ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ

ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ

ತೈವಾನಿನಲ್ಲಿ ವಿಶ್ವದ ಪ್ರಥಮ ಸಂಪೂರ್ಣ ಸೂರ್ಯಶಕ್ತಿ ಆಧಾರಿತ ಕ್ರೀಡಾಂಗಣ

ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ ಕ್ರೀಡಾಂಗಣವೊಂದು ತೈವಾನಿನ ಕಾವೋಸ್ಯಿಯಂಗ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ. 
ವರ್ಲ್ಡ್ ಗೇಮ್ಸ್ ಸ್ಟೇಡಿಯಮ್ ಎಂಬ ಹೆಸರಿನ ಈ ಕ್ರೀಡಾಂಗಣದಲ್ಲಿ ಒಟ್ಟು ಐವತ್ತು ಸಾವಿರ ಜನರಿಗೆ ಸ್ಥಳಾವಕಾಶ ಒದಗಿಸಲಾಗಿದೆ. ಕ್ರೀಡಾಂಗಣದ ಸಂಪೂರ್ಣ ಮೇಲ್ಛಾವಣಿಯನ್ನು ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಒಟ್ಟು 8,844 ಫೋಟೋವೋಲ್ಟಾಯಿಕ್ ಸೆಲ್ಲುಗಳ ಸಮುಚ್ಛದಿಂದ ಆವರಿಸಲಾಗಿದ್ದು ಈ ಕಾರ್ಯವನ್ನು ಜಪಾನಿನ ಟೋಯೋ ಇಟೋ ಸಂಸ್ಥೆ ಪೂರ್ಣಗೊಳಿಸಿದೆ.ಈ ರೀತಿ ಉತ್ಪತ್ತಿಯಾದ ವಿದ್ಯುತ್ ಕ್ರೀಡಾಂಗಣದ ೩,೩೦೦ ವಿದ್ಯುತ್ ದೀಪಗಳೀಗೆ ಹಾಗೂ  ಎರೆಡು ಬೃಹತ್ ಗಾತ್ರದ ಟೀವಿ ಪರದೆಗಳಿಗೆ ಜೀವ ನೀಡುತ್ತದೆ. ಕ್ರೀಡಾಂಗಣದ ಇನ್ನುಳಿದ ಬಳಕೆಗೂ ಉಪಯೋಗಿಸಿ ಮಿಗುವ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳಲು ಬೃಹತ್ ಬ್ಯಾಟರಿಗಳ ಸಮೂಹವನ್ನೂ ಕ್ರೀಡಾಂಗಣ ಹೊಂದಿದೆ. ಈ ಹೆಚ್ಚುವರಿ ವಿದ್ಯುತ್ತನ್ನು ಮಾರುವ ಬಗ್ಗೆಯೂ ತೈವಾನ್ ಸರ್ಕಾರ ಯೋಚಿಸುತ್ತಿದೆ. 
ಈ ಕ್ರೀಡಾಂಗಣದಲ್ಲಿ ೨೦೦೯ ರ ವರ್ಲ್ಡ್ ಗೇಮ್ಸ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಈ ವರ್ಷ ತೈವಾನಿನ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನೂ ಈ ಕ್ರೀಡಾಂಗಣದಲ್ಲಿ ಆಡಿಸಲು ಯೋಜಿಸಲಾಗಿದೆ. ಇನ್ನುಳಿದಂತೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಒಲಿಂಪಿಕ್ಸ್ ನಲ್ಲಿ ಒಳಗೊಳ್ಳದ ಕ್ರೀಡೆಗಳಾ ಪ್ಯಾರಾಟ್ರೂಪಿಂಗ್,  ಟೆಂಪಿನ್ ಬೌಲಿಂಗ್, ರಗ್ಬಿ ಸೆವೆನ್ ಮೊದಲಾದ ಕ್ರೀಡೆಗಳನ್ನೂ ಆಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 
ಕ್ರೀಡಾಂಗಣ ಒಂದು ವೃತ್ತಾಕಾರದಲ್ಲಿದ್ದು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸ್ವಾಗತ ಬಯಸುತ್ತಿರುವ ಸ್ನೇಹಪರ ಡ್ರಾಗನ್ ನಿಂತಿರುವ ಶೈಲಿಯನ್ನು ಅನುಸರಿಸುತ್ತದೆ. 
ಈ ಕೀಡಾಂಗಣ ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಪ್ರಮಾಣ ವಾರ್ಷಿಕ ೧.೧೪ ಮಿಲಿಯನ್ ಕಿ.ವ್ಯಾ.ಘಂಟೆಗಳು. (೧೧೪೦ ಮೆಗಾವ್ಯಾಟ್). ಈ ಉತ್ಪಾದನೆಯ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗದ ಇಂಗಾಲದ ಪ್ರಮಾಣ ವಾರ್ಷಿಕ 660 ಟನ್. 
ವಿದ್ಯುತ್ ಉತ್ಪಾದನೆಯ ತೀವ್ರ ಅಗತ್ಯವಿರುವ ಭಾರತಕ್ಕೆ ಈ ಕ್ರೀಡಾಂಗಣವೊಂದು ಮಾದರಿಯಾಗಬಹುದೇ, ಕಾದು ನೋಡಬೇಕು.
ಅರ್ಶದ್ ಹುಸೇನ್, ದುಬೈ.

ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ ಕ್ರೀಡಾಂಗಣವೊಂದು ತೈವಾನಿನ ಕಾವೋಸ್ಯಿಯಂಗ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ.

ವರ್ಲ್ಡ್ ಗೇಮ್ಸ್ ಸ್ಟೇಡಿಯಮ್ ಎಂಬ ಹೆಸರಿನ ಈ ಕ್ರೀಡಾಂಗಣದಲ್ಲಿ ಒಟ್ಟು ಐವತ್ತು ಸಾವಿರ ಜನರಿಗೆ ಸ್ಥಳಾವಕಾಶ ಒದಗಿಸಲಾಗಿದೆ. ಕ್ರೀಡಾಂಗಣದ ಸಂಪೂರ್ಣ ಮೇಲ್ಛಾವಣಿಯನ್ನು ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಒಟ್ಟು 8,844 ಫೋಟೋವೋಲ್ಟಾಯಿಕ್ ಸೆಲ್ಲುಗಳ ಸಮುಚ್ಛದಿಂದ ಆವರಿಸಲಾಗಿದ್ದು ಈ ಕಾರ್ಯವನ್ನು ಜಪಾನಿನ ಟೋಯೋ ಇಟೋ ಸಂಸ್ಥೆ ಪೂರ್ಣಗೊಳಿಸಿದೆ.ಈ ರೀತಿ ಉತ್ಪತ್ತಿಯಾದ ವಿದ್ಯುತ್ ಕ್ರೀಡಾಂಗಣದ 3,300 ವಿದ್ಯುತ್ ದೀಪಗಳಿಗೆ ಹಾಗೂ ಎರಡು ಬೃಹತ್ ಗಾತ್ರದ ಟೀವಿ ಪರದೆಗಳಿಗೆ ಜೀವ ನೀಡುತ್ತದೆ. ಕ್ರೀಡಾಂಗಣದ ಇನ್ನುಳಿದ ಬಳಕೆಗೂ ಉಪಯೋಗಿಸಿ ಮಿಗುವ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳಲು ಬೃಹತ್ ಬ್ಯಾಟರಿಗಳ ಸಮೂಹವನ್ನೂ ಕ್ರೀಡಾಂಗಣ ಹೊಂದಿದೆ. ಈ ಹೆಚ್ಚುವರಿ ವಿದ್ಯುತ್ತನ್ನು ಮಾರುವ ಬಗ್ಗೆಯೂ ತೈವಾನ್ ಸರ್ಕಾರ ಯೋಚಿಸುತ್ತಿದೆ. 

ಈ ಕ್ರೀಡಾಂಗಣದಲ್ಲಿ 2009 ರ ವರ್ಲ್ಡ್ ಗೇಮ್ಸ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಈ ವರ್ಷ ತೈವಾನಿನ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನೂ ಈ ಕ್ರೀಡಾಂಗಣದಲ್ಲಿ ಆಡಿಸಲು ಯೋಜಿಸಲಾಗಿದೆ. ಇನ್ನುಳಿದಂತೆ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಒಲಿಂಪಿಕ್ಸ್ ನಲ್ಲಿ ಒಳಗೊಳ್ಳದ ಕ್ರೀಡೆಗಳಾದ ಪ್ಯಾರಾಟ್ರೂಪಿಂಗ್,  ಟೆಂಪಿನ್ ಬೌಲಿಂಗ್, ರಗ್ಬಿ ಸೆವೆನ್ ಮೊದಲಾದ ಕ್ರೀಡೆಗಳನ್ನೂ ಆಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 

ಕ್ರೀಡಾಂಗಣ ಒಂದು ವೃತ್ತಾಕಾರದಲ್ಲಿದ್ದು ಕ್ರೀಡಾಪಟುಗಳಿಗೆ ಮತ್ತು ಕ್ರೀಡಾಭಿಮಾನಿಗಳಿಗೆ ಸ್ವಾಗತ ಬಯಸುತ್ತಿರುವ ಸ್ನೇಹಪರ ಡ್ರಾಗನ್ ನಿಂತಿರುವ ಶೈಲಿಯನ್ನು ಅನುಸರಿಸುತ್ತದೆ. 
ಈ ಕೀಡಾಂಗಣ ಸೂರ್ಯನ ಕಿರಣಗಳನ್ನು ವಿದ್ಯುತ್ತನ್ನಾಗಿ ಪರಿವರ್ತಿಸುವ ಪ್ರಮಾಣ ವಾರ್ಷಿಕ 1.14 ಮಿಲಿಯನ್ ಕಿ.ವ್ಯಾ.ಘಂಟೆಗಳು. (೧೧೪೦ ಮೆಗಾವ್ಯಾಟ್). ಈ ಉತ್ಪಾದನೆಯ ಮೂಲಕ ವಾತಾವರಣಕ್ಕೆ ಬಿಡುಗಡೆಯಾಗದ ಇಂಗಾಲದ ಪ್ರಮಾಣ ವಾರ್ಷಿಕ 660 ಟನ್. 

ವಿದ್ಯುತ್ ಉತ್ಪಾದನೆಯ ತೀವ್ರ ಅಗತ್ಯವಿರುವ ಭಾರತಕ್ಕೆ ಈ ಕ್ರೀಡಾಂಗಣವೊಂದು ಮಾದರಿಯಾಗಬಹುದೇ, ಕಾದು ನೋಡಬೇಕು.

ಅರ್ಶದ್ ಹುಸೇನ್, ದುಬೈ.

Rating
No votes yet

Comments