ಮನುಷ್ಯರ ಸ್ವಭಾವ

ಮನುಷ್ಯರ ಸ್ವಭಾವ

ಬರಹ

 

                                            ಮನುಜರ ನೀತಿ

ತಿನ್ನಲಿಕ್ಕೆ ಇಲ್ಲದಿರುವಾಗ ಮನುಷ್ಯರು ಬಹಳ ದೈನ್ಯದಿಂದಿರುವರು,ಗೌರವವನ್ನು ಲಕ್ಷಿಸುವುದಿಲ್ಲ.  ಅನುಕೂಲ ಹೊಂದಿರುವರಾದರೋ

ಯಾರಾದರೂ ತಮ್ಮನ್ನು  ನೋಡಿದ ಮಾತ್ರಕ್ಕೇ ಕೋಪಿಸಿಕೊಳ್ಳುವರು, ಮಾತನಾಡಿಸಿದರೆ ಗರ್ವದಿಂದ ಉಬ್ಬಿಹೋಗುವರು,

ಮದವೇರಿ ತಲೆತಿರುಗಿದಂತಾಗುವರು,ಎಲ್ಲರನ್ನೂ ನಿಂದಿಸುವರು.ಹೀಗಿರುವಲ್ಲಿ ಮನುಷ್ಯರಿಗೆ ನೀತಿಯೆಲ್ಲಿಯದು?

 

ಘನ ದೈನ್ಯಂಬಡುವರ್ ಗುರುತ್ವಗೆಡುವರ್ ಗ್ರಾಸಕ್ಕೆ ಕುಗ್ರಾಮವಾ

ಗನುಗೊಟ್ಟಿರ್ಪರು ವೀಕ್ಷಣಕ್ಕೆ ಮುನಿವರ್ ಮಾತಾಡಲುಂ ಬೀಗಿ ಬಿ

ರ್ರನೆ ಬಾಗರು ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಿಪರ್

ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀಚೆನ್ನ ಸೋಮೇಶ್ವರಾ||

 

ಸೋಮೇಶ್ವರ ಶತಕ(೪೮)         ಗ್ರಂಥ ಋಣ- ಕನ್ನಡ ಸಾಹಿತ್ಯ ಪರಿಷತ್ತು

ಕವಿ ಸೋಮನು (ಕ್ರಿ.ಶ ೧೩೦೦ ರಸುಮಾರಿಗೆ) ರಚಿಸಿದ ಶತಕದ ಪದ್ಯವಿದು.