ನಮನ-೦೭: ದೇವ
ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು
ನಟಕೋಟಿಯರಲೊಬ್ಬರು ನಾವು
ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು
ಕರೆಯುವೆವು ನಾವವನನೆ ದೇವನು .೧.
ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು
ಎಂತು ಸಲಹುವನೀ ಕೋಟಿ ಕಂದಮ್ಮಗಳನು?
ಒಂದೊಂದನಾಡಿಸಲು ಎರಡಾಳು ಬೇಕೆಮಗೆ!
ಸಿಗಬಹುದೆ ಅದರಂತೆ ಕೋಟಿಯಾಳುಗಳವಗೆ? .೨.
ಅದಕೆಂದೆ ಕರೆವರವನ ಜನರು, ಜಗದ ದೊರೆಯು
ಸಂಕಟಗೊಂಡ ಕ್ಷಣಕ್ಷಣದಲೆ ಹೋಗುವುದು ಕರೆಯು
ದೇವನೆಂಬವನ ಅಸ್ತಿತ್ವವನು ನೀ ಮರೆತು
ಇರಲಾರೆ, ನಮ್ಮವರ ನಡುವೆ ಬೆರೆತು .೩.
ದೇವನೇ ಎಂದೆಂದು ಈ ಜಗದ ಉಸಿರು
ದೇವಗೆದುರಾಗ್ಯಾರೆತ್ಯಾನು ತನ್ನ ಹೆಸರು? .೪.
(ಸೂಚನೆ:
೧. ಲೋಹಿತಂತ್ರಾಂಶ ಬಳಸಲಾಗಿದೆ.
೨. ಇದನ್ನು ಬರೆದದ್ದು ಹೈಸ್ಕೂಲಿನಲ್ಲಿ ಇದ್ದಾಗ (೧೯೮೨-೧೯೮೫). ವರ್ಷ ಸರಿಯಾಗಿ ನೆನಪಿಲ್ಲ. ಏನೂ ತಿದ್ದುಪಡಿ ಮಾಡದೆ ಹಾಗೇ ಇಲ್ಲಿ ಇಳಿಸಿದ್ದೇನೆ.
೩. ದೇವಸ್ಥಾನ, ಪೂಜೆ, ಪುರೋಹಿತ ಇತ್ಯಾದಿ ಬಗ್ಗೆ ನನಗೆ ರೇಜಿಗೆ ಆಗಿನ್ನೂ ಹುಟ್ಟುತಿದ್ದ ಕಾಲವದು.)
Rating
Comments
ಉ: ನಮನ-೦೭: ದೇವ
ಉ: ನಮನ-೦೭: ದೇವ
In reply to ಉ: ನಮನ-೦೭: ದೇವ by manjunath.kunigal
ದೇವನೆಂಬವನ ಅಸ್ತಿತ್ವವನು ನೀ ಮರೆತು, ಇರಲಾರೆ ನಮ್ಮವರ ನಡುವೆ ಬೆರೆತು
ಉ: ನಮನ-೦೭: ದೇವ
In reply to ಉ: ನಮನ-೦೭: ದೇವ by roopablrao
ಉ: ನಮನ-೦೭: ದೇವ
ಉ: ನಮನ-೦೭: ದೇವ
In reply to ಉ: ನಮನ-೦೭: ದೇವ by asuhegde
ಉ: ನಮನ-೦೭: ದೇವ
ಉ: ನಮನ-೦೭: ದೇವ
In reply to ಉ: ನಮನ-೦೭: ದೇವ by Chikku123
ಉ: ನಮನ-೦೭: ದೇವ