ಇದು ಯಾರ ಸುಗ್ಗಿ ?

ಇದು ಯಾರ ಸುಗ್ಗಿ ?

ಇದು ಯಾರ ಸುಗ್ಗಿ ? ಇದು ಯಾರ ಸುಗ್ಗಿ ?

ವರುಣನ ಆರ್ಭಟಕ್ಕೆ ಬದುಕು ಕೊಚ್ಚಿ ಹೋದವನದೆಂಥ ಸುಗ್ಗಿ ?
ಯೋಜನೆಗಳಿಗೆ ಭೂಮಿ ಕಳೆದುಕೊಂಡವನದೆಂಥ  ಸುಗ್ಗಿ ?
ಭೂಮಿ ಕಳೆದುಕೊಳ್ಳುವ ಭಯದಲ್ಲಿರುವನದೆಂಥ ಸುಗ್ಗಿ ?
ಬೆಳೆದ ಬೆಳೆಗೆ  ಸರಿಯಾದ ಬೆಲೆ ಸಿಗದೇ ಕೈ ಸುಟ್ಟುಕೊಂಡವನದೆಂಥ  ಸುಗ್ಗಿ ?
ಉಳುವವರಿಲ್ಲದೆ ಮಲಯಾಳಿಗಳಿಗೆ ಭೂಮಿ ಗುತ್ತಿಗೆ ಕೊಟ್ಟವನದೆಂಥ ಸುಗ್ಗಿ ?

ಅತಿವೃಷ್ಟಿ ಪರಿಹಾರದಲ್ಲಿ ತಿಂದು ತೇಗಿದವನಿಗಿದು ಸುಗ್ಗಿ !
ಯೋಜನೆ ಹೆಸರಿನಲ್ಲಿ ಜಮೀನು ಸ್ವಾದೀನ ಪಡಿಸಿಕೊಂಡವನಿಗಿದು  ಸುಗ್ಗಿ !
ಹಣಕ್ಕಾಗಿ ಖಾಸಿಗಿಯವರಿಗೆ ಕೆಲಸ ಮಾಡುತ್ತಿರುವ ಸರಕಾರಿಯವರಿಗಿದು ಸುಗ್ಗಿ !
ಗ್ರಹಣವನ್ನು ಗ್ರ+ಹಣ ಎಂದು ಓದಿಕೊಂಡ ಜೋತಿಷಿಗಿದು (ಅರ್ಚಕನಿಗಿದು) ಸುಗ್ಗಿ !
ಗುಂಪುಗಾರಿಕೆ ಮಾಡಿ, ಬೆದರಿಕೆಯೋಡ್ಡಿ ಮಂತ್ರಿಯಾದವನಿಗಿದು ಸುಗ್ಗಿ !

ಮುಂದಿನ ವರ್ಷವಾದರೂ ರೈತನಿಗೆ ನಿಜವಾದ ಅರ್ಥದಲ್ಲಿ ಸುಗ್ಗಿ ಬರಲೆಂದು ಆಶಿಸುತ್ತ -- ನಿಮಗೆಲ್ಲ ಸಂಕ್ರಾಂತಿ ಹಬ್ಬದ ಶುಭಾಶಯಗಳು.

Rating
No votes yet