್ಚಿಗೆ
ಈ ಯಾಂತ್ರಿಕ ಬಾಳಿನ ಸೂತ್ರ ಇಹುದು ಯಾರದೋ ಕೈಯಲ್ಲಿ
ಆತನು ಆಡಿಸಿದಂತೆ ಏಳು ಬೀಳಿನ ನಡೆ ನಮ್ಮದೀ ಭೂಮಿಯಲ್ಲಿ!!!
***********************************
- ಆತ್ರಾಡಿ ಸುರೇಶ ಹೆಗ್ಡೆ
Rating