ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?

ಜವಾಬ್ದಾರಿಗಳಿಗೂ ಯಶಸಿಗೂ (ಸಾಧನೆ)ಗೂ ವಿಲೋಮಾನುಪಾತವಿದೆಯೆ?

ಜವಾಬ್ದಾರಿಗಳಿಗೂ   (ಯಶಸು) ಸಾಧನೆಗೂ ವಿಲೋಮಾನುಪಾತವಿದೆಯೆ? (ತಿದ್ದು ಪಡಿ ಸುಪ್ರೀತರಿಂದ)


ಹೀಗೊಂದು  ಪ್ರಶ್ನೆ ಕಾಡಿದ್ದು ನೆನ್ನೆ. ಮದುವೆ ಮಕ್ಕಳು ಗಂಡ ,ಹೆಂಡತಿ  ಸಂಸಾರ ನೆಂಟರು ಇಷ್ಟರು ಸ್ನೇಹಿತರು ಇವರುಗಳ ಸಂಖ್ಯೆ ಬೆಳೆಯುತ್ತಿದ್ದಂತೆ ವ್ಯಕ್ತಿಯ ಕಾರ್ಯ ಕ್ಷಮತೆ  ಕಡಿಮೆಯಾಗುತ್ತಾ ಹೋಗುತ್ತದೆಯೇ? ಇವುಗಳ ಬಗ್ಗೆ ಅಕ್ಕರೆ ವ್ಯಾಮೋಹ ಹೆಚ್ಚಾದಂತೆ ನಮಗೂ ನಮ್ಮ ಜೀವನದ ಗುರಿ(ಆದ್ಯಾತ್ಮಿಕತೆ, ಸಾಹಿತ್ಯಾಭಿರುಚಿ ,ಉದ್ಯೋಗ, ಬಿಸಿನೆಸ್)ಯ  ಅಂತರ ಹೆಚ್ಚಾಗುತ್ತದೆಯಲ್ಲವೇ?


ಎಷ್ಟೋ ಯಶಸ್ಸು ಪಡೇದವರ ಸಂಖ್ಯೆಗಳನ್ನು ಗಮನಿಸಿ ಜಯಲಲಿತ, ಕಿರಣ್ ಮುಜುಂದಾರ್ ಶಾ ಮಾಯಾವತಿ, ಅಬ್ದುಲ್ ಕಲಾಮ್, ವಾಜಪೇಯಿ. ಇವರುಗಳೆಲ್ಲಾ ಜೀವನದಲ್ಲಿ ಗುರಿಯೆಡೆಗೆ ತದೇಕ ಚಿತ್ತವನ್ನು ಇಟ್ಟು ಬೆಳೆದವರಲ್ಲವೇ?


ಹಾಗಿದ್ದಲ್ಲಿ ಗುರಿ ತಲುಪುವ ಪ್ರಕ್ರಿಯೆಯೂ ಒಂದು ರೀತಿಯ ನಿರ್ಲಿಪ್ತತೆ . ಅತೀ ಭಾವುಕತನ , ಸಂಸಾರದ ಬಗ್ಗೆ ಅತಿಯಾದ ವ್ಯಾಮೋಹ, ಎಡಬಿಡದ ಜವಾಬ್ದಾರಿಯ ಭಾರ ನಮ್ಮನ್ನು ನಿರ್ಲಿಪ್ತತೆಯಿಂದ ಇರಲು ಬಿಡುವುದಿಲ್ಲ ಅನ್ನಿಸುತ್ತದೆ.


ನಿಮ್ಮಗಳ ಅಭಿಪ್ರಾಯವೇನು

Rating
No votes yet

Comments