ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ PDF ರೂಪಕ್ಕೆ ಪುಸ್ತಕ ಇಳಿಸಿಕೊಳ್ಳುವುದು
( ಇದು ಲೀನಕ್ಸ್ ಕಾರ್ಯಕಾರಿ ವ್ಯವಸ್ಥೆಯಲ್ಲಿ ಕೆಲಸಮಾಡುತ್ತದೆ - ವಿಂಡೋಸ್ ನಲ್ಲಿ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ )
ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಕೊಂಡಿಗಳು ಸಿಕ್ಕ ಕೂಡಲೇ ಅಲ್ಲಿದ್ದ ಪುಸ್ತಕಗಳ ಪಟ್ಟಿಯನ್ನು ನೋಡಿ ಇಟ್ಟುಕೊಂಡಿದ್ದೆ , ಕಂಡ ಕೆಲವು ಒಳ್ಳೆಯ ಪುಸ್ತಕಗಳ ಕೊಂಡಿಯನ್ನೂ ನಿಮಗೆ ಈ ಬ್ಲಾಗ್ ಮೂಲಕ ಕೊಟ್ಟಿದ್ದೆ .
ಅಲ್ಲಿರೋ ಪುಸ್ತಕ ಓದಲು ಒಂದೊಂದೇ ಪುಟ ಕ್ಲಿಕ್ ಮಾಡುತ್ತಾ ಓದುತ್ತಾ ಹೋಗಬೆಕಾಗುತ್ತದೆ . ಒಂದೇ ಸಲಕ್ಕೆ ಅನೇಕ ಪುಟ ಇಳಿಸಿಕೊಂಡು ಪೀಡೀಎಫ್ ಗೆ ಬದಲಿಸಿ ಇಟ್ಟುಕೊಳ್ಳಲು ನಾನು ಹಾಕ್ಕೊಂಡಿರೋ ಉಬುಂಟು ಲೈನಕ್ಸಿನಲ್ಲಿ ಒಂದು ವ್ಯವಸ್ಥೆ ಮಾಡಿಕೊಂಡಿದ್ದೀನಿ . ಇದು ಚೆನ್ನಾಗಿ ಕೆಲಸ ಮಾಡ್ತಾ ಇದೆ.
ಎರಡು ಕಡತ ಮಾಡ್ಕೊಂಡಿರುವೆ ,
ಒಂದು dli.pl . ಅದರೊಳಗೆ ಇರೋದು ಈ ಸಾಲುಗಳು .
$file=$ARGV[0];
$start=$ARGV[1];
$end=$ARGV[2] ;
$count=0 ; while ($count <13) { chop $file ; $count++; }
while ($start <= $end )
{
print "wget " , $file, "/";
printf "%8.8d.tif\n" , $start;
printf "tiff2pdf %8.8d.tif -o %8.8d.pdf\n" , $start , $start;
$start+=1;
}
ಇನ್ನೊಂದು dli.sh ಅದರಲ್ಲಿರೋದು ಈ ಕೆಳಗಿನ ಸಾಲುಗಳು
perl dli.pl $1 $2 $3 > s
sh s
pdfjoin *.pdf --outfile ~/Desktop/$4.pdf
rm *.tif *.pdf
ಅಷ್ಟೇ !
ಇದನ್ನ ನಾನು ಹೇಗೆ ಬಳಸ್ತೀನಿ ಅನ್ನೋದನ್ನ ನಾನು ತಿಳಸ್ತೀನಿ .
ಒಂದು ಟರ್ಮಿನಲ್ ತೆರೆದು ಈ ಕಡತಗಳು ಇರೋ ಡೈರೆಕ್ಟರಿಗೆ ನಾನು ಹೋಗ್ತೀನಿ .
ಕಂಪ್ಯೂಟರ್ ಗೆ ನಾನು ನಾನು ಕೊಡೋ ಕಮ್ಯಾಂಡು / ಆದೇಶ ಹೀಗಿರುತ್ತದೆ .
./dli.sh ಡಿಎಲ್ಐನಲ್ಲಿ-ಪುಸ್ತಕದ-ಯಾವುದಾದರೂ-ಪುಟದ-ಲಿಂಕ್ ಆರಂಭ-ಪುಟದ-ಸಂಖ್ಯೆ ಕೊನೆಯ-ಪುಟದ-ಸಂಖ್ಯೆ ಪುಸ್ತಕದ_ಹೆಸರು
ಉದಾಹರಣೆಗೆ
./dli.sh http://dli.iiit.ac.i... 5 100 barako_pada
ಈ ಕಮ್ಯಾಂಡನ್ನು ಕೊಟ್ಟು ಎ೦ಟರ್ ಒತ್ತಿದ ಕೂಡಲೇ ದೀಪಾವಳಿ ಅನ್ನೋ ಕವನ ಸಂಕಲನದ ಪುಸ್ತಕದ ೫ ರಿಂದ ೧೦೦ ರವರೆಗಿನ ಎಲ್ಲ ಪುಟಗಳು ನನ್ನ ಕಂಪ್ಯೂಟರ್ ಗೆ ಇಳಿದು barako_pada.pdf ಎಂಬ ಕಡತ ನನ್ನ ಡೆಸ್ಕ್ಟಾಪ್ ಮೇಲೆ ತಯಾರು!
ಎಲ್ಲ ಸರಿ. ಡಿಎಲ್ಐನಲ್ಲಿ-ಪುಸ್ತಕದ-ಪುಟಗಳಿರೋ-ಸ್ಥಳ ಹೇಗೆ ಗೊತ್ತಾಗುತ್ತದೆ ಅಂತೀರಾ ? ಡಿಜಿಟಲ್ ಲೈಬ್ರರಿಗೆ ಹೋಗಿ ನಮಗೆ ಬೇಕಾದ ಪುಸ್ತಕದ ಹೆಸರಿನ ಮೇಲೆ ಕ್ಲಿಕ್ಕಿಸಿದಾಗ ತೆರೆಯುವ ಪುಟದಲ್ಲಿ High Bandwidth Reader ಮುಂದಿನ Click here ಮೇಲೆ ಕ್ಲಿಕ್ಕಿಸಿದಾಗ ಅದರ ಮೊದಲ ಪುಟ ಡೌನ್ಲೋಡ್ ಆಗುತ್ತೆ ತಾನೆ ? ಡೌನ್ಲೋಡ್ ಆದ ಪುಟದ ಬಗ್ಗೆ ಮಾಹಿತಿ ಮೊಝಿಲ್ಲ ಫೈರ್ಫಾಕ್ಸ್ ನ ಡೌನ್ಲೋಡ್ಸ್ ಕಿಟಕಿ( ಇದನ್ನ ಟೂಲ್ಸ್-ಡೌನ್ಲೋಡ್ಸ್ ಆಯ್ಕೆ ಮಾಡಿ ತೆರೆಯಬಹುದು) ಯಲ್ಲಿ ಇರುತ್ತದೆ ಅಲ್ಲಿ ಬಲ-ಕ್ಲಿಕ್ ಮಾಡಿದಾಗ copy download link ಅಂತ ಇರೋದನ್ನ ಕ್ಲಿಕ್ಕಿಸಿ ನಿಮಗೆ ಸಿಗುತ್ತದೆ . ಅದನ್ನ ಈ ಕಮ್ಯಾಂಡಿನಲ್ಲಿ ಪೇಸ್ಟ್ ಮಾಡಿ . ಅಷ್ಟೇ ...
[ ನಿಮ್ಮ ಕಂಪ್ಯೂಟರ್ನಲ್ಲಿ pdfjoin ಮತ್ತು tiff2pdf ಇರಬೇಕು. ಇಲ್ಲದಿದ್ದರೆ ಅದಕ್ಕೆ ವ್ಯವಸ್ಥೆ ಮಾಡಿಕೋಬೇಕು]