’ಜ್ಯೋತಿ ಬಸು,’ ರವರು ಇನ್ನೆಲ್ಲಿ ?

’ಜ್ಯೋತಿ ಬಸು,’ ರವರು ಇನ್ನೆಲ್ಲಿ ?

ಬರಹ

 

೨೦೦೯ ರ, ಜನವರಿಯಿಂದ ನ್ಯೂಮೋನಿಯ ಕಾಯಿಲೆಯ ವಿಕೋಪಕ್ಕೆ  ಬಲಿಯಾಗಿದ್ದ, ೯೫ ವರ್ಷ ಪ್ರಾಯದ, ಹಿರಿಯ ಕಮ್ಯುನಿಸ್ಟ್ ನಾಯಕ, ಶ್ರೀ. ಜ್ಯೋತಿ ಬಸುರವರು, ರವಿವಾರ, ೧೧.೪೭ ಕ್ಕೆ ಎ. ಎಮ್. ಆರ್. ಐ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವಾರು ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ, ೧, ರಿಂದಲೂ ಅವರು ನರಳುತ್ತಲೇ ಇದ್ದರು. 

ಬಾಸುರವರು, ೨೧, ಜೂನ್, ೧೯೭೭ ರಿಂದ, ನವೆಂಬರ್, ೬, ೨೦೦೦ ರದ ವರೆಗೆ ಪ. ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಅಲ್ಲಿನ ಜನಪ್ರಿಯ ನೇತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಜುಲೈ ೮, ೧೯೧೪ ರಲ್ಲಿ ಜನಿಸಿದ ಬಾಸುರವರು, ಬಂಗಾಳದ ಉಚ್ಚ ಮದ್ಯಮ ವರ್ಗದ ಪರಿವಾರದಿಂದ ಬಂದವರು. ಅವರ ತಂದೆ, ನಿಶಿಕಾಂತ ಬಾಸು,  ಒಬ್ಬ ಹೆಸರಾಂತ ವೈದ್ಯರು. ಸೇಂಟ್ ಝೇವಿಯರ್ ಕಾಲೇಜಿಯೇಟ್ ಸ್ಕೂಲ್ ” ಲ್ಲಿ, ಪ್ರಾಥಮಿಕ ವಿದ್ಯಾಭ್ಯಾಸ ಪಡೆದ  ಬಾಸುರವರು, ’ಕೊಲ್ಕಟ್ಟಾದ ಪ್ರೆಸಿಡೆನ್ಸಿ ಕಾಲೇಜ್ ಆರ್ಟ್ಸ್ ಫ್ಯಾಕಲ್ಟಿ ’ ಯಲ್ಲಿ ಪದವಿ ಪಡೆದರು. ನಂತರ ಇಂಗ್ಲೆಂಡ್ ನಲ್ಲಿ ಲಾ-ಪದವಿಯನ್ನು ಗಳಿಸಿದರು. ಅಲ್ಲಿ, ಅವರು ’ಕಮ್ಯುನಿಸ್ಟ್ ಪಾರ್ಟಿ ಆಫ್ ಬ್ರಿಟನ್ ’ ನಿಂದ ಪ್ರಭಾವಿತರಾಗಿ, ಭಾರತಕ್ಕೆ ಬಂದಮೇಲೂ ಅದರ ನಾಯಕತ್ವವನ್ನು ವ ಹಿಸಿ, ಅದನ್ನು ಜನಪ್ರಿಯಮಾಡಿದರು. 

ಸಿಪಿಐ ಎಂ ಪಕ್ಷ ಸ್ಥಾಪನೆಯಾಗಿದ್ದು, ೧೯೬೪ ರಲ್ಲಿ. ಅಲ್ಲಿಂದ ಸತತವಾಗಿ ಸನ್ ೨೦೦೮ ರವರೆಗೆ, ’ಪಾಲಿಟ್ ಬ್ಯೂರೋ ಸದಸ್ಯ’  ರಾಗಿ ಸೇವೆಸಲ್ಲಿಸಿದ ಬಾಸುರವರು, ಒಬ್ಬ ನಿಷ್ಠಾವಂತ ಕಮ್ಯುನಿಸ್ಟ್ ಪಕ್ಷದ ವಿಚಾರಧಾರೆಯನ್ನು ಮೈಗೂಡಿಸಿಕೊಂಡು, ಅದೇ ದಾರಿಯಲ್ಲಿ ತಮ್ಮ ಜೀವನದ ಗುರಿ ಕಂಡುಕೊಂಡ ವ್ಯಕ್ತಿ !

ಪ. ಬಂಗಾಲದ ಮುಖ್ಯಮಂತ್ರಿಯಾಗಿ ಮುಂದುವರೆಯುವ ಮೂಲಕ ಭಾರತದಲ್ಲಿ ಅತಿ ಹೆಚ್ಚುಕಾಲ ಮುಖ್ಯಮಂತ್ರಿಯ ಸ್ಥಾನ ಗ್ರಹಣಮಾಡಿದ ಹಿರಿಮೆ ಅವರದಾಗಿದೆ.  ಸನ್ ೨೦೦೦ ನೇ ಇಸವಿಯ ನವೆಂಬರ್ ತಿಂಗಳಿನಲ್ಲಿ  ಅವರ ಆರೋಗ್ಯ ಹದಗೆಟ್ಟಕಾರಣದಿಂದಾಗಿ ಅವರು, ತಮ್ಮ ಸ್ವಂತ ನಿರ್ಧಾರದಿಂದ ರಾಜೀನಾಮೆ ಘೋಶಿಸಿದ್ದರು.

ರಾಜಕೀಯ ಬೆಳವಣಿಗೆಗಳು ಶ್ರೀ ಬಸುರವರ ಕಡೆಗೆ ವಾಲಿದ್ದು, ೧೯೬೬ ರಲ್ಲಿ. ಅವರು ಪ್ರಧಾನಮಂತ್ರಿಯಾಗುವ ಅವಕಾಶ ಅವರ ಕೈಗೆ ಬಂದರೂ, ತಮ್ಮ ಪಕ್ಷದ ನಿಲವು ಹಾಗೂ ದೇಶದ ಹಲವು ವಿಚಾರಗಳನ್ನು ಗಮನದಲಿಟ್ಟುಕೊಂಡು, ಸಮ್ಮಿಶ್ರ ಸರಕಾರದಲ್ಲಿ ಪ್ರಧಾನ ಮಂತ್ರಿಯ ಪದವಿಯನ್ನು ನಿರಾಕರಿಸಿದರು ! ಅವರು ಬಿಟ್ಟ ಜಾಗವನ್ನು ತುಂಬಲು ಯಾರಾದರೂ ಬೇಕಾಗಿತ್ತು. ಆಗ ಆರಿಸಲ್ಪಟ್ಟವರೇ ನಮ್ಮ ಕನ್ನಡನಾಡಿನ ಹಿರಿಯ ರಾಜಕಾರಣಿ, ಜನತಾದಳದ ಅಧ್ಯಕ್ಷ,  ಎಚ್. ಡಿ. ದೇವೇಗೌಡರು ! ಯಾವ ಕಷ್ಟವೂ ಇಲ್ಲದೆ ದೊರಕಿದ ಪದವಿಯನ್ನು ಗೌಡರು ಸಮರ್ಥವಾಗಿ ಉಳಿಸಿಕೊಳ್ಳಲು ಅಸಮರ್ಥರಾದದ್ದು ವಿಪರ್ಯಾಸ !

ಜ್ಯೋತಿ ಬಸುರವರಿಗೆ, ಮಗ ಚಂದನ್, ಸೊಸೆ ರಾಖಿ, ಮತ್ತು ೩ ಮೊಮ್ಮಕ್ಕಳು ಪಾಯಲ್, ಡೋಯಲ್, ಕೋಯಲ್, ಇದ್ದಾರೆ. ಭಾರತದೇಶದುದ್ದಕ್ಕೂ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳ ಸಮೂಹವೇ ಇದೆ. ೧೯೬೪ ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ವಿಭಜನೆಗೊಂಡು ಸಿ.ಪಿ.ಎಮ್ ರಚನೆಯಾದಾಗ ಶ್ರೀ ಬಸುರವರು ಇ. ಎಮ್. ಎಸ್. ನಂಬೂದ್ರಿಪಾದರೊಡಗೂಡಿ ಮುನ್ನಡೆದರು.
೧೯೫೨ ರಲ್ಲಿ ಪ್ರಥಮಬಾರಿಗೆ ವಿಧಾನ ಸಭೆಗೆ ಚುನಾಯಿತರಾದರು. ೧೯೬೭ ಮತ್ತು ೧೯೭೦ ರಲ್ಲಿ ಅವರು ಪ. ಬಂಗಾಳದಲ್ಲಿ ಸಂಯುಕ್ತರಂಗ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ೧೯೭೭ ರಲ್ಲಿ ಎಡರಂಗದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. 
’ಪಾಲಿಟ್ ಬ್ಯೂರೊ’ದ ೯ ಜನ ನವರತ್ನಗಳಲ್ಲಿ ಬಸು ಒಬ್ಬರು ಬದುಕುಳಿದಿದ್ದರು. ಆದರೆ ಈಗ ಅವರ ನಿಧನದಿಂದಾಗಿ, ’ಭಾರತೀಯ ಕಮ್ಯುನಿಸ್ಟ್ ಪಕ್ಷ’ದ ಚಳುವಳಿಯ  ಬಲವಾದ ಕೊಂಡಿ ಕಳಚಿದಂತಾಗಿದೆ. ಇದು ’ಮಮತಾ ಬ್ಯಾನರ್ಜಿ’ಯವರ ’ತೃಣಮುಲ್ ಕಾಂಗ್ರೆಸ್’ ನ ಬಲಿಪಶುವಾಗಬಹುದೇನೊ !ಸಮಯವೇ ನಿರ್ಧರಿಸಬೇಕಾಗಿದೆ. ದೇಶದ ಕೋಮುವಾರು ವಿರುದ್ಧ ಹೊಡೆದಾಡಿದ ಅಪ್ರತಿಮ ರಾಜಕಾರಣಿಯೆನ್ನುವುದು ಎಲ್ಲರ, ಅಭಿಮತವಾಗಿದೆ

೧೯೬೪ ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ ವಿಭಜನೆಗೊಂಡು ಸಿ.ಪಿ.ಎಮ್ ರಚನೆಯಾದಾಗ ಶ್ರೀ ಬಸುರವರು ಇ. ಎಮ್. ಎಸ್. ನಂಬೂದ್ರಿಪಾದರೊಡಗೂಡಿ ಮುನ್ನಡೆದರು.೧೯೫೨ ರಲ್ಲಿ ಪ್ರಥಮಬಾರಿಗೆ ವಿಧಾನ ಸಭೆಗೆ ಚುನಾಯಿತರಾದರು. ೧೯೬೭ ಮತ್ತು ೧೯೭೦ ರಲ್ಲಿ ಅವರು ಪ. ಬಂಗಾಳದಲ್ಲಿ ಸಂಯುಕ್ತರಂಗ ಸರ್ಕಾರದಲ್ಲಿ ಉಪ-ಮುಖ್ಯಮಂತ್ರಿಯಾಗಿದ್ದರು. ೧೯೭೭ ರಲ್ಲಿ ಎಡರಂಗದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

’ಪಾಲಿಟ್ ಬ್ಯೂರೊ’ದ ೯ ಜನ ನವರತ್ನಗಳಲ್ಲಿ ಬಸು ಒಬ್ಬರು,  ಬದುಕುಳಿದಿದ್ದರು. ಆದರೆ ಈಗ ಅವರ ನಿಧನದಿಂದಾಗಿ, ’ಭಾರತೀಯ ಕಮ್ಯುನಿಸ್ಟ್ ಪಕ್ಷ’ದ ಚಳುವಳಿಯ  ಬಲವಾದ ಕೊಂಡಿ ಕಳಚಿದಂತಾಗಿದೆ. ಇದು ’ಮಮತಾ ಬ್ಯಾನರ್ಜಿ’ಯವರ ’ತೃಣಮುಲ್ ಕಾಂಗ್ರೆಸ್’ ನ ಬಲಿಪಶುವಾಗಬಹುದೇನೊ ! ಸಮಯವೇ ನಿರ್ಧರಿಸಬೇಕಾಗಿದೆ.  ಭಾರತ ದೇಶದ ಕೋಮುವಾರು ವಿರುದ್ಧ ಹೊಡೆದಾಡಿದ ಅಪ್ರತಿಮ ರಾಜಕಾರಣಿಯೆನ್ನುವುದು ಎಲ್ಲರ, ಅಭಿಮತವಾಗಿದೆ.


ಜ್ಯೋತಿ ಬಸುರವರಿಗೆ, ಮಗ ಚಂದನ್, ಸೊಸೆ ರಾಖಿ, ಮತ್ತು ೩ ಮೊಮ್ಮಕ್ಕಳು ಪಾಯಲ್, ಡೋಯಲ್, ಕೋಯಲ್, ಇದ್ದಾರೆ. ಭಾರತ ದೇಶದುದ್ದಕ್ಕೂ ಅಪಾರ ಬಂಧುವರ್ಗ ಮತ್ತು ಅಭಿಮಾನಿಗಳ ಸಮೂಹವೇ ಇದೆ.


 

-’ರೆಡಿಫ್ ಮೇಲ್ ’ ಸೌಜನ್ಯದಿಂದ.