ಡೀಮ್ಡ್ ವಿವಿ ಅಮಾನ್ಯ ಮಾಡುವುದೇ ಇದ್ದಾಗ ಮಾನ್ಯತೆ ನೀಡಿದ್ದೇಕೆ

ಡೀಮ್ಡ್ ವಿವಿ ಅಮಾನ್ಯ ಮಾಡುವುದೇ ಇದ್ದಾಗ ಮಾನ್ಯತೆ ನೀಡಿದ್ದೇಕೆ

ಇಂದು  ಡೀಮ್ಡ್ ವಿವಿಗಳನ್ನು  ಅಮಾನ್ಯ ಮಾಡುತ್ತಿದ್ದಾರೆಂಬ ವಿಷಯ ತಿಳಿದ ಕೂಡಲೆ  ನನ್ನ ವಿದ್ಯಾರ್ಥಿಗಳಿಂದ ಕರೆಗಳ ಸುರಿಮಳೆ


ಮೇಡಮ್ ನನ್ನ ಡಿಗ್ರೀ ವ್ಯಾಲಿಡಿಟಿ ಇದೆಯಾ? ನನಗೆ ಈ ಸರ್ಟಿಫಿಕೇಟ್ಸ್‍ನಿಂದ ಕೆಲ್ಸ ಸಿಗುತ್ತಾ . ನನಗೆ ಬೇರೆ ವಿವಿ ಇಂದ ಮಾಡಿಸಿಕೊಡಿ.ಅವರ ಆತಂಕಗಳು ಅನೇಕ.


ಹೀಗೆ ಆಗಿತ್ತು ಅಂದು ಛತ್ತೀಸ್ ಘಡ ಎಂಬ ರಾಜ್ಯವೊಂದು ಅಸ್ತಿತ್ವಕ್ಕೆ ಬಂದುದುನ್ನೆ ಕಾಯುತ್ತಿದ್ದವರಂತೆ ೨೦೦೨ರಲ್ಲಿ


ಖಾಸಗಿ ವಿವಿಗಳು ನಾಯಿಕೊಡೆಗಳಂತೆ ತಲೆ ಎತ್ತಿದವು.  ಕೇವಲ ರಾಜ್ಯ ಸರ್ಕಾರದ ಒಪ್ಪಿಗೆ ಇದ್ದರೆ ಸಾಕು  ಅಂತಹ ವಿವಿ  ಯಾವುದೇ ಕಾಲೇಜಿಗಾಗಲಿ ಅಥವ ಸಂಸ್ಥೆಗಾಗಲಿ ತನ್ನ  ಹೆಸರಿನಲ್ಲಿ ನಡೆಸುವುದಕ್ಕೆ ಪರವಾನಗಿ ಕೊಡುವಂತಹ  ಆಕ್ಟ್(Under Section 5 of the Act the State) ಪ್ರಯೋಜನ ಪಡೆದವು . ಬೀದಿಗೊಂಡು ವಿವಿಗಳು ತಲೆ ಎತ್ತಿದವು. ಒಂದೊಂದರ ಕೋರ್ಸ್ ಗಳು ಅತ್ಯಾಕರ್ಷಕ. ಎಷ್ಟೋ ವಿವಿಗಳು ಹೊರರಾಜ್ಯಕ್ಕೆ ಸ್ಟಡಿ ಸೆಂಟರ್ಸ್ ಕೊಡಲಾರಂಭಿಸಿದವು. ಸಾವಿರಾರು ವಿದ್ಯಾರ್ಥಿಗಳು ಈ ವಿವಿಗೆ ಸೇರಿದರು.


ರಾಜ್ಯಸರ್ಕಾರದಿಂದಲೂ ಯಾವುದೇ ಪರಿಶೀಲನೆ ನಡೆಸದೆ ಬಳಿಗೆ ಬಂದ ಅರ್ಜಿಗಳಿಗೆಲ್ಲಾ  ಒಪ್ಪಿಗೆ ಸಿಗುತಿತ್ತು. ಹಾಗೆ ಸ್ಥಾಪನೆಯಾದವುಗಳು  ೧೧೨ ವಿವಿಗಳು. ಕೆಲವೆಡೆ ಕಟ್ಟಡ್ದಂತಹ ಮೂಲ ಸೌಕರ್ಯವೂ ಇರಲಿಲ್ಲ. ಹಣಮಾಡಲು ಒಳ್ಳೆಯ ಉಪಾಯ ಇದಾಗತೊಡಗಿತು.


ಮೊದಲೆರೆಡು ವರ್ಷ ಚೆನ್ನಾಗಿಯೇ ಇತ್ತು.


ಅದೇನಾಯ್ತೋ  ನಂತರ ಇವುಗಳ ಅವಾಂತರವು ಯುಜಿಸಿಯ ಕಣ್ಣಿಗೆ ಬಿದ್ದವು.


ಸುಪ್ರೀಮ್ ಕೋರ್ಟ್‌ವರೆಗೆ ಹೋಗಿ ಇದ್ದಕಿದ್ದಂತೆಯೇ  ಈ ಎಲ್ಲಾ ಯೂನಿವರ್ಸಿಟಿಗಳನ್ನು ಮುಚ್ಚಲಾಯ್ತು. ಹಣ ಮಾಡಿಕೊಂಡ ವಿವಿಗಳು   ಒಂದಷ್ಟು ದಿನ ಹಾರಾಡಿ  ಸುಮ್ಮನಾದವು . ಕೆಲವು ಈಗೀಗ ಮತ್ತೆ ಪ್ರಾರಂಭವಾಗುತ್ತಿವೆ


ಆದರೆ ಆ ವಿವಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ೩೩೦೦೦ ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಎರೆಡು ವರ್ಷ ಅಲ್ಲಿ ಮತ್ತೊಂದು ವರ್ಷ ಮತ್ತೊಂದು ವಿವಿ ಹೀ ಮೈಗ್ರೇಟ್ ಆದರು.ಮೈಗ್ರೇಟ್ ಮಾಡಿಕೊಂಡ ವಿವಿಗಳು(ವಿನಾಯಕ ಮಿಷನ್ಸ್ ಹಾಗು ಆರ್ ವಿ.ಡಿ . ಯು) ಈ ಮೈಗ್ರೇಟೆಡ್ ಆದ ವಿದ್ಯಾರ್ಥಿಗಳನ್ನು ತಾತ್ಸಾರದಿಂದಲೇ ನೋಡಲಾರಂಭಿಸಿದವು. ಕೊನೆಯ ವರ್ಷದ ಪರೀಕ್ಷೆಯನ್ನು ಸರಿಯಾಗಿ ನಡೆಸಲಿಲ್ಲ. ಎಷ್ಟೋ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.ನನ್ನ್ನ ಸ್ಟಡಿ ಸೆಂಟರಿನಲ್ಲಿ  ಓದುತ್ತಿದ್ದ ಎಷ್ಟೋ ವಿದ್ಯಾರ್ಥಿಗಳಿಗೆ ನಾನೆ ಅವರ ಹಣವನ್ನು ಕೈಯ್ಯಿಂದ ವಾಪಾಸು ಮಾಡಿ ಕಳಿಸಿದ್ದೇನೆ. ಹೀಗೆ  ಲಕ್ಷಾಂತರ ರೂ ಕಟ್ಟಿದ ಈ  ಅಧ್ಯಯನ ಕೇಂದ್ರಗಳು ಹಾಗು ವಿದ್ಯಾರ್ಥಿಗಳಿಗೆ ಕೊನೆಗೂ ನ್ಯಾಯ ಸಿಗಲಿಲ್ಲ.


ಒಟ್ಟಿನಲ್ಲಿ ಆ  ದಿನಗಳೇ ಕರಾಳ ದಿನಗಳು . ಈಗಲೂ ಕೆಲವು ವಿದ್ಯಾರ್ಥಿಗಳು ವಿನಾಯಕ ಮಿಶನನಿಂದ ಅಂಕಪಟ್ಟಿಗಾಗಿ ಕಾಯುತ್ತಿದ್ದಾರೆ ಎಂದರೆ ನಂಬುತ್ತೀರಾ .ಆಲ್ ಮೋಸ್ಟ್ ಐದು ವರ್ಷಗಳಾಗಿವೆ.


ಇದೆಲ್ಲಾ ನಡೆದು ಒಂದು ಹಂತಕ್ಕೆ ಬಂದವು ಎನ್ನುವಾಗಲೆ)   ಡೀಮ್ಡ್ ಯೂನಿವರ್ಸಿಟಿಗಳಿಗೆ  ಎಷ್ಟೋ ಹಣ ಕಟ್ಟಿ   ಅಧ್ಯಯನ ಕೇಂದ್ರಗಳಾದ ಕೆಲವು ಸಂಸ್ಥೆಗಳಿಗೆ (ನನ್ನದಲ್ಲ ಸಧ್ಯ ಬಚಾವು) ಶಾಕ್ ನೀಡುವಂತೆ ನೆನ್ನೆಯ   ಪೇಪರಿನಲ್ಲಿ  ವರದಿ ಜೊತೆಗೆ ಅಲ್ಲಾ ಡೀಮ್ಡ್ ವಿವಿಗಳನ್ನು ಅಮಾನ್ಯ ಮಾಡುವುದಾಗಿ ಸೀಬೆಲ್ ರವರ ಹೇಳಿಕೆ.


ಹಾಗಿದ್ದಲ್ಲಿ ಮತ್ತೊಂದು ಚತ್ತೀಸ್ ಘಡದ ಕತೆಯಾದೀತೇ?


ವಿದ್ಯಾರ್ಥಿಗಳಿಗೆ ಡಿಗ್ರೀ ಏನೋ ಸಿಗುತ್ತದೆ. ಹಾಗೆಂದು ಸೀಬಲ್‌ರವರು ಹೇಳಿದ್ದಾರೆ.


ಆದರೆ ಇಂತಹ ವಿವಿಯಿಂದ ಡಿಗ್ರೀ ಪಡೆದಿದ್ದಾನೆ ಎಂದರೆ ಆತನಿಗೆ/ಆಕೆಗೆ ಕೆಲಸ ಸಿಗುತ್ತದೆಯೇ? ವಿವಿ ಹೇಗೆ ಇರಲಿ ವಿದ್ಯಾರ್ಥಿಗಳು .ಇತರ ವಿದ್ಯಾರ್ಥಿಗಳಂತೆ ಕಷ್ಟಾ ಪಟ್ಟು ಓದಿ ತೇರ್ಗಡೆ ಆಗಿದ್ದಾರೆ . ಅಂಥವರ ಭವಿಷ್ಯ ಏನು?


ನನ್ನ ಪ್ರಶ್ನೆ ಏನೆಂದರೆ


ಮೂಲ ಸೌಕರ್ಯಗಳು  ಇರಲಿಲ್ಲವೆಂದಾಗ  ಮಾನ್ಯತೆ ಕೊಡುವುದೇಕೆ?.


ಮೊನ್ನೆ ಪಿಯು ಕಾಲೇಜ್ ನಡೆಸಲು ಏನು ಮಾಡಬೇಕೆಂದು ಪಿಯು ಬೋರ್ಡ್ನ ಒಬ್ಬರನ್ನು ಕೇಳಿದ್ದಕ್ಕೆ್ ಇಂತಿತಾದ್ದು ಮುಂದೆ ಮಾಡ್ತೀವಿ ಅಂತ ಬರೆದು ಕೊಟ್ಟು ಪಿಯು ಕಾಲೇಜ್ ಸ್ಟಾರ್ಟ್ ಮಾಡಿ. ಸ್ವಲ್ಪ ಜನರ ಕೈ ಬಿಸಿ ಮಾಡಿದ್ರೆ ಸಾಕು ಒಂದೇ ರೂಮಿದ್ದರೂ  ಅಂಗೀಕಾರ ಕೊಡ್ತಾರೆ ಎಂದರು.


ಕೇವಲ ಪಿಯು ಮಟ್ಟದಲ್ಲಿಯೇ ಹೀಗಾದರೆ ವಿವಿಗಳ ಮಟ್ಟದಲ್ಲಿ ಎಂತಹ ಅವ್ಯವಹಾರ ನಡೆದಿರಬಹುದು?


ಅವರ ಈ ಅವ್ಯವಹಾರಗಳ ಒಳಸುಳಿಗೆ ಈಡಾಗುವವರು ವಿದ್ಯಾರ್ಥಿಗಳು ಮತ್ತು ಕೆಲವು ಮುಗ್ದ ಅಧ್ಯಯನ ಕೇಂದ್ರಗಳು(ಕೆಲವಷ್ಟೇ, ಕೆಲವು ವಿವಿಗಳನ್ನೂ ನುಂಗುವ ತಿಮಿಂಗಿಲಗಳಿವೆ ಅದು ಬೇರೆ ಮಾತು).


ದೇಶದಲ್ಲಿ  ಎಲ್ಲಾ ಕಡೆಯಲ್ಲೂ ಅನುಭವಕ್ಕೆ ಮಾನ್ಯತೆ ಕೊಡದೆ ಕೇವಲ  ವಿದ್ಯಾಭ್ಯಾಸದ ಪ್ರಮಾಣಪತ್ರಕ್ಕೆ ಮಹತ್ವ ಕೊಡುತ್ತಿರುವುದರಿಂದ  ಅದನ್ನು ಸುಲಭವಾಗಿ ಪಡೆಯಲು ವಿದ್ಯಾರ್ಥಿಗಳು ಎಲ್ಲಿ ಪರೀಕ್ಷೆಗಳು ಅಂತಹ ಶಿಸ್ತಿನಿಂದ ನಡೆಯುವುದಿಲ್ಲವೋ ಅಂತಹ ವಿವಿಗಳೆ ಬೇಕು ಎನ್ನುತ್ತಾರೆ. ಆಗಲೇ ಈ ವಿವಿಗಳಿಗೆ ಸುಗ್ಗಿ. 


ಒಟ್ಟಿನಲ್ಲಿ ಇಲ್ಲಿ ಶಿಕ್ಷಣ ಎನ್ನುವುದು ವ್ಯಾಪಾರವಾಗಿ ಬದಲಾಗಿರುವುದಂತೂ ನಿಜಾ.

Rating
No votes yet

Comments