ರಾಷ್ಟ್ರೀಯ ಹಬ್ಬಗಳ ದಿನ ಸಾರ್ವಜನಿಕ ರಜೆ ಅರ್ಥವಿಲ್ಲದ್ದು!

ರಾಷ್ಟ್ರೀಯ ಹಬ್ಬಗಳ ದಿನ ಸಾರ್ವಜನಿಕ ರಜೆ ಅರ್ಥವಿಲ್ಲದ್ದು!

Comments

ಬರಹ

ಇವತ್ತು ಬೆಳಿಗ್ಗೆ ಗಣರಾಜ್ಯೋತ್ಸವದ ಹುರುಪಿನಲ್ಲಿ ರಾಷ್ಠ್ರಧ್ವಜಕ್ಕೊಂದು ಸಲಾಮು ಹೊಡೆದುಬರೋಣವೆಂದು ಕಛೇರಿಗೆ ಹೋದರೆ ಅವರು ಬರಲ್ಲಾ ಅಂತ ಇವರು, ಇವರು ಬರಲ್ಲಾ ಅಂತ ಅವರು ಒಟ್ಟಲ್ಲಿ ಒಟ್ಟೂ ನೌಕರರ ೨೦% ದಷ್ಟು ಜನ ಕೂಡ ಇರಲಿಲ್ಲ. ಕೆಲವರಿಗೆ ಇವತ್ತೇ ಹುಷಾರಿಲ್ಲ, ಮತ್ತೆ ಕೆಲವರಿಗೆ ಅರ್ಜೆಂಟು ಕೆಲಸ. ಮತ್ತೆ ಕೆಲವರು ಪಾಪ ಬೇರೆ ಊರಿಂದ ಓಡಾಡುವವರು. ’ನಿಮಗೇನು ಹೇಳಿ, ಕಷ್ಠ, ತಾಪತ್ರಯ ಏನೂ ಇಲ್ಲ. ಭಾಷಣ ಮಾಡೋದಕ್ಕೆ ವೇದಿಕೆ ಸಿಗುತ್ತೆ ಅನ್ನೋ ಖುಷಿ’- ಸಹೋದ್ಯೋಗಿ ಚುಡಾಯಿಸಿದ್ದೋ, ವಾಸ್ತವ ಕುರಿತು ವಿಮರ್ಶೆ ಮಾಡಿದ್ದೋ ಗೊತ್ತಾಗಲಿಲ್ಲ.

ಅಲ್ಲ, ನಮಗೆಲ್ಲ ಏನಾಗಿದೆ. ದೇಶದ ಹಬ್ಬವನ್ನು ಮನೆಯ, ಮನದ ಹಬ್ಬವನ್ನಾಗಿ ಆಚರಿಸದೆ ಹೀಗೆ ಒಂದು ಸಾಮಾನ್ಯ ರಜೆಯಂತೆ ಅನುಭವಿಸುವುದು ತಪ್ಪಲ್ಲವೇ? ಅದರ ಬದಲು ರಾಷ್ಠ್ರೀಯ ಹಬ್ಬಗಳಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲೇಬೇಕೆಂಬ ಕಾನೂನು ತಂದರೆ ಒಳ್ಳೆಯದು. ಆ ಹೆದರಿಕೆಯಿಂದಲಾದರೂ ಸಂಬಳಕ್ಕೆ ಬಿದ್ದ ನೊಣಗಳು ರಾಷ್ಠ್ರ ಭಕ್ತಿ ತೋರಿಯಾವು.

ಅಲ್ಲದೇ ಇವತ್ತು ಮಂಗಳವಾರ. ಸೋಮವಾರ ಒಂದು ರಜೆ ಎಳೆದುಕೊಂಡರೆ ಮೂರುದಿನ ಆರಾಮಾಗಿ ಎಂಜಾಯ್ ಮಾಡಬಹುದೆನ್ನುವ ಅಪ್ಪಟ ಮನುಷ್ಯ ಸಹಜ ಲೋಭ. ಮನೆಯಲ್ಲಿ ಮಕ್ಕಳ ಹುಟ್ಟಿದ ಹಬ್ಬ, ನಮ್ಮ ವೆಡ್ಡಿಂಗ್ ಆನಿವರ್ಸಿರಿ. ಅಪ್ಪನ ತಿಥಿ ಎಂದೆಲ್ಲ ರಜೆ ಹಾಕುವ ನಾವು ದೇಶದ ಹಬ್ಬಗಳಲ್ಲಿ ಹೀಗೆ ಒಂದಿಡೀ ದಿನವನ್ನು ವ್ಯರ್ಥವಾಗಿ ವ್ಯಯಿಸುವುದು ತಪ್ಪಲ್ಲವೆ. ಅದರ ಬದಲು ಜನವರಿ ೨೬, ಆಗಸ್ಟ್ ೧೫, ಅಕ್ಟೋಬರ್ ೨ರ ದಿನಗಳಲ್ಲಿ ಸಂಪೂರ್ಣ ಕೆಲಸ ಮಾಡಿ-ಜಪಾನಿಯರಂತೆ-ನವೂ ನಮ್ಮ ದೇಶಭಕ್ತಿ ತೋರಿಸಬಹುದಲ್ಲವೇ? ಏನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet