ಕೆಲವು ಪ್ರಸಂಗಗಳು

ಕೆಲವು ಪ್ರಸಂಗಗಳು

ಬರಹ

೧. ಬಂದಿರೋದು ಅಣ್ಣ ಅಲ್ವ ?

ಆಗಷ್ತ ಕೆಲಸ ಸೇರಿದ್ದೆ . ಊರಿಗೆ ಹೋಗಿದ್ದಾಗ ಪರಿಚಿತರ ಮನೆಗೆ ಹೋಗ ಬೇಕಾದ ಪ್ರಸಂಗ ಬಂದಿತ್ತು . ಗೇಟ್ ತೆಗೆದ ಕೂಡಲ ಅದೆಲ್ಲಿತ್ತೋ ಡಾಬರ್ಮನ್  ಹುಟ್ಟಿದ ಮೇಲೆ ಮನುಶ್ಯರನ್ನೆ ನೋಡದವರಂತೆ ಬೊಗಳುತ್ತಾ ಬಂತು . ಇನ್ನೇನು ಅಲ್ಲಿಂದ ತಿರುಗಿ ಹೋಗಬೇಕು ಅನ್ನುವಾಗ ಪರಿಚಿತ ದನಿ ಕೇಳಿ ಬಂತು "ಜಿಮ್ಮಿ ಸುಮ್ನಿರು ಬಂದಿರೋದು ಅಣ್ಣ ಅಲ್ವ ?" .

೨ . ನಾವು ಆಶ್ಟೇ ಉಳ್ದವ್ರ...

ನಾನು ಕೆಲಸದ ಮೇಲೆ onsite ಬಂದಾಗ ಪ್ರತಿ weekend ಜೋರಾಗಿರುತ್ತೆ . ನಮ್ಮದೆ ಆದ ಒಂದು group ಇದೆ . ಕೆಲವರು ಹಲವಾರು ವರ್ಷಗಳಿಂದ ಇಲ್ಲೇ ಇರೋರು . ಹೊಸಬರಿಗೆ ಈ group ಗೆ ಎಂಟ್ರಿ ಸ್ವಲ್ಪ ಕಶ್ಟನೇ . ಒಮ್ಮೆ ಹೀಗೆ ಪಾರ್ಟಿಲಿ ಹೊಸ colleague ಒಬ್ಬನ ಪರಿಚಯ ಆಯ್ತು . ಅವನೋ college ಮುಗಿಸಿದ ಕೂಡಲೇ ಮದುವೆಯಾಗಿ, ಮದುವೆ ಆಗಿ ಒಂದು ತಿಂಗಳಲ್ಲ್ಲೇ onsite  ಬಂದಿದ್ದ. ೩ ತಿಂಗಳು ಮತ್ತೆ ಬೆಂಗಳೂರಿಗೆ ಹೋಗುವ ಹಾಗಿಲ್ಲ. ಪಾರ್ಟಿಲಿ ೧-೨ ಪೆಗ್ ಆದ ಮೇಲೆ ಸುರುವಾಯ್ತು . ಮನೆ, ಸಂಸಾರ , ಹೆಂಡತಿ ಇತ್ಯಾದಿ ಪ್ರವಚನಗಳು ." Sorry ನಾನು ಕುಡಿದಾಗ ಹೆಂಡತಿ ಬಗೆ ಸ್ವಲ್ಪ ಜಾಸ್ತಿ ಮಾತಾಡ್ತೇನೆ", ಅನ್ನೋ excuse ಬೇರೆ.ನಂಗೂ ಸಾಕಾಗಿ ಹೋಗಿತ್ತು .೧-೨   ವಾರ ಹೆಂಗೋ ತಡ್ಕೊಂಡ್ವಿ . ಮತ್ತೋಮ್ಮೆ ಪಾರ್ಟಿಲೇ ಸುರು ಮಾಡ್ಕೊಂಡ .."sorry ನಾನು ಕುಡ್ದಾಗ ನನ್ ಹೆಂಡ್ತಿ ಬಗೆ ಸ್ವಲ್ಪ ಜಾಸ್ತಿನೇ ಮಾತಾಡ್ತೀನಿ. " ಎಲ್ಲಿಂದ್ಲೋ ಒಂದು dialogue ಬಂತು "ನಾವು ಅಶ್ಟೆ ಕುಡ್ದಾಗ ಬೇರೆಯವ್ರ ಹೆಂಡ್ತಿ ಬಗೆ ಸ್ವಲ್ಪ ಜಾಸ್ತಿ ಮಾತಾಡೋದು" . ಅದೇ ಕೊನೆ ಆಮೇಲೆ ಆ ಮುಖನ ಪಾರ್ಟಿಲಿ ನೋಡಿಲ್ಲ .

೩. ಮುಖ ನೋಡಿದ್ರೆ ಗೊತ್ತಾಗಲ್ವ ..

 BE ಫಸ್ಟ್ year. ಫಸ್ಟ್ week . lecturer ಎಲ್ರಾ ಪರಿಚಯ ಮಾಡ್ಕೋಳ್ತಾ ಇದ್ರು. ಪ್ರತಿಯೊಬ್ಬ ತನ್ನ ಹೆಸ್ರು ,ಊರಿನ ಹೆಸ್ರು ಹೇಳ್ಬೇಕಾಗಿತ್ತು . ನಮ್ಮ class ನ beauty  ಎಂದು ಆಗಲೇ ಪ್ರಖ್ಯಾತಳಾಗಿದ್ದ ಹುಡುಗಿ ಎದ್ದು ನಿಂತು ಹೆಸ್ರು ಹೇಳಿದ್ಲು ..ಇನ್ನೇನು  ಊರಿನ ಹೆಸ್ರು ಹೇಳ್ಬೇಕು .. ಹಿಂದಿನ ಬೆಂಚ್ ಇಂದ ಕೇಳ್ಬಂತು " ಮುಖ ನೋಡಿದ್ರೆ ಗೊತ್ತಾಗಲ್ವ ಸರ್ ಯಾವ ಊರು ಅಂತ ?" . ಅಂದ ಹಾಗೆ ಹುಡುಗಿ ಕುದುರೆ ಮುಖದವ್ಳು