ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.
"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!" ಅನ್ನೋ ಥರದ ಭಾಷ್ಣ ಕೇಳಿ ಯಾವನಾದ್ರೂ ಧೈರ್ಯ ಮಾಡಿ ವ್ಯವಹಾರ ಶುರು ಮಾಡ್ದಾಂತಿಟ್ಕೋಳಿ, ____ಮೋಚ್ಕೊಂಡು ಚಾಪೆ ಸುತ್ಕೊಂಢೋಗ್ತಾನೆ ಎರ್ಡ್ಮೂರ್ತಿಂಗ್ಳಲ್ಲೇ. ಯಾಕೆ? ಈಗಿನ ಟೆಕ್ನಾಲಜಿ ಉದ್ಯಮಗಳಿಗೆ ಮುಖ್ಯವಾಗಿ ಬೇಕಿರೋದು ವಿದ್ಯುತ್ತು. ದರಿದ್ರಾ ಇದನ್ನೇ ಸರಿಯಾಗಿ ಸರಬರಾಜು ಮಾಡೋಕ್ಕೆ ಹರಿಯೋಲ್ಲ, ಇನ್ನಿನ್ನೇನು ಬೇರೆ ಸಹಾಯ-ಸಾಮಗ್ರಿ ಕೊಟ್ಟಿದ್ದಾರು! ದಿನಕ್ಕೆ ಸಮಾ ಎಂಟ್ಗಂಟೆ ಪವರ್ಕಟ್ಟು. ರಾತ್ರಿ ಹತ್ರಿಂದ ಹನ್ನೊಂದಕ್ಕೂ ಪವರ್ಕಟ್ಟು! ಆಹಾ! ದಕ್ಷಿಣ ಕೊರಿಯಾ, ಫ್ರಾನ್ಸು, ಇಸ್ರೇಲು ಇಷ್ಟಿಷ್ಟೇ ಇವೆ. ಆದ್ರೂ ಅವು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ನಮ್ಗಿಂತಾ ಒಂದಿನ್ನೂರ್ವರ್ಷ ಮುಂದೆ ಇದಾರೆ. ಕೋಟಿಗಟ್ಲೆ ಜನಕ್ಕೆ ಇಲ್ಲಿ ನೀರಿಲ್ಲಾ ಅಂದ್ರೂ ನಮ್ಮೋರು ಚಂದ್ರನ್ಮೇಲೆ ನೀರು ಹುಡ್ಕವ್ರೆ.ಏನ್ಜಾಣ್ಮೇ, ಏನ್ಮುಂದಾಲೋಚ್ನೇ! ರಸ್ತೆ , ನೀರು, ವಿದ್ಯುತ್ತು ಇವೇ ಮುಂತಾದ ಸೌಲಭ್ಯಗಳು ಕೇವಲ ಆಡಳಿತದ ಪರಿಣಾಮಗಳು. ಅದು ನೆಟ್ಗಿದ್ರೇ ಇದ್ವೂ ಸರೀನೇ ಇರೋವು. ಯಾಕಾಗಲ್ಲ? ತುಂಬಾ ಸುಲಭ. ಮೀಡಿಯಾಕ್ರಿಟಿ ಜಾತ್ರೆ, ಸಾಲದ್ದಕ್ಕೆ ಅದರ ಮೇಲೆ ನಮ್ಮ ಬ್ಯೂರಾಕ್ರಸಿ ( ಅಧಿಕಾರಶಾಹಿ ಅಂತಾರಲ್ಲ, ಅದು).
ನಮ್ಮೋರು ಕೊಡೋ ಕಾರಣಗಳು : 'ಅಯ್ಯೋ ನಮ್ಮಲ್ಲಿ ಸಿಕ್ಕಾಬಟ್ಟೆ ಜನ, ಏನೂ ಮಾಡಕ್ಕಾಗೊಲ್ಲಾ' ಅಂತ. ಹಿಂಗಂತಾವೇ, ಹಿಂದೇನೇ 'ಇಪ್ಪತ್ತೊಂದನೇ ಶತ್ಮಾನ, ಸೂಪರ್ಪವರ್ರು' ಅಂತೆಲ್ಲಾ ಬಡಾಯಿ ಕೊಚ್ಕೊತಾವೆ! ಪಿಂಡ. ಸೂಪರ್ಪವರ್ರಾ!! ದಿನಕ್ಕಿಪ್ಪತ್ನಾಕ್ ಗಂಟೆ ಪವರ್ಸಪ್ಲೈ ಇಲ್ಲದಿರೋ ಸೂಪರ್ಪವರ್ರು. ಯಾವನೋ ಗುಬಾಲ್ಗೂಬೆ ಭಯೋತ್ಪಾದಕನಿಗೆ ಬಿರಿಯಾನಿ ತಿನ್ಸ್ಕೊಂಡು ವರ್ಷ ಆಯ್ತು. ಆ ದರಿದ್ರಕ್ಕೆ ಆಗ್ಲೇ ಕೋಟಿಗಟ್ಲೆ ಸುರ್ದೂ ಆಯ್ತು. ಇನ್ನೂ ದಿಕ್ಕೂದೆಸೆಇಲ್ಲದೇ ಹಂಗೇ ನಡೀತಿದೆ ಅ ಕೇಸು. ಆಹಾಹಾ! ಎಲ್ಲೆಲ್ಲಿ ನೋಡಿದರೂ ಮೀಡಿಯಾಕ್ರಿಟಿ ಜಾತ್ರೆ. ಸ್ಕೂಲು/ಕಾಲೇಜು/ವಿಶ್ವವಿದ್ಯಾಲಯ/ಕಾರ್ಖಾನೆ/ಉದ್ಯಮ/ವ್ಯವಹಾರ/ಆಡಳಿತ /ಸರ್ಕಾರ/ಮಾಧ್ಯಮಗಳು -ಎಲ್ಲಾ ಕಡೇನೂ ಅದೇ ಪರಮ ಸತ್ಯ!
ಹ್ಮ್, ನಂಗೊತ್ತು. "ಹಿಂಗೆ ಬರೀ ಬಯ್ತಾ ಕೂತ್ರೆ ಆಗಲ್ಲ. ಏನಾದ್ರೂ ಮಾಡ್ಬೇಕು, ಸಮಸ್ಯೆಗೆ ಪರಿಹಾರ ನಾವೇ ಹುಡುಕ್ಕೋಬೇಕು" ಅನ್ನೋ ಉತ್ರಗಳು ಬರ್ತವೆ. ಹಂಗೆ ಹಾಕೋದೇ ಆದಲ್ಲಿ ಏನ್ಮಾಡ್ಬೇಕು ಅನ್ನೋದನ್ನೂ ಚರ್ಚೆ ಮಾಡೋಣ.ರಾಮ್ರಾಜ್ಯ ಮಣ್ಣೂ ಮಸೀ ಎಲ್ಲಾ ಕನ್ಸು. ಆ ಯುಟೋಪಿಯನ್ ಮನೋಭಾವ ಬಿಟ್ಟು ಆಗೋ ಅಂಥಾದನ್ನ ಚರ್ಚೆ ಮಾಡೋಣ. ಬೇಗ ಸಬ್ಮಿಟ್ಮಾಡ್ಬೇಕು, ಇಲ್ಲಾಂದ್ರೆ ಮತ್ತೆ ಪವರ್ಕಟ್ಟಾಗತ್ತೆ.
Comments
ಉ: ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.