ಹೇಳಿ ಹೋಗು ಕಾರಣ.........
ಹೇಳಿ ಹೋಗು ಕಾರಣ.........
ಹೋಗುವಾ ಮೊದಲು........
ಈ ಭಾವಗೀತೆಯನ್ನು ಯಾರು ತಾನೇ ಮರೆಯಲು ಸಾಧ್ಯ? ಭಾವಗೀತೆಗಳನ್ನು ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲಿಸಿದ ಕೀರ್ತಿ ನಿಜವಾಗಿಯೂ, ಶ್ರೀಯುತ ಅಶ್ವಥ್ ರವರಿಗೆ ಸಲ್ಲುತ್ತದೆ. ಈಗ್ಗೆ ಕಳೆದ ತಿಂಗಳು ಅವರ ಸಾವಿನ ಸುದ್ದಿ ಕೇಳಿದ ತಕ್ಷಣಕ್ಕೆ ನೆನಪಾದ ಸಾಲುಗಳಿವು. ಅವರ ಶಾರೀರದಲ್ಲಿ ಅರಳಿದ ಈ ಸುಂದರವಾದ ಗೀತೆ ಇಂದಿಗೂ ಕಿವಿಯಲ್ಲಿ ಅನುರಣಿಸುತ್ತಿದೆ. ನಿಜಕ್ಕೂ ಈ ಹಾಡಿನುದ್ದಕ್ಕೂ ಇರುವ ಸಾಲುಗಳು ಅವರನ್ನೇ ನೆನಪಿಸುತ್ತವೆ.
ಉದಾಹರಣೆಗೆ: " ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೇ......
ಇಂದ್ಯಾವ ಅಳಲು ಸೆರೆ ಉಬ್ಬಿ ಕೊರಳು
ನೀ ಮೌನ ತಾಳಿದೆ...."
ಈ ಹಾಡನ್ನು ಕೇಳಿದಾಗಲೆಲ್ಲ ಅಶ್ವಥರನ್ನು ಈ ಪ್ರಶ್ನೆ ಕೇಳುವಂತೆ ಅನಿಸುತ್ತದೆ. ಅವರು ಭಾವಗೀತೆಗಳನ್ನು ಎಷ್ಟರ ಮಟ್ಟಿಗೆ ಜನಪ್ರಿಯಗೊಳಿಸಿದರೆಂದರೆ, ಹತ್ತು ವರುಷಗಳ ಹಿಂದೆ ಯಾವುದಾದರೂ ಕಾರ್ಯಕ್ರಮದ ಮಧ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಭಾವಗೀತೆಗಳನ್ನು, "ಕನ್ನಡವೇ ಸತ್ಯ" ಎಂಬ ಕಾರ್ಯಕ್ರಮದ ಮೂಲಕ, ಇಡೀ ಕರ್ನಾಟಕದ ಮನಸ್ಸುಗಳಿಗೆ ಲಗ್ಗೆ ಇಟ್ಟರು. ಕೇವಲ ಪಾಶ್ಚ್ಯಾತ್ಯ ಸಂಗೀತದ concert ಗಳಿಗೆ ಹೋಗುತ್ತಿದ್ದ ಜನ
ಅಂದು ಒಂದು ಭಾವಗೀತೆಯ concert ಗೆ ಲಕ್ಷಾಂತರ ಜನರನ್ನು ಕನ್ನಡಕ್ಕಾಗಿ, ಸಂಗೀತಕ್ಕಾಗಿ ಒಟ್ಟಾಗಿಸಿದರು. ಈ ಕಾರ್ಯಕ್ರಮದಿಂದಾಗಿ, ಜನ ಭಾವಗೀತೆಗಳನ್ನು ಬಹು ಮಟ್ಟಿಗೆ ಗುರುತಿಸುವಂತಾಯಿತು.
ಕೇವಲ ಗೆಳೆಯರ ಬಳಿ ಕೇಳಿ ಭಾವಗೀತೆಗಳನ್ನು ಪಡೆಯುತ್ತಿದ್ದ ನಂಗೆ, ಭಾವಗೀತೆಗಳ CD ಗಳನ್ನೂ ಕೊಳ್ಳಬೇಕೆಂಬ ಹಂಬಲ ಉಂಟಾಗುವಂತೆ ಮಾಡಿದವರು ಶ್ರೀಯುತ ಅಶ್ವಥ್ ರವರು. ಅವರ ೬೦ ಹಾಡುಗಳಿರುವ CD ಯಾ ಸಂಕಲನ ಬಹಳಷ್ಟು ಮಧುರ ಗೀತೆಗಳೊಂದಿಗೆ ಇಂದಿಗೂ ಕೇಳಬೇಕಿನಿಸುತ್ತದೆ. ಅದರಲ್ಲೂ "ನಾ ಚಿಕ್ಕವನಾಗಿದ್ದಾಗ" ಮತ್ತು "ಒಂದು ಮುಂಜಾವಿನಲಿ" ಮತ್ತು ಇನ್ನಿತರ ಅದ್ಭುತ ಗೀತೆಗಳಿವೆ. ಭಾವಗೀತೆಗಳ ಮೂಲಕ ಕನ್ನಡಿಗರಿಗೆ
ಕನ್ನಡದ ಕವಿಗಳ ದರ್ಶನ ಮಾಡಿಸಿ ಇಷ್ಟೆಲ್ಲಾ ಸಾಧನೆ ಮಾಡಿದ ಈ ಭೀಷ್ಮರಿಗೆ ಇನ್ನೊಂದು ಪ್ರಶ್ನೆ
" ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ"
ನೀ ನೆಟ್ಟು ಬೆಳಸಿದ ಈ ಮರ ಫಲತೊಟ್ಟ ವೇಳೆಗೇ......
ಹೀಗೇಕೆ ಮುರಿದು ಉರುಳಿದೆ ಯಾವ ದಾಳಿಗೇ.........
ಸುಗಮ ಸಂಗೀತ ಕ್ಷೇತ್ರವನ್ನು ಇಷ್ಟು ಜನಪ್ರಿಯಗೊಳಿಸಿದ ಈ ಭೀಷ್ಮರಿಗೆ ಈ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸ ಬಯಸುತ್ತೇನೆ.
ಅವರನ್ನು ಕಾಲೇಜಿನ ಕನ್ನಡ ರಾಜ್ಯೋತ್ಸವದ ಸಮಾರಂಭದಂದು ಮುಖತಃ ಕಂಡಿದ್ದೆ ಎಂಬುದೇ ನನ್ನ ಜೀವನದ ಹರ್ಷದ ಕ್ಷಣ... ಅದನ್ನು ಎಂದಿಗೂ ಮೆಲುಕು ಹಾಕುತ್ತಿರುತ್ತೇನೆ.
Rating
Comments
ಉ: ಹೇಳಿ ಹೋಗು ಕಾರಣ.........
In reply to ಉ: ಹೇಳಿ ಹೋಗು ಕಾರಣ......... by rasikathe
ಉ: ಹೇಳಿ ಹೋಗು ಕಾರಣ.........