ಮೂರು "ಪಂಚಕ"ಗಳು....
೧) ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ
ನಾನೊಬ್ನೆ ದೋಷಿ ಅಲ್ಲ...
ಪವಾರ್ ಸಾಹೇಬರ ಅಳಲು..
ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ
ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....!
೨) ಪ್ಯಾಟೆ ಹೊತ್ತಿ ಉರೀತಾದೆ... ಕೇಳ್ತೀರಾ
ಗೋಣಿತುಂಬಾ ದುಡ್ಡೊಯ್ದು ಕ್ಯಾರಿಯಲ್ಲಿ
ದಿನಸಿ ತಂದವ್ರ ಪಾಡು....
ಚಿಂತೆ ಬ್ಯಾಡ ನಮ್ಗಳ ನಾಳೆ ಬೆಳಗಾಕೆ
ತಯಾರಾಗೈತಂತೆ ಹೊಸಾ ಕರಡು....!
೩) ಅರವತ್ತು ಮುಗೀತು ....
ಇನ್ನೇನು ಅರಳಮರಳು ಶುರು
ಅಂದ್ರು ಒಬ್ರು...
ಹುಟ್ಟೊವಾಗ್ಲೆ ತಲೆ ರಿಪೇರಿಯಾಗಾಕಿತ್ತು
ಈಗಲಾದ್ರೂ ಹಚ್ಕೊಬೇಕು ಸುರು..ಮತ್ತೊಬ್ರಂದ್ರು....!