ವರ್ಜಿನ್ ಮೊಬೈಲ್ಗೆ ನಮ್ಮ ಒರಿಜಿನಲ್ ಭಾಷೆ ತಿಳಿದಿಲ್ಲಾ!!
ಹೊಸದಾಗಿ ಬೆ೦ಗಳೂರಲ್ಲಿ ಜಿ ಎಸ್ ಎಮ್ ಮಾರುಕಟ್ಟೆಗೆ ಕಾಲಿಟ್ಟಿರುವ ವರ್ಜಿನ್ ಮೊಬೈಲ್ ತನ್ನ ಎಲ್ಲಾ ಜಾಹಿರಾತು ಫಲಕಗಳಲ್ಲಿ ಹಿ೦ದಿ ಮತ್ತು ಇ೦ಗ್ಲಿಷ್ ಬಾಷೆಯನ್ನೇ ಉಪಯೋಗಿಸಿದೆ. ವಿಶೇಷವಾಗಿ ಯುವ ಪೀಳಿಗೆಯನ್ನೇ ಗುರಿಯಾಗಿರಿಸಿಕೊಂಡಿರುವ ಇವರು “ಗೆಳೆಯರಿಗಾಗಿ” ಎಂಬ ಅರ್ಥ ಹೊಮ್ಮಿಸುವ ಜಾಹಿರಾತುಗಳನ್ನು ಹಿಂದಿ ಭಾಷೆಯಲ್ಲಿ (ಇಂಗ್ಲಿಷ್ ಲಿಪಿಯಲ್ಲಿ) ಬೆಂಗಳೂರಿನ ಉದ್ದಗಲಕ್ಕೂ, ವಿಶೇಷವಾಗಿ ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳ ಹತ್ತಿರ ಹಾಕಿದ್ದಾರೆ.
ಕನ್ನಡದ ಯುವ ಮಾರುಕಟ್ಟೆಯನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದ ಇವರು ಕನ್ನಡಿಗನ ಮನಸ್ಸಿನಲ್ಲಿ ಹಲವು ಪ್ರೆಶ್ನೆಗಳನ್ನು ಮೂಡಿಸುತ್ತಾರೆ.
ಇವರ ಮೊಬೈಲ್ ಬಗ್ಗೆ ತಿಳಿಯಲು ಹಾಗು ಬಳಸಲು ಕನ್ನಡಿಗರು ಹಿ೦ದಿ ಕಲಿಯಬೇಕಾ?
ಭಾರತದಾದ್ಯ೦ತ ಒ೦ದೇ ಹಿ೦ದಿ ಜಾಹಿರಾತಿನಿ೦ದ ಕೆಲಸ ಮುಗಿಸ್ಕೋಬಹುದು ಅನ್ನೋದು ಇವರ ಮೊಡನ೦ಬಿಕೆನಾ?
ಹಿಂದಿ ಭಾಷೆಯ ಉಪಯೋಗದಿಂದ ಈ ತರಹದ ಕಂಪನಿಗಳು ನಾಡು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕನ್ನಡದವರು ಬೇರೆ, ಪರಭಾಷಿಕರು ಬೇರೆಯೆಂದು ಬೆರೆಳೆತ್ತಿ ತೋರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಪರಭಾಷಿಕರಿಗೇ ಹೆಚ್ಚು ಸ್ಥಾನ ಮಾನ ಕೊಡುತ್ತಿದೆ.
ಈಗಿನ ಜಗತ್ತಿನಲ್ಲಿ ಸ್ಥಳೀಯ ಭಾಷೆನೇ ಫ್ಯಾಷನ್ ಅಂತ ಇವರಿಗೆ ಗೊತ್ತಿಲ್ಲ ಅಂತ ಕಾಣತ್ತೆ. ಇನ್ನೂ ಓಬಿರಾಯನ ಕಾಲದ ಸಂಪ್ರದಾಯಾನೆ ಅನುಸರಿಸುತ್ತಿರುವ ಇವರು ಹೊಸ ಟ್ರೆಂಡ್ ನ ಅರ್ಥ ಮಾಡ್ಕೋಂಡೇ ಇಲ್ಲ ಅನ್ನೋದು ಅವರ ಜಾಹಿರಾತುಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಹೀಗೆ ಕನ್ನಡದ ಅಳವಡಿಕೆಯಿಂದ ಆಪರೇಟರ್ಗೆ ಅಷ್ಟೇ ಅಲ್ಲದೆ ಗ್ರಾಹಕರಾದ ನಮಗೂ ಬಹಳ ಅನುಕೂಲಗಳುಂಟು.
೧) ಕನ್ನಡದ ಬೇಡಿಕೆಯಿಂದ ನಮಗೆ ಹೆಚ್ಚು ಹೆಚ್ಚು ಕನ್ನಡದ ಸೇವೆಗಳು ಸಿಗುತ್ತವೆ. (Caller Tune, Customer Care Service, Billing, Web content, Kannada Music, ಮತ್ತಷ್ಟು)
೨) ಕನ್ನಡದಲ್ಲೇ ವ್ಯವಹರಿಸಲು ಇಷ್ಟ ಪಡುವ ನಮಗೆಲ್ಲಾ ಹಾಗು ನಮ್ಮ ಮನೆಯ ಹಿರಿಯರಿಗೆಲ್ಲಾ ಬೇರಾವ ಭಾಷೆಯ ಸಹಾಯ ಅಗತ್ಯವಿರುವುದಿಲ್ಲ.
೩) ನಮ್ಮ ಹಾಗು ನಮ್ಮ ಆಪರೇಟರ್ ನಡುವೆ ಭಾಂದವ್ಯ ಹೆಚ್ಚುತ್ತದೆ.
ಈಗಾಗಲೆ ೧೧ ಸರ್ವೀಸ್ ಪ್ರೊವೈಡರ್ಸ್ ಇರುವ ನಮ್ಮ ಕರ್ನಾಟಕದ ಮಾರುಕಟ್ಟೆಯಲ್ಲಿ ಲಾಭ ಗಳಿಸಬೇಕಾದರೆ ಕನ್ನಡಿಗರನ್ನೇ ಆಕರ್ಷಿಸಬೇಕು. ಎಲ್ಲಿಂದಲೋ ಬಂದ ಕೆಲವರನ್ನು ಗುರಿಯಾಗಿಸಿಕೊಂಡು ವ್ಯಾಪಾರ ಮಾಡುವರು ಯಾರೂ ಉದ್ದಾರ ಆಗುವುದಿಲ್ಲ. ಹೆಚ್ಚು ಹೆಚ್ಚು ಸರ್ವೀಸ್ ಪ್ರೊವೈಡರ್ಸ್ ಬಂದಷ್ಟೂ ಮಾರುಕಟ್ಟೆ ವಿಭಜನೆಯಾಗುವುದರಿಂದ ಪ್ರತಿಯೊಬ್ಬರಾ ಮಾರುಕಟ್ಟೆ ಪಾಲು ಕಡಿಮೆಯಾಗುತ್ತದೆ. ಭಾರತದ ಶೇ ೯ ರಷ್ಟು ಗ್ರಾಹಕರಿರುವ ಕರ್ನಾಟಕದಲ್ಲಿ ಕನ್ನಡ ಮಾತ್ರ ನಡೆಯೋದು ಮತ್ತು ಅದನ್ನು ಒಪ್ಪಿದರೆ ಮಾತ್ರ ನೀವು ಬೆಳೆಯೋದು ಅ೦ತ ಇವರಿಗೆ ಎಲ್ಲರೂ ಒ೦ದಾಗಿ ಹೇಳೋಣ.
ಇವರಿಗೆ ಈ ಕೆಳಗಿನ ಮಿಂಚೆಯ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.
ಇಂತಿ,
ನಂದನ್
Comments
ಉ: ವರ್ಜಿನ್ ಮೊಬೈಲ್ಗೆ ನಮ್ಮ ಒರಿಜಿನಲ್ ಭಾಷೆ ತಿಳಿದಿಲ್ಲಾ!!
ಉ: ವರ್ಜಿನ್ ಮೊಬೈಲ್ಗೆ ನಮ್ಮ ಒರಿಜಿನಲ್ ಭಾಷೆ ತಿಳಿದಿಲ್ಲಾ!!