ಸಂದೇಶಗಳು!!!
ಜಂಗಮ ದೂರವಾಣಿಗೆ ಬರುವ ಸಂದೇಶಗಳನ್ನು ಇಲ್ಲಿ ದಾಖಲಿಸಿಡುವ ಪ್ರಯತ್ನ ನನ್ನದು.
ನನಗೆ ದೊರೆತಂತೆ ಸೇರಿಸುತ್ತಾ ಹೋಗುತ್ತೇನೆ.
- ಆತ್ರಾಡಿ ಸುರೇಶ್ ಹೆಗ್ಡೆ.
೦೫ ಫೆಭ್ರವರಿ ೨೦೧೦
ಬದಲಾವಣೆಗಳು ಜೀವನದಲ್ಲಿ ಅದೆಷ್ಟು ಸಹಜವೋ, ಸವಾಲುಗಳೂ ಅಷ್ಟೇ ಸಹಜ. ಸವಾಲುಗಳನ್ನು ಬದಲಾಯಿಸಲೆತ್ನಿಸದೇ, ಬದಲಾವಣೆಗಳನ್ನು ಸವಾಲುಗಳಾಗಿ ಸ್ವೀಕರಿಸುತ್ತಿರೋಣ.
೦೩ ಫೆಭ್ರವರಿ ೨೦೧೦
ಸ್ನೇಹ ಅತಿಯಾಗಿ ಮಾತನಾಡುವುದಿಲ್ಲ, ಸ್ನೇಹ ಎಂದೂ ಪುರಾವೆ ಕೇಳುವುದಿಲ್ಲ, ಸ್ನೇಹಕ್ಕೆ ಸುಖಾಂತ್ಯವೂ ಇರುವುದಿಲ್ಲ, ಏಕೆಂದರೆ ಸ್ನೇಹ ಎಂದೂ ಅಂತ್ಯ ಕಾಣುವುದೇ ಇಲ್ಲ, ನಿರ್ಮಲ, ನಿಸ್ವಾರ್ಥ ಮತ್ತು ನಿಜ ಸ್ನೇಹಿತ - ಸ್ನೇಹಿತೆಯರು ಇರುವತನಕ!!!
ಜೀವನದಲ್ಲಿ ಆದಷ್ಟು ಕಡಿಮೆ ತಪ್ಪುಗಳಾಗುವಂತೆ ನೋಡಿಕೊಳ್ಳೋಣ, ಇಲ್ಲವಾದರೆ, ಪೆನ್ಸಿಲ್‍ಗಿಂತ ಮೊದಲು "ರಬ್ಬರ್" ಮುಗಿದು ಹೋದೀತು.
ಜೀವನ ಅಂದರೆ ನಮಗಾಗಿ ಜನಿಸಿದವರ ನಿರೀಕ್ಷೆಯೊಂದೇ ಅಲ್ಲ, ನಮಗಾಗಿ ಜೀವಿಸುತ್ತಿರುವವರಿಗಾಗು ಜೀವಿಸುವುದು.
೧೮ ಜನವರಿ ೨೦೧೦
೨೯. ಗುಂಡಾ: "ಅಪ್ಪ ನಿಮಗೆ ಕತ್ತಲಲ್ಲಿ ಬರೆಯೋಕೆ ಬರುತ್ತಾ?" ಅಪ್ಪ: "ಹೌದು". ಗುಂಡಾ: "ಹಾಗಾದ್ರೆ ಎಲ್ಲಾ ದೀಪ ಆರಿಸ್ತೀನಿ ನನ್ನ ಅಂಕ ಪಟ್ಟಿಗೆ ಸಹಿ ಹಾಕಿ ಬಿಡಿ".
೨೮. ೧೨% ಅಪಘಾತಗಳು ಕುಡಿದು ವಾಹನ ಚಲಾಯಿಸುವುದರಿಂದ ಅಂತಾರೆ. ಹಾಗಾದರೆ ೮೮% ಅಪಘಾತಗಳು ಕುಡಿಯದೇ ವಾಹನ ಚಲಾಯಿಸುವುದರಿಂದ ಅಂದ ಹಾಗಾಯ್ತು. ಅದಕ್ಕೇ ಹೇಳುವುದು ಕುಡಿದು ಸಾವಕಾಶವಾಗಿ ವಾಹನ ಚಲಾಯಿಸಿ.
೨೭. ಸ್ನೇಹ ಎನ್ನುವುದು ನಮ್ಮ ನಿಜ ರೂಪವನ್ನು ನಮಗೆ ತಿಳಿಸುವ ಕನ್ನಡಿಯಂತೆ. ಅದನ್ನು ನಾವು ಸದಾ ಜೋಪಾನವಾಗಿ ಕಾಪಾಡಿಕೊಂಡು ಬರಬೇಕಾಗುತ್ತದೆ ಏಕೆಂದರೆ ಒಮ್ಮೆ ಒಡೆದರೆ ಮತ್ತೆ ಒಂದು ಮಾಡಲಾಗದಂತೆ.
೨೬. ಚಿಂತೆಗಳೆನ್ನುವುದು ಚಂದ್ರನಿದ್ದಂತೆ. ಅದರ ಗಾತ್ರವೂ ಒಂದೇ ತೆರನಾಗಿರದೆ ದಿನದಿಂದ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ.
೨೫. ಜನರು ಹೆಚ್ಚಾಗಿ, ಕಲಿತದ್ದು ಸಾಕಾಗಿ ಬದಲಾಗಲು ಬಯಸುತ್ತಾರೆ ಅಥವಾ ತಿಂದ ನೋವು ಅತಿಯಾಗಿ ಬದಲಾಗಲು ಬಯಸುತ್ತಾರೆ.
೨೪. ವಿರಹ ಎನ್ನುವುದೊಂದು ನೋವು ಅದನ್ನು ಯಾರೂ ಕುಗ್ಗಿಸಲಾರರು ನೆನಪುಗಳೆನ್ನುವುದು ಒಂದು ಉಡುಗೊರೆ ಅದನ್ನು ಯಾರೂ ಕಸಿಯಲಾರರು.
೨೩. ನೆನಪುಗಳು ಕೆಲವೊಮ್ಮೆ ನಮ್ಮೊಂದಿಗೆ ವಿಚಿತ್ರ ರೀತಿಯಲ್ಲಿ ನಡೆದುಕೊಳ್ಳುತ್ತವೆ. ನಾವು ಜನ ಜಂಗುಳಿಯಲ್ಲಿರುವಾಗ ನಮ್ಮನ್ನು ಒಂಟಿಯಾಗಿಸುತ್ತವೆ ಮತ್ತೆ ಕೆಲವೊಮ್ಮೆ ಒಂಟಿಯಾಗಿದ್ದಾಗ ನಮ್ಮ ಸುತ್ತ ಜನಜಂಗುಳಿಯನ್ನು ನಿರ್ಮಾಣ ಮಾಡಿಬಿಟ್ಟಿರುತ್ತವೆ.
೧೪ ಜನವರಿ ೨೦೧೦
೨೨. ಲಕ್ಷೋಪಲಕ್ಷ ನುಡಿಗಳೂ ನಿನ್ನನ್ನು ನನ್ನ ಬಳಿಗೆ ತರಲಾರವು, ನನಗೆಗೊತ್ತು, ಏಕೆಂದರೆ ನಾ ಪ್ರಯತ್ನಿಸಿದ್ದೇನೆ. ಲಕ್ಷೋಪಲಕ್ಷ ಕಣ್ಣೀರ ಹನಿಗಳೂ ಆ ಕೆಲಸ ಮಾಡಲಾರವು, ನನಗೆ ಗೊತ್ತು, ಏಕೆಂದರೆ ನಾ ಅತ್ತಿದ್ದೇನೆ.
೨೧. ಕಾಲದ ತಾಪಕ್ಕೆ ಕಲ್ಲೂ ಕರಗಬಹುದು, ಖುಷಿಯ ಕ್ಷಣಗಳು ದುಃಖದಲ್ಲಿ ಬದಲಾಗಬಹುದು, ನಮ್ಮ ನೆನಪು ಯಾರಿಗೆ ಇರಬಹುದು ಹೇಳಿ, ಕಾಲ ಬದಲಾದಂತೆ ಎಲ್ಲರ ಯೋಚನೆಯೂ ಬದಲಾಗಬಹುದು.
೨೦. ಸೂರ್ಯನಿಗೆ ಆಕಾಶವಿರಬಹುದು ನನಗೇನಂತೆ, ರಾತ್ರಿಗೆ ನಕ್ಷತ್ರಗಳಿರಬಹುದು ನನಗಿಲ್ಲ ಚಿಂತೆ, ಆದರೆ ನನ್ನ ನಾಳೆ ಸುಂದರವಾಗುವುದು ನೀನು ನನ್ನ ಜೊತೆಗೆ ಇದ್ದರೆ ಮಾತ್ರವಂತೆ.
೧೯. ನಿನ್ನ ಸಾಮಿಪ್ಯದ ಆ ಒಂದು ಕ್ಷಣಕ್ಕೆ ಬದಲಾಗಿ ನಾನು ನನ್ನೆಲ್ಲವನ್ನೂ ನೀಡಬಲ್ಲೆ, ಏಕೆಂದರೆ, ನಿನ್ನೊಂದಿಗಿನ ಆ ಒಂದು ಕ್ಷಣ ನನ್ನ ಪಾಲಿಗೆ ನನ್ನೀ ಜೀವನಕ್ಕಿಂತಲೂ ಅಮೂಲ್ಯವಾದುದು.
೧೮. ಹೊಸ ದಿನ, ಹೊಸ ನಗು, ಹೊಸ ಚಿಗುರು, ಹೊಸ ಕನಸು, ಹೊಸ ದಾರಿ, ಹೊಸ ಜೀವನ, ಈ ದಿನ ನಿಮ್ಮ ಜೀವನದಲ್ಲಿ ಹೊಸತನ ತರಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು
೧೭. ಆರದಿರಲಿ ಪ್ರೇಮದ ಜ್ಯೋತಿ, ಬಾಡದಿರಲಿ ಪ್ರೀತಿಯ ಹೂವು, ಕರಗದಿರಲಿ ನಿಮ್ಮ ಕನಸು, ನಿಮ್ಮದಾಗಿರಲಿ ಸುಂದರ ಬದುಕು, ಜೊತೆ ಇರಲಿ ನಮ್ಮ ಸ್ನೇಹದ ನೆನಪು.
೧೬. ಈ ಸಂಕ್ರಾಂತಿ ಹಬ್ಬದ ಬೆಲ್ಲದ ಸಿಹಿಯು ಬಾಳಿನ ಬೇವಿನ ಕಹಿಯನ್ನು ಮೀರಿಸಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು.
೧೫. ಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಗಳನ್ನು ಆಡಿ. ಸಂಕ್ರಾಂತಿಯ ಶುಭಾಶಯಗಳು.
೧೪. ಸಂತಸ, ಸಮೃದ್ದಿ, ಸಂತೃಪ್ತಿ, ಸಂಪ್ರೀತಿ, ಸಮನ್ವಯ, ಸಹಬಾಳ್ವೆ, ಸಂಸ್ಕೃತಿ, ಸಿಹಿಕಹಿ, ಸಮಾಗಮ, ಸಂಭ್ರಮ, ಇವೆಲ್ಲವನ್ನೂ ತರಲಿ ಈ ಸಂಕ್ರಾಂತಿ.
೧೩. ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಿರಲಿ, ನೀವು ಕಂಡ ಕನಸು ನನಸಾಗಲಿ.
೧೨. ಮನುಷ್ಯ ಆಹಾರವಿಲ್ಲದೆ ೪೦ ದಿನ, ನೀರಿಲ್ಲದೆ ೩ ದಿನ, ಗಾಳಿ ಇಲ್ಲದೇ ೮ ನಿಮಿಷ, ಜೀವಿಸಬಹುದಂತೆ. ಆದರೆ, ಆಶಾಭಾವನೆಗಳಿಲ್ಲದೇ ಅರೆಗಳಿಗೆಯೂ ಜೀವಿಸಲಾರ.
೧೧. ಭೇಟಿಗಳಿಂದಷ್ಟೇ ಸ್ನೇಹ ಬಿಗಿ ಆಗುವುದಿಲ್ಲ, ಯೋಚನೆಗಳಿಂದಲೇ ಸ್ನೇಹ ಸವಿಯಾಗಬಹುದು. ನಾನು ನಿನ್ನ ಬಗ್ಗೆ ನನ್ನದೇ ರೀತಿಯಲ್ಲಿ ಕಾಳಜಿ ವಹಿಸುತ್ತಿರಬಹುದು, ಆದರೆ ನಾನೆಂದಿಗೂ ನಿನಗದನು ತೋರ್ಪಡಿಸದೇ ಇರಬಹುದು.
೧೦. ನೆನಪುಗಳ ನೆನಪಲ್ಲಿ, ನೆನಪಾದ ನೆನಪೊಂದು, ನೆನಪಿರುವವರೆಗೆ ನೆನಪಿರಲಿ, ನನ್ನ ನೆನಪು.
೯. ಎಳ್ಳು ಬೆಲ್ಲ ಸವಿಯುತ್ತಾ, ಕಬ್ಬಿನ ಸಿಹಿಯ ಹೀರುತ್ತಾ, ದ್ವೇಶ ಹಗೆಯ ಮರೆಯುತ್ತಾ, ಸವಿ ಮಾತುಗಳನ್ನು ಆಡುತ್ತಾ, ಸಂಕ್ರಾಂತಿಗೆ ಸ್ವಾಗತ ಕೋರೋಣ.
೧೩ ಜನವರಿ ೨೦೧೦
೮. ನನ್ನನ್ನು ಅರ್ಥೈಸಿಕೊಳ್ಳದೇ ನಿನ್ನ ಹತ್ತಿರ ಸೇರಿಸಿಕೊಳ್ಳಬೇಡ ಹಾಗೂ ನನ್ನನ್ನು ಅಪಾರ್ಥ ಮಾಡಿಕೊಂಡು ನಿನ್ನಿಂದ ದೂರ ಮಾಡಬೇಡ.
೭. ಅಪಘಾತದ ನಂತರ ಕಾರಿನ ಚಾಲಕನನ್ನು ಬಂಧಿಸಿದ ಪೋಲೀಸ ಕೇಳುತ್ತಾನೆ: "ಅಪಘಾತ ಹೇಗಾಯ್ತು ಹೇಳು" ಚಾಲಕ: "ನನಗೆ ಗೊತ್ತಿಲ್ಲ ನಾನು ನಿದ್ರಿಸಿದ್ದೆ"!
೬. ಜೀವನ ಒಂದು ಕಾದಂಬರಿಯಂತೆ. ಅದರಲ್ಲಿ ಸಾಕಷ್ಟು ರಹಸ್ಯಗಳಿರುತ್ತವೆ. ಮುಂದಿನ ಪುಟಕ್ಕೆ ಹೋಗುವ ತನಕ ಯಾವಾಗ ಏನಾಗುತ್ತದೆ ಎನ್ನುವುದರ ಅರಿವೇ ಇರುವುದಿಲ್ಲ. ನಿನಗೆ ಪ್ರತಿಯೋಂದು ಪುಟದಲ್ಲೂ ಒಂದು ಸಂತಸ ಭರಿತ ಉಕ್ತಿಗಳು ಸಿಗಲಿ ಎಂದು ನಾನು ಹಾರೈಸುತ್ತೇನೆ!
೫. ಕೆಲವು ಹುಡುಗಿಯರು ತುಂಬಾ ಕಲಿಯೋದಕ್ಕೆ ಆಸಕ್ತಿ ತೊರಿಸೋಲ್ಲ. ಯಾಕೆ ಗೊತ್ತಾ? ಅವರಿಗೆ ಚೆನ್ನಾಗಿ ಗೊತ್ತು, ಪ್ರಪಂಚದ ಯಾವುದೋ ಮೂಲೆಯಲ್ಲಿ ತನಗಾಗಿ ಒಬ್ಬ ನಿದ್ದೆ ಬಿಟ್ಟು ಓದುತ್ತಾ ಇದ್ದಾನೆ ಅಂತ!
೪. ಅಭಿಪ್ರಾಯಗಳು ಕೈಗಡಿಯಾರಗಳಂತೆ. ಪರಿಯೊಬ್ಬನ ಕೈಗಡಿಯಾರವೂ ಬೇರೆ ಬೇರೆ ಸಮಯ ತೊರಿಸುತ್ತಿರುತ್ತದೆ. ಆದರೆ ಪ್ರತಿಯೊಬ್ಬನೂ ತನ್ನ ಕೈಗಡಿಯಾರದಲ್ಲಿನ ಸಮಯವೇ ಸರಿ ಎಂದು ನಂಬಿರುತ್ತಾನೆ!
೧೨ ಜನವರಿ ೨೦೧೦
೩. "ನಾಳೆ ದಿನವೂ ಬರುತ್ತದೆ, ಆದರೆ ಇಂದು ಬರುವುದು ಇಂದು ಮಾತ್ರ, ಹಾಗಾಗಿ ಇಂದಿನ ಕೆಲಸವನ್ನು ಇಂದೇ ಮುಗಿಸಿ ನಾಳೆ ಬಿಡುವಿನಲ್ಲಿರೋಣ" - ಹಿಟ್ಲರ್
೨. "ನಮ್ಮಿಬ್ಬರ ನಡುವೆ ಒಂದೊಂದು ರೂಪಾಯಿಯ ವಿನಿಮಯ ನಡೆದರೆ ನಮ್ಮಿಬ್ಬರ ಕೈಯಲ್ಲೂ ಒಂದೊಂದೇ ರೂಪಾಯಿ ಉಳಿದಿರುತ್ತದೆ, ಆದರೆ, ನಮ್ಮಿಬ್ಬರ ನಡುವೆ ಒಂದೊಂದು ಸದ್ವಿಚಾರದ ವಿನಮಯ ನಡೆದರೆ ನಮ್ಮಿಬ್ಬರ ಮನದಲ್ಲೂ ಎರಡೆರಡು ಸದ್ವಿಚಾರಗಳು ತುಂಬಿರುತ್ತವೆ"- ಸ್ವಾಮೀ ವಿವೇಕಾನಂದ.
೧. "ಆಪ್ತ ಸ್ನೇಹಿತರೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವ ಅವಶ್ಯಕತೆ ಇರುವುದಿಲ್ಲ, ಆದರೆ, ಹಂಚಿಕೊಂಡ ವಿಷಯಗಳಲ್ಲಿ ಸತ್ಯ ಇರಲೇಬೇಕಾದ ಅವಶ್ಯಕತೆ ಇದೆ" - ಶೇಕ್ಸ್‍ಪಿಯರ್