ಮುಗ್ಧ ಮಗುವೆ೦ದು.....
ಮುಗ್ಧ ಮಗುವೆ೦ದು
ಮಮತೆಯ ಮಳೆಯನೆ
ಸುರಿಸಿದಿರಿ!!
ನಾ ಕುಣಿದೆ
ಸ೦ಭ್ರಮದಿ....
ಸುಸ೦ಸ್ಕೃತ ಮನಸೆ೦ದು
ಮನಬಾಗಿ
ಗೌರವಿಸಿದಿರಿ!!
ನಾ ಮೆರೆದೆ
ವಿಸ್ಮಯದಿ....
ಹೃದಯದ ಕುಡಿಯೆ೦ದು
ಹೆಜ್ಜೆಗೆಜ್ಜೆಗು
ಜತೆಯಾದಿರಿ!!
ನಾ ಅವಲ೦ಬಿಸಿದೆ
ಪ್ರತಿ ಅಗತ್ಯದಿ...
ಆದರೆ...
ಎನೆ೦ದು ತಿಳಿದು
ನಲುಗಿ ನಕ್ಕಿರಿ!?
ನಾ ಪ್ರೀತಿ ಪಡೆದು
ನೋವು ಕೊಟ್ಟಾಗ!
ಯಾವ ಮೌಲ್ಯವ ನ೦ಬಿ
ಮೌನವಾದಿರಿ!?
ನಾ ಕರುಣವಿಲ್ಲದೆ
ಕಾಟವಿತ್ತಾಗ!
ಯಾವ ಭಾವದ ಮೋಡಿಗೆ
ಮರೆತು ಹೋದಿರಿ!?
ನಾ ಚೂಪಾದ ಮಾತಿ೦ದ
ಹಲವುಬಾರಿ ಇರಿದಾಗ!
ತಿಳಿಯದಾಗಿದೆ ಉತ್ತರ
ಅಳೆಯಲಾಗದು
ನನ್ನ ಮನದಲಿ
ನಿಮ್ಮ ಜೀವದ
ಎತ್ತರ!!!
Rating
Comments
ಉ: ಮುಗ್ಧ ಮಗುವೆ೦ದು.....
In reply to ಉ: ಮುಗ್ಧ ಮಗುವೆ೦ದು..... by asuhegde
ಉ: ಮುಗ್ಧ ಮಗುವೆ೦ದು.....
ಉ: ಮುಗ್ಧ ಮಗುವೆ೦ದು.....
In reply to ಉ: ಮುಗ್ಧ ಮಗುವೆ೦ದು..... by hariharapurasridhar
ಉ: ಮುಗ್ಧ ಮಗುವೆ೦ದು.....