ಆನಂದರಾಮರೇ, ನೀವು ಸಂಪದಿಗರೆನ್ನುವುದಕ್ಕೆ ನಾವು ಪಡುತ್ತಿರುತ್ತೇವೆ ಹೆಮ್ಮೆ!!!
"ಸಂಪದಿಗ ಎಚ್. ಎ. ಆನಂದರಾಮ ಶಾಸ್ತ್ರಿಗಳಿಗೆ ಮಹಲಿಂಗರಂಗ ಪ್ರಶಸ್ತಿ ಘೋಷಣೆ"
ಶಾಸ್ತ್ರಿಗಳೇ ಮಾಡಿ ಬಿಟ್ಟೀರಿ ಜೋಕೆ ಈ ಸುದ್ದಿಗೂ ಮಾಮೂಲು ಶೈಲಿಯ ವಿಡಂಬನೆ
ಹಾಸ್ಯ, ವಿಡಂಬನೆಯ ಮೆಚ್ಚುವವರು ಈ ನಾಡಿನಲ್ಲಿ ಇದ್ದಾರೆಂಬುದಕ್ಕೆ ಇದಲ್ಲವೇ ಸಾಕ್ಷಿ
ಹಾಸ್ಯ ಪ್ರಜ್ಞೆಯೇ ಇಲ್ಲದವನು ನಿರ್ಜೀವನಾಗಿದ್ದಂತೆ, ಆತನೊಳಗೆ ಇದ್ದರೂ ಪ್ರಾಣ ಪಕ್ಷಿ
ನೀವು ನಮ್ಮೆಲ್ಲರಂತೆ ಸಂಪದಿಗರೆನ್ನುವುದಕ್ಕೆ ನಾವು ನಿಜಕ್ಕೂ ಪಡುತ್ತಿರುತ್ತೇವೆ ಹೆಮ್ಮೆ
ಇಂತಹ ಸುಸಂದರ್ಭಗಳು ನಿಮ್ಮ ಜೀವನದಲ್ಲಿ ಬರುತ್ತಿರಲಿ ಮತ್ತೊಮ್ಮೆ ಮಗದೊಮ್ಮೆ
ಪ್ರಶಸ್ತಿಗಳಿಗಾಗಿಯೇ ಬರೆಯುವವರು ನೀವಲ್ಲ ಎನ್ನುವುದು ನಮಗೂ ಗೊತ್ತಿರುವ ಮಾತು
ಆದರೂ ಬರೆದುದನು ಮೆಚ್ಚಿ ಬರಹಗಾರನನು ಪುರಸ್ಕರಿಸುವವರು ಬಹಳಿಲ್ಲ ಈ ಹೊತ್ತು
ನಮ್ಮೆಲ್ಲರ ಹಾರೈಕೆಗಳು ನಿಮ್ಮಿಂದ ಹೀಗೆಯೇ ಬರೆಸುತ್ತಿರಲಿ ಇನ್ನೂ ನೂರಾರು ಕಾಲ
"ಅಭಿನಂದನೆಗಳು" ಇನ್ನು ಬರೆಯಲು ಪಡೆಯಬೇಕಾದೀತು ನಾನಿಮ್ಮಿಂದ ಪದ ಸಾಲ!!!
- ಆಸು ಹೆಗ್ಡೆ
Rating