ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
ಪಕ್ಕದಲ್ಲೇ ಮಾವಿನ ಸೊಪ್ಪಿನ ತೋರಣ,ಘಮಘಮಿಸುವ ಹೂವುಗಳು,ಕಬ್ಬಿನ ಜಲ್ಲೆಗಳು.ಸುತ್ತಲು ಸೀರೆಯುಟ್ಟ ನೀರೆಯರು,ಪಂಚೆದಾರಿ ಪುರುಷರು (ಅವ್ರಿಗೆ 'ನೀರೆ' ಅಂದ್ರೆ ನಮ್ಮನ್ನ 'ನೀರಾ' ಅಂತಾರ ಅನ್ನೋ ಡೌಟು!? ;) ). ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'.
ಮೊದಲೆಲ್ಲ ಆಫೀಸ್ ಸಿಂಗಾರವಾಗುತಿದ್ದಿದ್ದು ಬಣ್ಣ ಬಣ್ಣದ ಬಲೂನು, ಪೇಪರ್ಗಳಿಂದಲೇ. ಯಾವಾಗ್ಲೂ ಮನಸಿಗೆ ಹಿಡಿಸಿದ ಚಂದ ಚಂದವರು ಬರುವ ಕನಸಿನಲ್ಲಿ, ಅದ್ಯಾಕೋ ಈ ಬಾರಿ "ಕಬ್ಬು,ಮತ್ತೆ ಮಾವಿನ ಸೊಪ್ಪುಗಳು ಬಂದು,ಗುರು ಅದೇನಮ್ಮಾ ಯಾವಾಗ್ಲೂ ಕೃತಕ ಬಣ್ಣದ ಸಿಂಗಾರ ಮಾಡ್ಕೊಂಡು ಖುಷಿ ಪಡ್ತೀರಾ?, ಈ ಕಿತ ನಮ್ಮನ್ನ ಒಂದ್ಸರಿ ನಿಮ್ಮ ಸಂಭ್ರಮದಲ್ಲಿ ಬಳಸಿಕೊಂಡು ನೋಡು ಹೆಂಗಿರುತ್ತೆ ಅಂತ!, ಈ ಕನಸಿನ ಬಗ್ಗೆ ನಿಮ್ಮ ಆಫೀಸಿನಲ್ಲಿ ಹೇಳದಿದ್ದರೆ ನಿಂಗೆ ಈ ವರ್ಷವಿಡಿ ಮಾವಿನ ಹಣ್ಣು,ಕಬ್ಬು ತಿನ್ನೋಕು ಸಿಗೋಲ್ಲ, ಜ್ಯೂಸ್ ಕೂಡ ಸಿಗಲ್ಲ,ಹೂವು ಇಲ್ಲ, ಕಡೆಗೆ ಹೂವು ಮೂಡಿದ ನೀರೆಯರೂ ಕೂಡ ನೋಡ ಸಿಗುವುದಿಲ್ಲ ಅಷ್ಟೇಯ! ;)" ಅಂತ ಲೈಟ್ ಆಗಿ ಧಮಕಿ ಕೂಡ ಹಾಕಿ ಮಾಯವಾಗ್ಬಿಟ್ವು ;)
ಯಾವುದಾದರು ವಿಷಯವನ್ನ ಯಾರಿಗೂ ಹೇಳದೆ ಹಾಗೆ ಇದ್ರೆ ಹೊಟ್ಟೆನೋವು ಶುರುವಾಗುತ್ತೆ ನಂಗೆ,ಇನ್ನ ಇಂತ ವಿಷಯನ ಬಿಡ್ತೀನಾ :). 'ಕಬ್ಬು ತಂದು ಆಫೀಸ್ ಗಬ್ಬು ಮಾಡೋ ಐಡಿಯಾ ಕೊಟ್ರೆ ಹುಚ್ಚ ಅನ್ಕೊಂತಾರೋ ಏನೋ, ಆದ್ರೂ ನೋಡೇಬಿಡೋಣ ಅಂತ ಬಂದು ಆಫೀಸಲ್ಲಿ ಹೇಳ್ದೆ. ಆಶ್ಚರ್ಯ ಅಂದ್ರೆ ನಾನ್ ಎಷ್ಟು ಉತ್ಸಾಹದಿಂದ ಹೇಳಿದನೋ ಅದಕ್ಕಿಂತ ದುಪ್ಪಟ್ಟು ಉತ್ಸಾಹ ತೋರಿಸಿದವರು ನಮ್ಮ ತಂಡದವರು.ಎಲ್ಲರು ರೆಡಿ ಅಂದಾಗಲೇ ನಾನ್ ಒಂತರ ಥ್ರಿಲ್ ಆಗಿದ್ದೆ!, ಕಡೆಗೆ ಅವತ್ತು ಕಬ್ಬಿನ ಜಲ್ಲೆ,ಮಾವಿನ ತೋರಣ,ಹೂವಿನೊಂದಿಗೆ ನಾವೆಲ್ಲಾ ಅಪ್ಪಟ ಭಾರತೀಯ ಉಡುಗೆಯಲ್ಲಿ ಬಂದರೆ ಕಳೆಕಟ್ಟುತ್ತದೆ ಅನ್ನಿಸಿತು.ಸರಿ ಅನ್ನಿಸಿ ಒಂದು ಸಮೀತಿ ಮಾಡಿ ಏನೇನು ಬೇಕು ತೀರ್ಮಾನಿಸಿ ಒಂದು ಮಿಂಚೆ ಕಳಿಸಿ ತಂಡದ ಎಲ್ಲರಿಗೂ ವಿಷಯ ತಿಳಿಸಿದೆವು.
ಹಿಂದಿನ ದಿನ ಕಬ್ಬು, ಇತ್ಯಾದಿಗಳನ್ನ ತರಲು ನಾನು ಮತ್ತೆ ವಿವೇಕ್ ಹೋಗಬೇಕಿತ್ತು.ಕಡೆ ಕ್ಷಣದಲ್ಲಿ ನನಗೆ ತುರ್ತು ಕೆಲಸ ಬಂದಿದ್ದರಿಂದ ಹೋದವರು ರವಿ ಮತ್ತೆ ವಿವೇಕ್.ಹೋಗಿ ಒಂದೆರಡು ಗಂಟೆಯೊಳಗೆ ಇಬ್ಬರು ಹೇಳಿದ್ದನ್ನೆಲ್ಲ ತಂದಿದ್ದರು. ಉಸಿರು ಹೊಡೆಯುತ್ತ ಬಂದ ವಿವೇಕ್,'ಕಡೆ ಕ್ಷಣದಲ್ಲಿ ಕೈ ಎತ್ತಿ ಬಿಟ್ತ್ಯಲ್ಲ , ನಮ್ಮ್ ಮನೆ ಹಬ್ಬಕ್ಕೂ ನಾನ್ ಇಷ್ಟು ಕೆಲಸ ಮಾಡಿಲ್ಲ, ಏನ್ ಜನನಪ್ಪ ಅಲ್ಲಿ ಕೈ,ಕಾಲು ಸಿಕ್ಕ ಸಿಕ್ಕಿದ್ದನ್ನೆಲ್ಲ ತುಣಿದ್ ಹಾಕ್ಬಿಟ್ರು' ಅಂದ್ರು. ನಗುತ್ತ ಕೆಳಗಿಳಿದು ಬಂದವರೆ ಎಲ್ಲರು ಸೇರಿಕೊಂಡು ಕಬ್ಬನ್ನು ಅಳತೆಗೆ ಸರಿಯಾಗಿ ಮುರಿದುಕೊಂಡು ಮೇಲೆ ತಂದರೆ ಮೈ ಎಲ್ಲ ಕಡಿತ ಶುರುವಾಗಿತ್ತು.ಎಲ್ಲರೂ ಸೇರಿಕೊಂಡು ಸಿಂಗಾರ ಮಾಡಿ ಮನೆಗೆ ಮುಟ್ಟುವಷ್ಟರಲ್ಲಿ ಹತ್ತಿರ ಹತ್ತಿರ ಹನ್ನೊಂದಾಗಿತ್ತು!
ಬೆಳಿಗ್ಗೆ ಎದ್ದವನಿಗೆ ಇನ್ನು ಎಳ್ಳು ಬೆಲ್ಲ ತಗೊಂಡಿಲ್ಲ, ಜೊತೆಗೆ ಇವತ್ತಿನ ಉಡುಗೆಗೆ ಶರ್ಟ್ ಕೂಡ ತಗೋಬೇಕು ಅಂತ ನೆನಪಾಗಿ ತಡಬಡಾಯಿಸಿ ಮಲ್ಲೇಶ್ವರಂಗೆ ಹೋಗಿ, ಎಳ್ಳು ಬೆಲ್ಲ ಎಷ್ಟು ಗುರು ಅಂತ ಮಾರುವವನ ಬಳಿ ಹೋಗಿ ಕೇಳಿದರೆ,ಕಂಪೆನಿ ಟ್ಯಾಗ್ ನೋಡಿದವನಿಗೆ 'ಸಾಫ್ಟ್ವೇರ್ ಮಿಕ' ಅನ್ನಿಸಿತೋ ಏನೋ, ಯರ್ರಾ ಬಿರ್ರಿ ಜಾಸ್ತಿ ಹೇಳಿದ, 'ಏನ್ ಗುರು ನನ್ನ್ ಮುಖ ನೋಡಿದ್ರೆ ನಿಂಗೆ ಹೆಂಗ್ ಅನ್ನಿಸುತ್ತೆ. ಹೇಳು, ಈಗೇನು ತಗೊಬೇಕೋ ಬೇಡವೋ ನಾನು' ಅಂದೇ.ನನ್ನ್ ಮುಖ ನೋಡಿದವನಿಗೆ ಅದೇನ್ ಅನ್ನಿಸಿತೋ (?) ಬೆಲೆ ತಗ್ಗಿಸಿದ.ಆಮೇಲೆ ಸರಿ ಅಂತ ತಗೊಂಡು , ಶರ್ಟ್ ಹುಡುಕಿದರೆ ನನ್ನ್ ನಸಿಬಿಗೆ ಅದು ಸಿಗಲೇ ಇಲ್ಲ. ಸರಿ ಇನ್ನೇನು ಮಾಡುವುದು ಇರೋದನ್ನೇ ಹಾಕ್ಕೊಂಡರೆ ಆಯಿತು ಅಂತ ಆಫೀಸ್ ತಲುಪಿದರೆ, ನಮ್ಮ್ ವಿಂಗ್ನ ಲುಕ್ಕೆ ಬೇರೆ ಆಗಿತ್ತು. ಮಾವಿನ ಎಲೆ,ಕಬ್ಬಿನ ಜಲ್ಲೆಯ ಹಸಿರು,ಹೂವಿನ ಕಂಪು ಅದರ ಬಣ್ಣ, ಬಣ್ಣ ಬಣ್ಣದ ಸೀರೆಗಳು,ಶ್ವೇತ ಪಂಚೆದಾರಿಗಳು ಎಲ್ಲರ ನೋಡಿ ಒಂತರ ಖುಷಿ ಅನ್ನಿಸಿತು.
೪ ವರ್ಷದ ಹಿಂದೆ ಕಾಲೇಜಿನಲ್ಲಿದ್ದಾಗ ಧರಿಸಿದ್ದೆ ಪಂಚೆಯನ್ನ, ಮತ್ತೆ ಹಾಕಿದ್ದು ಮೊನ್ನೆಯೇ. ಗೆಳೆಯನ ಸಹಾಯದಿಂದ ಕಟ್ಟಿಕೊಂಡವನಿಗೆ ಅದಿನ್ಯಾವಾಗ ಉದುರಿ ಹೊಗುತ್ತೋ ಅನ್ನೋ ಗಾಬರಿ ತಲೇಲಿ ಓಡ್ತಾ ಇತ್ತು. ಊಟದ ಸಮಯಕ್ಕೆ ಅಳುಕುತ್ತಲೇ ಹೊರಗೆ ಬಂದ್ರೆ ಜನ ಯಾಕೋ ವಿಚಿತ್ರವಾಗಿ ಲುಕ್ ಕೊಡ್ತಾ ಇದ್ರು.ಬಹುಷಃ ನಾನೇ ವಿಚಿತ್ರವಾಗಿ ಕಾಣಿಸ್ತ ಇದ್ನೋ ಏನೋ ;) ಊಟದ ತಟ್ಟೆಯ ಮುಂದೆ ಕೂತರು ಪಂಚೆಯದೆ ಧ್ಯಾನ :)
ಅಂತು ಇಂತೂ ಆ ದಿನ ಎಲ್ಲ ಅಂದುಕೊಂಡಂತೆ ಸೂಸುತ್ರವಾಗಿ ನಡೆಯಿತು ಅದೇ ಖುಷಿ, ಅದಕ್ಕಿಂತ ಖುಷಿ ಅಂದರೆ ಮನೆಯಿಂದ ಹೊರಗಿರುವ ನಮಗೆ ಈ ರೀತಿಯ ಆಚರಣೆಗಳು ಒಂದು ರೀತಿ ಮನೆಯಲ್ಲೇ ಇದ್ದಂತ ಅನುಭವ ಕೊಟ್ಟಿದ್ದು, ಈ ಬಾರಿಯ ಸಂಕ್ರಾಂತಿ ಹಬ್ಬ ಭರ್ಜರಿ ಅನ್ನಿಸಿತು.ಮನೆಗೆ ಹೋಗುವಾಗ ಬ್ಯಾಗಿನ ತುಂಬಾ ಕಬ್ಬು ತುಂಬಿಕೊಂಡು ಹೋದೆ, ನಿನ್ನೆ ಹೇಗಿದ್ರು ರಜೆ ಟೆರೇಸಿನ ಮೇಲೆ ಹೋದವನೇ ಎಲ್ಲ ಸ್ವಾಹ ಮಾಡಿದೆ :)
Comments
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
In reply to ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ' by Divya Bhat Balekana
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
In reply to ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ' by manju787
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'
In reply to ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ' by Chikku123
ಉ: ಇದು ನಮ್ಮ 'ಸಾಫ್ಟ್ ವೇರ್ ಸಂಕ್ರಾಂತಿ ಸಂಭ್ರಮ'