ಎಲ್ಲಿಗೋ ತಿರ್ಗಾಟ

ಎಲ್ಲಿಗೋ ತಿರ್ಗಾಟ

ಶುಕ್ರವಾರ ನಾನು, ಹರಿ ಪ್ರಸಾದ್ ನಾಡಿಗರು ಕ್ಯಾಮರಾ, ಲೆನ್ಸು ಅಂತ ಚಿಕ್ಕಪೇಟೆ ಅಲೀತಾ ಇರ್ಬೇಕಾದ್ರೆ ನನ್ನ ಫ್ರೆಂಡಿನ ಫೋನ್ ಬಂತು.

ಸ್ಕಂದ: ಎಲ್ಲಿದೀಯ

ನಾನು: ಚಿಕ್ಕ ಪೇಟೆ

ಸ್ಕಂದ: ವೀಕೆಂಡ್ ಏನ್ ಪ್ಲಾನು

ನಾನು: ಏನೂ ಇಲ್ಲ

ಸ್ಕಂದ: ಎಲ್ಲಿಗಾದ್ರೂ ಹೋಗೋಣ

ನಾನು: ಸರಿ ಎಲ್ಲಿಗೆ?

ಸ್ಕಂದ: ಗೊತ್ತಿಲ್ಲ, ಸುಮ್ನೆ ಮೈಸೂರ್ ರೋಡಲ್ಲಿ ಹೋಗೋಣ.. ಎಲ್ಲಿಗೆ ಅಂತ ಆಮೇಲೆ ಡಿಸೈಡ್ ಮಾಡಿದ್ರಾಯ್ತು

ನಾನು: ಸರಿ, ಯಾವಾಗ?

ಸ್ಕಂದ: ಇನ್ನು ೨೦ ನಿಮಿಷದಲ್ಲಿ ನ್ಯಾಷನಲ್ ಮಾರ್ಕೇಟ್ ಹತ್ರ ಸಿಕ್ತೀನಿ

ನಾನು: ಸರಿ

ಹೀಗೆ ಗೊತ್ತು ಗುರಿ ಇಲ್ದೆ ಹೊರ್ಟಿದ್ ನಾವು ಶುಕ್ರವಾರ ರಾತ್ರಿ ೧೧ಗಂಟೆಗೆ ತಲುಪಿದ್ದು ಮೇಲುಕೋಟೆ. ರಾತ್ರಿ ಜನಸಂಚಾರವಿಲ್ದೆ ಉಳಿಯೋದು ಎಲ್ಲಿ ಗೊತ್ತಾಗ್ದೆ ಮಲ್ಗಿದ್ದು ದೇವಸ್ಥಾನದ ಜಗಲೀಲಿ. ಸ್ವಲ್ಪ ಬೆಳದಿಂಗಳು, ಹೊಳೆಯೋ ನಕ್ಷತ್ರ ಇದ್ದಿದ್ರಿಂದ ಅಲ್ಲೇ ಪಕ್ಕದಲ್ಲಿರೋ ಒಂದು ಗುಡ್ಡ ಹತ್ತಿ ಆಕಾಶ ಕಾಯ, ಪ್ರಪಂಚ, ವಿಶ್ವ, ಅಣು, ಜೀವ ವಿಕಾಸ, ಓಷೋ, ಪತಂಗ, ಪ್ರೀತಿ, ಪ್ರೇಮ, ನಿಸ್ವಾರ್ಥ ಪ್ರೀತಿ, ಆಯ್ಕೆ ಮತ್ತು ನಿಸ್ವಾರ್ಥ ಪ್ರೀತಿ ಹೀಗೆ ಏನೇನೋ ತಲೆಗೆ ಬಂದಿದ್ದೆಲ್ಲಾ ಹರ್ಟ್ತಾ ೧:೩೦ರ ಹೊತ್ತಿಗೆ ಮಲ್ಗೋದು ಎಲ್ಲಿ ಎಂತ ಎದ್ವಿ. ನಾವು ತಂದಿದ್ದ ಟೆಂಟು ಹಾಕೊದು ಎಲ್ಲಿ ಅಂತ ಗೊತ್ತಾಗ್ದೆ, ದೇವಸ್ಥಾನದ ಜಗಲಿಯಲ್ಲಿ ಕೊರೆಯುವ ಚಳೀಲಿ ಮಲ್ಗಿದ್ದಾಯ್ತು.

ಮರುದಿನ ಬೆಳ್ಗೆ ಬೇಗ ಎದ್ದು ಮೊದ್ಲು ಮಾಡಿದ್ ಕೆಲ್ಸ, ವಾರ್ಮಪ್ ಆಗ್ಲಿ ಅಂತ ಸ್ವಲ್ಪ ನಡೆದಿದ್ದು. ನಂತ್ರ ಅಲ್ಲೇ ರಸ್ತೆ ಬದಿ ಕಸದ ರಾಶಿ ಇದ್ದಿದ್ರಿಂದ ಬೆಂಕಿ ಹಾಕಿ ಬೆಚ್ಚಗಾಗಿ ನನ್ನ ಹೊಸ ಲೆನ್ಸು (ನಿಕಾರ್ ೭೦-೩೦೦ ವಿ.ಆರ್) ಹೇಗಿದೆ ಅಂತ ಟ್ರೈ ಮಾಡಿದೆ. ಸಕ್ಕತ್ ಇಷ್ಟ ಆಯ್ತು. ಅದ್ರಲ್ಲೂ ಜನರ ಕ್ಯಾಂಡಿಡ್ ಪೋಟೋ ತೆಗೆಯೋಕೆ ಸಕ್ಕತ್ ಲೆನ್ಸು. ಆಮೇಲೆ ಅಲ್ಲೇ ಒಂದ್ಕಡೆ ರೂಮ್ ಮಾಡಿ, ಭಾನುವಾರದವರೆಗೂ ಊರೆಲ್ಲಾ ಅಲ್ದು ಮನೆಗೆ ಬಂದ್ವಿ. ತಿರ್ಗಾಟದಲ್ಲಿ ನನಗಿಷ್ಟವಾದ ಚಿತ್ರ ಇದು, ಮೀನು ಹಿಡಿಯೋ ಬೆಸ್ತಂದು. ಇನ್ನಷ್ಟು ಫೋಟೋ ಇಲ್ಲಿದೆ (ನನ್ ಫ್ಲಿಕರ್ ಪ್ರೋ ಅಕೌಂಟ್ ಎಕ್ಸ್ಪೈರ್ ಆದ್ರಿಂದ ಎಲ್ಲಾ ಫೋಟೋ ಹಾಕೋಕೆ ಆಗ್ಲಿಲ್ಲ ). CSC_4016

Rating
No votes yet

Comments