ಪ್ರೇಮ ಪತ್ರ...

ಪ್ರೇಮ ಪತ್ರ...

ಬರಹ

ನನ್ನ ಪ್ರೀತಿಯ ಕೋತಿ ಗೆ,


ಅದೇನೋ ಗೊತ್ತಿಲ್ಲ ಕಣೋ ....ಅದೆಂದು ನಿನ್ನ ನೋಡಿದೇನೂ ನನಗೆ ಏನು ಆಗ್ತಾ ಇದೆಎಂದು ನನಗೇ ಗೊತ್ತಿಲ್ಲ....ಪ್ರತೀಕ್ಷಣನೂ ನಿನ್ನ ನೆನಪಾಗುತ್ತಾ ಇದೆಯೋ ಹುಡುಗ .ನಿನ್ನೆಮೊನ್ನೆ ವರೆಗೂ ಕೇವಲ ಚಾಟ್ ಗಳಿಗೆ ಮಾತ್ರ ಸೀಮಿತ ವಾಗಿದ್ದ ನಮ್ಮ ಸ್ನೇಹ ಈಗ ಕರೆ ಮಾಡುವರೆಗೆ ಬಂದಿದೆ. ನಿನಗೆ ನನ್ನ ಬಗ್ಗೆಯಾವ ತರಹದ ಅಭಿಪ್ರಾಯ , ಭಾವನೆ ಇದೆಯೋ ನನಗಂತೂ ತಿಳಿದಿಲ್ಲ. ಆದರೆ ನನಗಂತೂ " ಮೊದಲಾ ಲುಕ್ಕಿನಲ್ಲೇ ನಾನು ಲಕ್ಕಿಆದೆ". 

ನಿನ್ನ ಭಾವಚಿತ್ರವನ್ನಷ್ಟೇ ನೋಡಿ ಮರುಳಾಗಿದ್ದ ನಾನು ನಿನ್ನ ನಿಜವಾಗಿಯೂ ನೋಡಿದಾಗ ನನ್ನೇ ನಾನು ಮರೆತು ಹೋದೆ. ಪ್ರತೀ ಕ್ಷಣವೂ ನನಗೆ ಅನಿಸುತಿತ್ತು "ಆಹಾ ಇಂಥ ಹುಡುಗ ನನ್ನ ಇಷ್ಟ ಪಡುವನೇ ಎಂದು. ಆದರೂ ಗೆಳೆಯ ನಿನ್ನ ಹೆಸರು ಕೇಳಿದ ಕೂಡಲೇ ನನ್ನ ಮುಖದಲ್ಲಿ ಒಂದು ನಗೆ ಹಾಗೆ ಬಂದು ಹಾದು ಹೋಗುತ್ತದೆ .ನೀನು ಹತ್ತಿರ ವಿದ್ದಾಗ ಮಾತಾಡಲು ವಿಷ್ಯ ಕಾಣುವುದಿಲ್ಲ. ದೂರ ಅದಾಗ ಮಾತಾಡಲಿಲ್ಲವಲ್ಲ ಎನಿಸುತ್ತದೆ .

ನಿನ್ನೆ ಮದರಂಗಿ ಹಚ್ಚಿ ಕೊಂಡಾಗ ನನ್ನ ಕೈಗಳು ತುಂಬಾ ಕೆಂಪಾದದನ್ನು ಕಂಡು ಗೆಳತಿ "ನಿನ್ನ ಗಂಡ ನಿನ್ನ ತುಂಬಾ ಪ್ರೀತಿಸುತ್ತಾನೆ ಎಂದಾಗ ನೆನಪಾಗಿದ್ದು ನೀನಲ್ಲದೆ ಮತ್ಯಾರು ಅಲ್ಲ..

ಎಂದೂ ಮೊಬೈಲ್ ನ ಸೈಲೆಂಟ್ ನಲ್ಲಿ ಇಟ್ಟುಮಲಗುತ್ತಿದ್ದ ನಾನು ಈಗ ಲೌಡ್ ರಿನ್ಗ್ನಲ್ಲಿ ಇಡುತ್ತಿದ್ದೀನಿ. ಅಪ್ಪಿ ತಪ್ಪಿ ನಿನ್ನ ಒಂದು ಕರೆ ಕೂಡ ಮಿಸ್ ಮಾಡಲು ನಾ ತಯಾರಿಲ್ಲ ಹುಡುಗ...

ಅಂದು ನಿನ್ನ ಆತ್ಮೀಯ ಗೆಳತಿಯ ಬಗ್ಗೆ ಹೇಳಿ ಕೊಂಡಾಗ ನನಗೆ ಉರಿದಿದ್ದಂತೂ ಸುಳ್ಳಲ್ಲ ..ಆದರೆ ನಾನು ತೋರಿಸಿ ಕೊಳ್ಳುವುದಿಲ್ಲ ..ಏಕೆಂದರೆ ನಾನು ನಿನ್ನ ಇಷ್ಟ ಪಡುತ್ತೇನೆ .ನಿನ್ನ ಮನಸನ್ನು ನೋಯಿಸಲು ನಾ ತಯಾರಿಲ್ಲ .ಅದಕ್ಕೆಂದು ನನಗೆ ಬೇಸರ ವಾದರೂ ತೊಂದರೆ ಇಲ್ಲ.

ಜೀವನ ದಲ್ಲಿ ಇದುವರೆಗೂ ಬರೀ ಅಪ್ಪ ,ಅಮ್ಮ ,ತಂಗಿ ಬಿಟ್ಟರೆ ಏನು ಗೊತ್ತಿರದ ನನ್ನ ಪ್ರಪಂಚಕ್ಕೆ ನೀನು ಬಂದಿರುವೆ. ...ಹಳೇ ಸ್ನೇಹಿತರು ಯಾರು ಬೇಡ ನೀನ್ ವಬ್ಬ ಇದ್ದರೆ ಸಾಕು ಎನಿಸುತ್ತಿದೆ ....

ಹೌದು ಗೆಳೆಯ I AM IN LOVE WITH YOU...
I LOVE YOU FROM THE BOTTOM OF MY HEART.

ನನ್ನಂಥ ಸಾವಿರ ಹುಡುಗಿರು ಸಿಕ್ಕರಬಹುದು ನಿನಗೆ ಆದರೆ ನನಗೆ ಸಿಕ್ಕಿದ್ದು ನೀನೊಬ್ಬನೇ ಏಕೆಂದರೆ
I am an ordinary girl but are an extra-ordinary guy.

ಆ ದಿನ ರಸ್ತೆ ದಾಟುವಾಗ ನನ್ನ ಕೈ ಹಿಡಿದು ದಾಟಿಸಿದ್ದೆ ನೀನು ಆಗಲೇ ಏಳು ಹೆಜ್ಜೆ ನಡೆದಾಗಿದೆ ( ಸಪ್ತಪದಿ ???)ನನ್ನ ಮದುವೆ ಆದರೆ ನಿನ್ನ ಜೊತೆ ನೀಯತ್ತಾಗಿ ಸಂಸಾರ ಮಾಡುವೆ ...ನನ್ನ ಕೊನೆ ಉಸಿರಿರೋವರೆಗೂ...

ನಾನು ಬರೆದಿದೆಲ್ಲ ನಿಜ ಹೌದು ಎಂದು ನಂಬುವಷ್ಟು ನಂಬಿಕೆ ನನ್ನಲ್ಲಿದೆ ಎಂದು ತಿಳಿದು ...

ನಿನ್ನ ಉತ್ತರದ ನಿರೀಕ್ಷೆಯಲ್ಲಿ ಭಯ ,ಆತಂಕ , ಮತ್ತು ದುಗುಡದೊಂದಿಗೆ ,

ನಿನ್ನವಳಾಗುವ ಕನಸಿನೊಂದಿಗೆ ,

ನಿನ್ನವಳು...