ಅಪರಿಚಿತೆ - parcel - ಗ್ರಾಮಸಿಂಹ
ನನ್ನ ಸ್ನೇಹಿತ ಪ್ರವೀಣ್, ಅವನು ಕೆಲಸ ಮಾಡುವ ಹಾಸನದಿಂದ ನನಗಾಗಿ ಒಳ್ಳೆ ಕಾಫಿ ಪುಡಿ, ಯಾಲಕ್ಕಿನ ಅವನ ಅಲ್ಲಿನ ಸ್ನೇಹಿತೆಯೊಡನೆ ಬೆಂಗಳೂರಿಗೆ ಕಳುಹಿಸಿದ್ದ, ಅದನ್ನು ಅವರಿಂದ ಪಡೆಯಲು ನಾನು ಏಳನೇ ಫೇಸ್ ಜೆ ಪಿ ನಗರಕ್ಕೆ ತೆರಳಬೇಕಿತ್ತು, ನನಗೆ ದಾರಿ ಗೊತ್ತಿಲ್ಲದ ಕಾರಣ, ಅವರನ್ನು ಜಯನಗರಕ್ಕೆ ಬರಹೇಳಿ ಅಲ್ಲಿಂದ ಇಬ್ಬರು ಹೊರಟೆವು. ಅಪರಿಚಿತಳಾದ ಹುಡುಗಿ, ಅಪರಿಚಿತವಾದ ಜಾಗ, ಅವರಮನೆ ಇದ್ದದ್ದು ಏಳನೇ ಫೇಸ್ ಜೆ ಪಿ ನಗರದ ಬ್ರಿಗೆಡ್ ಮಿಲೆನಿಯಂ ಬಳಿ ಇರುವ ಗೌರವನಗರದಲ್ಲಿ. ಈ ಮಹಾನಾಗರದ ಆ ಭಾಗಕ್ಕೆ ಹೋಗಿದ್ದೆ ಇಲ್ಲ ನಾನು, ಸರಿ, ದಾರಿ ತೋರುತ್ತ ಬರುತ್ತಿದ್ದ ಅವಳು, ಇಲ್ಲೇ ಎಡಗಡೆ ತಿರ್ಕೊಬೇಕು, ಸ್ವಲ್ಪ ನಿಧಾನವಾಗಿ ಚಲಿಸಿ ಅಂದಳು, ಒಹ್! ಇಲ್ಲೇ ಮೂಲೆಲೆ ಇರ್ಬೇಕು ಮನೆ ಅನ್ಕೊಂಡೆ, ಆದರೆ ನನಗೆ ಗ್ರಾಮ ಸಿಂಹಗಳ ಸ್ವಾಗತ ಕಾದಿದೆ ಅಂತ ಗೊತ್ತಿರ್ಲಿಲ್ಲ! ಇಲ್ಲೇ ಒನ್ ನಿಮಿಷ ನಿಲ್ಸಿ ಕೋಲ್ ತೊಗೋತೀನಿ ಅಂದ್ಲು ಅವಳು! ಅಬ್ಬ ಇದೇನಿದು ಕೋಲು ಗೀಳು ಅನ್ತಿದಾಳೆ? ನಾನ್ ಏನ್ ಮಾಡ್ದೆ ಅನ್ನಿಸ್ತು? ತಡಮಾಡದೆ ಹೇಳಿದಳು, ಇಲ್ಲ ತುಂಬಾ ನಾಯಿಕಾಟ ಕಂಡ್ರಿ ಇಲ್ಲಿ, ಎಲ್ಲ ಒನ್ ಕೋಲ್ ತೊಗೊಂಡೆ ಹೋಗೋದು ಈ ರಸ್ತೇಲಿ ಅಂದ್ಲು, ಅಬ್ಬಾ ಅದೇನ್ ನಾಯಿ ಅದೇನ್ ಅದರ ಅರ್ಭಟ ಕಿರಚಾಟ ? ಒನ್ ನಿಮಿಷ ಹೃದಯ ಬಡಿತ ನಿನ್ತೆಹೊಯ್ತು, ನನ್ನ ಗೆಳೆಯ ವಿನಾಯಕ ಹೀಗೆ ಒನ್ ಸಲಿ ನಾಯಿ ಅಟ್ಟಿಸ್ಕೊಂಡ್ ಬಂದಾಗ ಏನ್ ಮಾಡ್ಬೇಕು ಅಂತ ಹೇಳಿದ್ದ, ಅವನ್ನೇ ನೆನಿಸ್ಕೊಂಡು, ದೇವರಿಗೆ ಮನಸಿನಲ್ಲೇ ನಮಸ್ಕಾರ ಹಾಕಿ, ಗಾಡಿ ವೆಗಾನ ಅತಿಕಡಿಮೆ ಮಾಡಿ, ಹೆಡ್ ಲೈಟ್ ಆರಿಸಿ, ಮೆಲ್ಲಗೆ ಹೊರಟೆ, ಗ್ರಹಚಾರಕ್ಕೆ ಎಲ್ಲ ಆರು ಏಳು ನಾಯಿಗಳು ನಮ್ಮ ಸುತ್ತಾನೆ ಸುತ್ ಬೇಕ? ಯಾವ್ದೋ ಸರಕಾರೀ ಅಧಿಕಾರಿನ ರೈತರು ಘೆರಾವ್ ಮಾಡಿದ ಹಾಗೆ...!! ಅಬ್ಬ! ಬಂದೆ ಬುಟ್ಟಿತ್ತು ಪ್ರಾಣ ಕೈಗೆ! ಒನ್ ದಲ್ಲ ಎರಡಲ್ಲ! ಹಸಿದ ರೇಗಿದ ಆರು ಏಳು ಗ್ರಾಮ ಸಿಂಹಗಳು! ಅಷ್ಟರಲ್ಲಿ ಆಕೆ ತನ್ನ ಮನೆಗೆ ಕರೆಯೊಂದನ್ನ ಮಾಡಿದ್ದಳು, ಅವರ ಚಿಕ್ಕಪ್ಪ ಒಂದು ಮುರಿದ ಕ್ರಿಕೆಟ್ ಬಾಟ್ ತೊಗೊಂಡು ಗಂಡುಗಲಿ ಕುಮಾರರಾಮ ಬಂದಹಾಗೆ ಬಂದ್ರು! ಅದನ್ನು ನೋಡಿದ್ದೇ ತಡ, ಎಲ್ಲ ನಾಯಿಗಳು ಪರಾರಿ! ಬದುಕಿದೆಯ ಬಡಜೀವ ಅಂತ ಅವರಮನೆಗೆ ಹೋದೆ!
ಪಾಪ ನನ್ನ ನೋಡಿ ಆ ಮನೆಯವರಿಗೆ, ಆ ಹುಡುಗಿಗೆ ಏನ್ ಅನ್ನಿಸ್ತೋ ಏನೋ? ನೀರು ಹಾಲು ಎಲ್ಲ ಕೊಟ್ಟು ಉಪಚಾರ ಮಾಡಿದ್ರು! ನಂತರ ಒಂದೆರಡು ನಿಮಿಷ ಮಾತನಾಡಿಸಿ, ಕಳುಹಿಸಿ ಕೊಟ್ಟರು! ಅಷ್ಟಕ್ಕೇ ಮುಗಿಯಲಿಲ್ಲ! ಮುರಿದ ಕ್ರಿಕೆಟ್ ಬಾಟ್ ನೋಡಿದ್ರು ಮತ್ತೆ ನನ್ನ ಗಾಡಿ ಬೆನ್ನು ಹತ್ತಿ ನನ್ನನ್ನ ತಿನ್ನುವಹಾಗೆ ನನ್ನ ಮುತ್ತ ಬಂದವು! ಗಾಡಿಯನ್ನ ವೇಗವಾಗಿ ಚಲಿಸಿ ಹೊರಟೆ ಬುಟ್ಟೆ! ಅಬ್ಬಾ! ಆ ರಸ್ತೆ ಇಂದ ಹೊರಬರುವಷ್ಟರಲ್ಲಿ ಎಲ್ಲ ದೇವರುಗಳು, ತಂದೆ ತಾಯಿ ಬಂಧು ಭಾಂದವರು, ಸ್ನೇಹಿತರು ಎಲ್ಲ ನೆನಪಾದರು! ಮುಖ್ಯ ರಸ್ತೆ ಮುಟ್ಟಿದಾಗ, ಒಹ್! ನನ್ನ ಜೀವ ಇನ್ನು ಗಟ್ಟಿಯಾಗಿದೆಅನ್ನಿಸ್ತು!
ಆದರೆ, ನನ್ನ ಯೋಚನೆ ಅಷ್ಟಕ್ಕೇ ನಿಲ್ಲಲಿಲ್ಲ, ಆ ನಾಯಿಗಳೊಡನೆ ಅಲ್ಲಿಯ ಜನ ಅದು ಹೇಗಾದರೂ ಬದುಕುತ್ತಿದ್ದರೋ ಅನ್ನಿಸ್ತು. ಪ್ರಾಹಯ ಆ ನಾಯಿಗಳಿಗೆ, ಮನುಷ್ಯನ, ಗಾಡಿಗಳ ನೆರಳು ಕಂಡರೂ ಆಗದ ಮನಃ ಸ್ತಿತಿ ಇತ್ತು ಅಂತ ಅನ್ಸತ್ತೆ! ಅವುಗಳಿಗೆ ಇವ್ಯಾವುದನ್ನು ಕಂಡರೂ ಒಂದು ತರಹದ irritation! ಅನ್ಸತ್ತೆ! ಅದಿಕ್ಕೆ ಹೀಗ್ ಆಡ್ತಾವೋ ಏನೋ? ಆದರು, ಅಲ್ಲಿಯ ಜನ ಬಹಳ ಧೈರ್ಯವಂತರು ಅಂತ ಪ್ರಾಣಾಂತಿಕವಾದ ನಾಯಿಗಳೊಡನೆ ಕಯ್ಯಲ್ಲಿ ಕೋಲು ಹಿಡಿದು ಜೀವನ ನಡೆಸುತ್ತಿದ್ದಾರೆ!
ಕಣ್ಣು ಮುಚ್ಚಿ ಕೂತಿರುವ ಭೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯವರನ್ನು ಮನದಲ್ಲೇ ಶಪಿಸಿ,
ಜೈ ಬೆಂಗಳೂರಿಗ! ನಿನಗೆ ಸದಾ ಗ್ರಾಮ ಸಿಂಹಗಳ ಮೇಲೆ ಜಯ ದೊರೆಯಲಿ!
_ವಾದಿರಾಜ