ಭಗತ್ ಸಿಂಗ್ ನ ಕೊನೆಯ ದಿನ ಮತ್ತು ಪುಸ್ತಕ
ಭಗತ್ ಸಿಂಗ್ ನನ್ನು ಗಲ್ಲಿಗೇರಿಸುವ ಮೊದಲು ಅವನ ಲಾಯರ್ ಅವನನ್ನು ಭೆಟ್ಟಿಯಾದರು. ನಾನು ಕೇಳಿದ ಪುಸ್ತಕ ತಂದಿದ್ದೀರಾ ? ಎಂದು ಅವರನ್ನು ಕೇಳಿದ . ಅವರು ತಂದಿದ್ದ ಪುಸ್ತಕವನ್ನು ಅವನಿಗೆ ಕೊಟ್ಟು ಅವರು ಹೋದರು. ನಂತರ ಸ್ವಲ್ಪ ಹೊತ್ತಿಗೆ ಜೈಲಿನ ಅಧಿಕಾರಿಗಳು ಅವನನ್ನು ಭೆಟ್ಟಿಯಾಗಿ ಅವನನ್ನು ಮರುದಿನ ಬೆಳಿಗ್ಗೆ ಗಲ್ಲಿಗೆ ಹಾಕುವ ಬದಲು ಅದೇ ಸಂಜೆ ಗಲ್ಲಿಗೇರಿಸಲಿರುವದಾಗಿ ತಿಳಿಸಿದರು. ಅದಾಗಲೇ ಕೆಲವು ಪುಟಗಳನ್ನು ಓದಿದ್ದ ಭಗತ್ ಒಂದು ಅಧ್ಯಾಯವನ್ನಾದರೂ ಮುಗಿಸುವಷ್ಟಾದರೂ ಅವಕಾಶ ಕೊಡಲಾರಿರಾ ? ಎಂದು ಕೇಳಿದನು.
( ಈ ತಿಂಗಳ ಮಯೂರದಿಂದ )
Rating