ಉತ್ತರ ಕರ್ನಾಟಕ ಶೈಲಿಯಲ್ಲಿ ಈಗ "ಬಾಲಿವುಡ್ ಸಿನಿಮಾಗಳ" ಸರದಿ..
ಈ ಲೇಖನದ ಮೂಲ ನನ್ನ ಬ್ಲಾಗಿನಂಗಳ:- http://shivagadag.blogspot.com
ಕಳೆದ ಬಾರಿ ನನ್ನ ಸ್ನೇಹಿತ ನಾಗರಾಜ್ ಹಾಗೂ ಅವೀನ್ ಕುಮಾರ್ ಕಳಿಸಿದ್ದ "ಉತ್ತರ ಕರ್ನಾಟಕ ಧಾಟಿಯಲ್ಲಿ ಹಾಲಿವುಡ್ ಸಿನಿಮಾಗಳು" ಲೇಖನವನ್ನು ಬಹಳ ಮಂದಿ ಇಷ್ಟಪಟ್ಟಿದ್ದರು. ಇದಕ್ಕೆ ಸಾಕ್ಷಿ ಹೆಚ್ಚಿನ ಕಾಮೆಂಟುಗಳು ಮತ್ತು ವೀಕ್ಷಕರು.(ಹಿಂದಿನ ಯಾವ ಲೇಖನಕ್ಕೂ ಇಷ್ಟು ವೀಕ್ಷಕರು ಬಂದಿರಲಿಲ್ಲ ಹಾಗೂ ಕಾಮೆಂಟುಗಳು ಬಂದಿರಲಿಲ್ಲ.)
ಇದೇ ರೀತಿ "ಉತ್ತರ ಕರ್ನಾಟಕ ಧಾಟಿಯಲ್ಲಿ ಬಾಲಿವುಡ್ ಸಿನಿಮಾಗಳು" ಬರೀಬೋದಲ್ವಾ ಅಂತಾ ಅವಧಿ ಬ್ಲಾಗ್ ನ ಸುನಾಥ ಕಾಕ ಮತ್ತು ಇಟ್ಟಿಗೆ ಸಿಮೆಂಟು ಬ್ಲಾಗಿನ 'ಬ್ಲಾಗ್ ಲೋಕದ ಸಜ್ಜನ' ಅಂತಾ ಖ್ಯಾತಿವೆತ್ತ ಪ್ರಕಾಶಣ್ಣ ಐಡಿಯಾ ಕೊಟ್ಟಿದ್ದರು.. ಇರಲಿ ನೋಡೋಣಾ ಅಂತಾ ಒಂದು ಸಣ್ಣ ಪ್ರಯತ್ನ ಮಾಡ್ತಿದೀನಿ...
1) Paa..................ಯಪ್ಪಾ!
2) Three idiots....ಮೂರು ಮಂಗ್ಯಾಗೋಳು. (1 ಮತ್ತು 2 ಸುನಾಥ ಕಾಕಾ)
3) Dhadkan........ಎದಿ ಗುಂಡಗಿ ಸದ್ದು
4) Hum Aap ke Hain Koun.....ನೀ ನಂಗೇನಾಗ್ಬೇಕಾಗೈತಿ?
5) Nani.........ಯಮ್ಮಾ ಬೇ
6)Nartaki....ಮನ್ಯಾಗ ಡ್ಯಾನ್ಸ್ ಮಾಡಾಕಿ
7) Kaho na pyaar hain... ಲವ್ ಮಾಡ್ತೀ ಇಲ್ಲಾ?
8) Mission Kashmir.... ಬೆಳಗಾಂವ್ ನ್ಯಾಗೊಂದು ಮಿಶಿನ್ನು
9) Hadh kar di aapne.... ನಿಂದು ಭಾಳ ಆಗ್ಯಾತೀ
10) Hamara dil aapke paas hain...ನಂ ಕಡೆ ಇದ್ದಿದ್ದು ನಿಂ ಕಡೆ ಐತಿ
11) He Raam,... ಲೇ ರಾಮ್ಯಾ..
12) Le chale apna sang... ನಿಂ ಜೋಡಿ ಕರ್ಕೊಂಡು ಹೋಗು
13) Papa the great.. ಯಪ್ಪಾ, ನೀನಾ ದೊಡ್ಡಂವಾ..
14) Raju chacha.. ರವ್ಯಾ ಕಾಕಾ
15) Tera jadoo chal gaya.. ನೀ ಮಾಟ ಮಾಡ್ಸಿದ್ದು ಆಗ್ಯಾತಿ ನೋಡು
16) Indian.. ನಮ್ಮೂರ್ನಾಗಿನ್ ರೈತ
17) Dil chahta hain... ನನ್ನ ಹೃದಯ ಕೇಳಕತ್ಯಾತಿ
18) Chori chori chupke chupke... ಒಳೊಳ್ಗ ಕದ್ದು ಮುಚ್ಚಿ
19) Mujhe Kuch Kehna Hain... ನಾ ಏನಾ ಒಂದ್ ಹೇಳವ ಅದೀನಿ
20)Awara Paagal Deewana.. ಯಡಿಯೂರಪ್ಪ-ದೇವೇಗೌಡ ಮತ್ತ ನಮ್ ಕರ್ನಾಟಕ
21) Hum Tumhare Hain Sanam.. ನಾ ನಿನ್ನವಾಂ ಅದೀನಿ..
22) Ankhiyon se goli maare.. ಕಣ್ಣಿಂದ ಗುಂಡಾ ಆಡ್ತಾಳ
23) Chalo ishq ladaye.. ಪಟಾಸೋಕ ಗುದ್ದಾಡೋಣು ಬಾ..
24) Main Hu naa.. ನಾ ಇರ್ತೀನಿ, ಚಿಂತಿ ಬಿಡು..
25) Hum Kisise Kam Nahin... ನಾ ಯಾವಳ್ಗಿಂತ ಕಮ್ಮಿ ಇಲ್ಲೇಳು..
26) Khalnayakon ka Khalnayak.. ಗುಂಡಾಗಳ ಗ್ಯಾಂಗಿನ ಮಾವ
27) Tumko naa bhool payenge... ನಾ ಮರೆತಿಲ್ಲ ನಿನ್ನ ಹಳ್ಳಿ, ನೆನಪು ಬರತೈತಿ ವಳ್ಳಿ ವಳ್ಳಿ
28) Munnabhai MBBS.. ಬಸ್ಯಾ MBBS
29) Darna Mana Hain.. ಹೆದರಿ ಸಾಯ್ ಬೇಡ್ ಲೇ
30) Ek Din 24 Ghante... ಒಂದ್ ದಿವ್ಸ್ ಅಂದ್ರ ಇಪ್ಪತ್ನಾಲ್ಕು ತಾಸು
31) Escape from Taliban.. ವಿಜಾಪೂರ ಗಲ್ಲಿನಾಗಿಂದ ತಪ್ಪುಸ್ಕೊಂಡು ಬಂದಾವ
ನಿಮಗೆ ಯಾವುದಾದರೂ ಹೊಳೆದಿದ್ದರೆ, ದಯವಿಟ್ಟು ಕಾಮೆಂಟಿನಲ್ಲಿ ತಿಳಿಸಿ ಅಥವಾ ನನಗೆ shivagadag@gmail.com ಗೆ ಮಿಂಚಂಚೆ ಕಳಿಸಿ...
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
Comments
ಉ: ಉತ್ತರ ಕರ್ನಾಟಕ ಶೈಲಿಯಲ್ಲಿ ಈಗ "ಬಾಲಿವುಡ್ ಸಿನಿಮಾಗಳ" ಸರದಿ..
In reply to ಉ: ಉತ್ತರ ಕರ್ನಾಟಕ ಶೈಲಿಯಲ್ಲಿ ಈಗ "ಬಾಲಿವುಡ್ ಸಿನಿಮಾಗಳ" ಸರದಿ.. by thesalimath
ಉ: ಉತ್ತರ ಕರ್ನಾಟಕ ಶೈಲಿಯಲ್ಲಿ ಈಗ "ಬಾಲಿವುಡ್ ಸಿನಿಮಾಗಳ" ಸರದಿ..