I.I.T ಮೇಲೆ ಏಕೆ ಎಲ್ಲರ ಹದ್ದಿನ ಕಣ್ಣು?

I.I.T ಮೇಲೆ ಏಕೆ ಎಲ್ಲರ ಹದ್ದಿನ ಕಣ್ಣು?

ಬರಹ
ಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್ ಬಂದಿತ್ತು. ಕಳೆದ ಸೆಮಿಸ್ಟರ್ ಕೊನೆಯಲ್ಲಿ ನಮ್ಮ ದೋಸಾ(DOSA-Dean Of Student Affairs) ೩೮ ಜನ ಹುಡುಗರನ್ನು ಟರ್ಮಿನೇಟ್ ಮಾಡಿದ ವಿಷಯ ನ್ಯೂಸ್ ನಲ್ಲಿ ಪ್ರಸಾರವಾಯ್ತಂತೆ. ಗಾಬರಿಯಾಗಿ ಫೋನ್ ಮಾಡಿದ್ದರು ಹ್ಹಿ ಹ್ಹಿ" ಎಂದು ಮಾತಾಡಿಕೊಳ್ಳುತ್ತಿದ್ದರು. ಆಗ ನಾನು ನಕ್ಕು ಸುಮ್ಮನಾಗಿಬಿಟ್ಟೆ. 
ಹಾಸ್ಟಲ್ ಗೆ ಬಂದು, ಕಂಪ್ಯೂಟರ್ ಆನ್ ಮಾಡಿ, ಫೇಸ್ ಬುಕ್ ತೆರೆದೆ.(ಇಲ್ಲಿನ ಜನ, ಹಲ್ಲುಜ್ಜುವುದು ಮರೆತರೂ, ಫೇಸ್ ಬುಕ್ ಮರೆಯುವುದಿಲ್ಲ! ಅಷ್ಟರಮಟ್ಟಿಗೆ ಫೇಸ್ ಬುಕ್ ಇಲ್ಲಿ ಜನಪ್ರಿಯ; ಎಲ್ಲರೂ ಕಂಪ್ಯೂಟರ್ ಜತೆಗೇ ಮಲಗಿ ಏಳುವುದು! :D ಬೆಳಿಗ್ಗೆ ಎದ್ದೊಡನೆಯೇ ಕಂಪ್ಯೂಟರ್ ಆನ್ ಮಾಡುವುದು, ರಾತ್ರಿ ಮಲಗುವ ಮುನ್ನ ಆರಿಸುವುದು ಇಲ್ಲಿನ ಜೀವನ ಶೈಲಿ. ಕೆಲವರಂತೂ ಕಂಪ್ಯೂಟರನ್ನು ಆರಿಸುವುದೇ ಇಲ್ಲ! ಸ್ಲೀಪ್ ಮೋಡ್ ನಲ್ಲಿ ಇಟ್ಟು ಮಲಗುತ್ತಾರೆ!). ಗೆಳೆಯನೊಬ್ಬ ಫೇಸ್ ಬುಕ್ ನಲ್ಲಿ ಲಿಂಕ್ ಒಂದನ್ನು ಹಾಕಿದ್ದ. ಏನಿರಬಹುದೆಂದು ನೋಡಿದೆ-<http://khabar.josh18.com/videos/26585/01_2010/iit1510/> (ಇದರಲ್ಲಿ ೫ ಭಾಗಗಳಿವೆ; ತಪ್ಪದೇ ಎಲ್ಲವನ್ನೂ ನೋಡಿ).
ವೀಡಿಯೋ ನೋಡಿ ನನಗೆ ಆಶ್ಚರ್ಯವಾಯಿತು. ವಿಷಯವನ್ನು ಜನರ ದಿಕ್ಕು ತಪ್ಪಿಸಲೆಂದೇ ವರದಿ ಮಾಡಿದಂತಿದೆ. "ಥ್ರೀ ಇಡಿಯಟ್ಸ್ ವಿಚಾರ ತಂದಿದ್ದೇ ತಪ್ಪು; ಆ ೩೮ ಜನರನ್ನು ರಾಂಚೋ ಗೆ ಹೋಲಿಸಿದ್ದು ತೀರಾ ಅತಿಯಾಯಿತು" ಎಂಬ ಅಭಿಪ್ರಾಯಗಳು, ಮೆಸ್ ನಲ್ಲಿ ಹರಟುವಾಗ ಅಲ್ಲಲ್ಲಿ ಕಂಡುಬಂದವು. ಮೊನ್ನೆ(ಜನವರಿ ೨೫) ಸಾಯಂಕಾಲ, ನನ್ನ I.I.T.K ಈಮೇಲ್ ಖಾತೆಗೆ ಒಂದು ಮೇಲ್ ಬಂತು. ಇನಿಸ್ಟಿಟ್ಯೂಟ್ ನಿಂದ ಅಷ್ಟೋಂದು ಜನ ವಿದ್ಯಾರ್ಥಿಗಳನ್ನು ಟರ್ಮಿನೇಟ್ ಮಾಡಿದ ನಿರ್ಧಾರದ ವಿರುದ್ಧ, ಅಂದು ಸಾಯಂಕಾಲ ’ಪೀಸ್ ಫುಲ್ ಕ್ಯಾಂಡಲ್ ಮಾರ್ಚ್’ ಮೂಲಕ ಪ್ರತಿಭಟಿಸಲು ಕರೆ ನೀಡುವ ಈಮೇಲ್ ಅದು. ಅನಧಿಕೃತವಾಗಿ ಎಲ್ಲ ವಿಧ್ಯಾರ್ಥಿಗಳಿಗೂ ಈ ಈಮೇಲ್ ಕಳುಹಿಸಲಾಗಿದೆ ಎಂದು ತಿಳಿಯಿತು. ಆ ಈಮೇಲ್ ಬಂದಿದ್ದು ಒಂದು ಜೀಮೇಲ್ ಖಾತೆಯಿಂದ; IITK ಖಾತೆಯಿಂದಲ್ಲ. ಕುತೂಹಲದಿಂದ ಆ ಜೀಮೇಲ್ ವಿಳಾಸ ಹಿಡಿದು, ಕಳುಹಿಸಿದವನ ಹೆಸರನ್ನು ಪತ್ತೆ ಹಚ್ಚಿದೆ. ’ಕಿಲ್ಕಿಲ್ ಸಚಾನ್’ ಎಂದು ಅವನ ಹೆಸರು. ನಂತರ ತಿಳಿಯಿತು, ಅವನು ನಮ್ಮ ಫಿಸಿಕ್ಸ್ ದಿಪಾರ್ಟ್ಮೆಂಟಿನವನೇ, ಫೈನಲ್ ಇಯರ್ ಎಂ ಎಸ್ಸಿ ಓದುತ್ತಿದ್ದಾನೆ. ಇದು ಅವನ ಕೊನೆಯ ಸೆಮಿಸ್ಟರ್ ಆಗಬೇಕಿತ್ತು, ಆದರೆ, ಅನಾರೋಗ್ಯದ ಕಾರಣ, ಕಳೆದ ಸೆಮಿಸ್ಟರ್ ನಲ್ಲಿ ಒಳ್ಳೆಯ ಪ್ರದರ್ಶನ ತೊರಲಿಲ್ಲ. ಹೀಗಾಗಿ, ಅವನ್ನನ್ನು ಒಂದು ಸೆಮಿಸ್ಟರ್ ಡ್ರ‍ಾಪ್ ಮಾಡಲು ಸೂಚಿಸಿದ್ದಾರೆ ಎಂದು. ಅವನ ಹೆಸರನ್ನು ಗೂಗಲ್ ಮಾಡಿ ನೋಡಿದಾಗ ಆ ೩೮ ಜನರೊಂದಿಗೆ, ಇನ್ನೂ ೩೯ ಜನರನ್ನು, ಒಂದು ಸೆಮಿಸ್ಟರ್ ಡ್ರಾಪ್ ಮಾಡಲು ಸೂಚಿಸಿದ್ದಾರೆ ಎಂದು ತಿಳಿಯಿತು. ಸಂಜೆ ಏನಾಗಬಹುದು ಎಂದು ತುಸು ಕುತೂಹಲದಿಂದ ಕಾದಿದ್ದೆ. ಅದೇ ಸಂಜೆ, ಕ್ಯಾಂಪಸ್ ನಲ್ಲಿ, ”ಹಾಲ್ ವನ್ ಕೀ ಬಾರಾತ್’ ಎಂಬ ಉತ್ಸವ ನಡೆಯುತ್ತಿದ್ದ ಕಾರಣ, ಇವರ ಈ ಪ್ರತಿಭಟನೆ ಕಾಣದಾಗಿ ಹೋಯಿತು. 
ತಮ್ಮ ಮೇಲಿರುವ ಅನುಕಂಪವನ್ನು ವಿದ್ಯಾರ್ಥಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದುದನ್ನು ಆ ವೀಡಿಯೋದಲ್ಲಿ ನೋಡಬಹುದು. ಪ್ರೊಫೆಸರ್ ಗಳಮೇಲೆ, ಸುಳ್ಳು ಆರೋಪಗಳ ಮಳೆಯನ್ನೇ ಸುರಿಸಿದ್ದರಿಂದ, ಇಲ್ಲಿ ಓದುತ್ತಿರುವವರಾರೂ, ಅವರ ಬೆಂಬಲಕ್ಕೆ ಬರಲಾರರು. ಒಳಗಿನವರ ಬೆಂಬಲವಿಲ್ಲದೆ ಇಂತಹ ಪ್ರತಿಭಟನೆಗಳು ಯಶಸ್ವಿಯಾಗಲಾರವು. ನ್ಯೂಸ್ ನವರ ಮುಂದೆ ಪ್ರೊಫೆಸರ್ ಒಬ್ಬರ ಹೆಸರು ಹೇಳಿದ್ದು ತೀರ ತಪ್ಪಾಯಿತು. ಈ ವಿಷಯದಲ್ಲಿ, ವಿದ್ಯಾರ್ಥಿಗಳ ಕಳಪೆ ಪ್ರದರ್ಶನಕ್ಕೆ ರೆಸರ್ವೇಶನ್ ಕೂಡ ಒಂದು ರೀತಿಯಲ್ಲಿ ಕಾರಣ ಎಂಬ ಮಾತು ಕೇಳಿಬಂದಿತ್ತು. ಇದು, ನನ್ನ ಅನುಭವಕ್ಕೂ ಬಂದಿದೆ. ನನ್ನ ಗೆಳೆಯನೊಬ್ಬನ ’ವಿಂಗ್’(ಅಂದರೆ, ಹಾಸ್ಟಲ್ ನ ವಿಂಗ್) ನ ಕಥೆ ಇಲ್ಲಿ ಪ್ರಸ್ತಿತವೆನಿಸುತ್ತದೆ. ಫಸ್ಟ್ ಇಯರಿನಲ್ಲಿ, ಸೀನಿಯರ್ ಗಳ ಒತ್ತಾಯದ ಮೇರೆಗೆ, ಇಲ್ಲಿ, ವಿದ್ಯಾರ್ಥಿಗಳು, ’ವಿಂಗ್ ಫೀಲಿಂಗ್’, ’ಹಾಲ್ ಫೀಲಿಂಗ್’ ಬೆಳೆಸಿಕೊಂಡಿರುತ್ತಾರೆ. ’ಹಾಲ್’ ಅಂದರೆ, ಇಲ್ಲಿನ ಹಾಸ್ಟಲ್ ಗಳು. ’ಹಾಲ್ ಫೀಲಿಂಗ್’ ಅಂದರೆ, ಒಂದು ರೀತಿಯ ’ದೇಶಪ್ರೇಮ’; ’ಹಾಲ್ ಪ್ರೇಮ’ ಎನ್ನಬಹುದು. ಅದೇ ರೀತಿ, ಹಾಸ್ಟಲ್ ನಲ್ಲಿ, ತಮ್ಮ ವಿಂಗ್ ಮೇಲಿನ ಅಭಿಮಾನವನ್ನು, ’ವಿಂಗ್ ಫೀಲಿಂಗ್’ ಎನ್ನುತ್ತಾರೆ(ಇದು ನಿಮಗೆ ಟೂ ಮಚ್ ಎನಿಸಬಹುದು; ನಿಜವೇ, ಇದು ಟೂ ಮಚ್!) ವಾಸ್ತವವಾಗಿ, ಹೆಚ್ಚುನವರಿಗೆ ಈ”ಫೀಲಿಂಗ್’ ಗಳು ಇರುವುದೇ ಇಲ್ಲ! ಎಲ್ಲ ಕೆಲವು ಸೀನಿಯರ್ ಗಳ ಒತ್ತಾಯಕ್ಕೆ. ಒಂದು ವರ್ಷ ಕಳೆಯುವಷ್ಟರಲ್ಲಿ, ಈ ’ಫೀಲಿಂಗ್’ ಗಳು ಯಾರಲ್ಲೂ ಉಳಿದಿರುವುದಿಲ್ಲ. ಆದರೆ, ಎಲ್ಲರಿಗೂ, ತಮ್ಮ ವಿಂಗಿನವರು ಆತ್ಮೀಯ ಗೆಳೆಯರಾಗಿಹೋಗಿರುತ್ತಾರೆ. ಕ್ಲಾಸ್ ಅಟೆಂಡ್ ಮಾಡುವುದೂ ವಿಂಗ್ ಜತೆಗೆ; ಬಂಕ್ ಮಾಡುವುದೂ ವಿಂಗ್ ಜತೆಗೇ!, ಸುತ್ತಾಡಲು ಹೊರಗೆ ಹೋಗುವುದು, ರಾತ್ರಿಯಿಡೀ ಸಿನೆಮಾ ನೋಡುವುದು, ಎಲ್ಲವೂ ವಿಂಗ್ ಮೇಟ್ಸ್ ಜತೆಗೇ. 
ನನ್ನ ಗೆಳೆಯನ ವಿಂಗ್ ನಲ್ಲಿ, ಒಬ್ಬ ರಿಸರ್ವೇಶನ್ ಇಂದ ಬಂದಿದ್ದವನು, ಮೊದಲ ಸೆಮಿಸ್ಟರ್ ಅನ್ನು ಡ್ರ‍ಾಪ್ ಮಾಡಿದ್ದ. ಸೆಮಿಸ್ಟರ್ ನ ಮೊದಲ ದಿನಗಳಲ್ಲಿ, ಇಲ್ಲಿನ ಪಾಠ ತಲೆಬುಡ ಅರ್ಥವಾಗದೆ, "ಕುಚ್ ಸಮಜ್ ಮೆ ನಹೀ ಆ ರಹಾ ಹೈ"(ನನ್ಗೇನೂ ಅರ್ಥವಾಗುತ್ತಿಲ್ಲ) ಎಂದು ಪಲ್ಲವಿ ಹಾಡುತ್ತಾ ಅಲೆದಾಡುತ್ತಿದ್ದ. ಕಡೆಗೆ ಆತ್ಮವಿಶ್ವಾಸ ಕಳೆದುಕೊಂಡು, ಸೆಮಿಸ್ಟರ್ ಡ್ರಾಪ್ ಮಾಡಿದ್ದ. ಎರಡನೆಯ ಸೆಮಿಸ್ಟರ್ ನಲ್ಲಿ, ಸ್ವಲ್ಪ ಆತ್ಮವಿಶ್ವಾಸ ಬೆಳೆಸಿಕೊಂಡು ಹಿಂದಿರುಗಿದ್ದ. ಮೊದಲ ಕ್ಲಾಸ್ ಗೆ, ಎಂದಿನಂತೆ, ವಿಂಗ್ ನೊಡನೆ ಹೊರಟ. ಮೊದಲ ಕ್ಲಾಸ್ ಆದ್ದರಿಂದ, ಪ್ರೊಫೆಸರ್, ಹಳೆಯ ಪಾಠವನ್ನೇ ಪುನರಾವರ್ತನೆಗೊಳಿಸಿದರು. ಹೀಗಾಗಿ, ಅವನ ವಿಂಗ್, ಕೊನೆಯ ಬೆಂಚಿನಲ್ಲಿ ಕುಳಿತು ಹರಟೆ ಹೊಡೆದು, ಮಜಾ ಮಾಡಿದರು. ಅವರೊಂದಿಗೇ ಮಜಾ ಮಾಡಿದ ಆ ಹುಡುಗ, ಕ್ಲಾಸ್ ಮುಗಿದಮೇಲೆ, "ಕ್ಲಾಸ್ ಸಮಜ್ ಮೈ ಆಯಾ?" (ಕ್ಲಾಸ್ ನಲ್ಲಿ ಎನಾದರೂ ಅರ್ಥವಾಯಿತಾ?) ಎಂದು ಸ್ವಲ್ಪ ಭಯದಿಂದ ಗೆಳೆಯರನ್ನು ಕೇಳಿದ. ಆಗ, ಅವರು, "ಇಸ್ ಮೈ ಸಮಜ್ ನೆ ಕಾ ಕ್ಯಾ ಹೈ?" (ಇದರಲ್ಲಿ ಅರ್ಥಮಾಡಿಕೊಳ್ಳಲು ಏನಿದೆ?)ಅಂದು ಬಿಟ್ಟರು...ಅಷ್ಟೇ, ಅವನ ಆತ್ಮವಿಶ್ವಾಸ ಒಡೆದು ಹೋಯಿತು. ಹಾಸ್ಟಲ್ ಗೆ ಹಿಂದಿರುಗಿದವನೇ, ಮನೆಗೆ ಫೊನ್ ಮಾಡಿ, ಮತ್ತೊಂದು ಸೆಮಿಸ್ಟರ್ ಡ್ರ‍ಾಪ್ ಮಾಡಿಬಿಟ್ಟ. ಈಗ, ಅವನು ಕಾಲೇಜ್ ಬಿಟ್ಟು ಹೋದ ಎಂದು ಕೇಳಿದ್ದೆನೆ.  ತೀರಾ ಹೆಚ್ಚು ರಿಸರ್ವೇಶನ್ ಮಾಡುವುದರಿಂದ ಆಗುವ ಅನಾಹುತವಿದು. ಇದೇ ಆತ್ಮವಿಶ್ವಾಸದ ಕೊರತೆಯಿಂದಾಗಿ, ನನ್ನ ಪಕ್ಕದ ರೂಮಿನವ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಅದೃಷ್ಟವಶಾತ್, ಪರಿಸ್ಥಿತಿ ಅಷ್ಟು ಗಂಭೀರವಾಗದೆ, ಈಗ ಆರೋಗ್ಯವಾಗಿದ್ದಾನೆ. ಅವನೂ ಕೂಡ, ರಿಸರ್ವೇಶನ್ ನಿಂದ ಬಂದವನು; ಹಾಗೂ, ಅವನಲ್ಲೂ ಇದೇ ರೀತಿಯ ಮನೊದೌರ್ಬಲ್ಯವಿತ್ತು ಎನ್ನುವುದು ಗಮನಾರ್ಹ.
ಈ ವೀಡಿಯೋ, I.I.T ಬಗೆಗಿನ ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸುತ್ತದೆ: I.I.T ಯಲ್ಲಿ, ಎಲ್ಲವೂ ಹೈಫ್. ಮೀಡಿಯಾದವರು, ಸಾಮನ್ಯಜನಗಳು, ಎಲ್ಲರ ಹದ್ದಿನಕಣ್ಣೂ I.I.T ಯ ಮೇಲೆ. ನಾವು ಒಂದು ಒಳ್ಳೆಯಕೆಲಸ ಮಾಡಿದರೆ ಸಾಕು, ಏನೋ ಜಗತ್ತನ್ನೇ ಗೆಲ್ಲುವಂಥಾ ಸಾಧನೆ ಮಾಡಿದ್ದೇವೆ ಅನ್ನುವಂತೆ ಬರೆಯುತ್ತಾರೆ ಈ ಮೀಡಿಯಾದವರು. ನಿಜ ಹೇಳಬೇಕೆಂದರೆ, ಒಂದು ಒಳ್ಳೆಯ ಕೆಲಸ ಬೇಡ, ಕೇವಲ ಒಂದು ಯೋಜನೆ ಸಾಕು, ಮೀಡಿಯಾದವರನ್ನು ಆಕರ್ಷಿಸಲು. ಇಲ್ಲಿ, ವಿದ್ಯಾರ್ಥಿಗಲು ಮಾಡಿಕೊಂಡ ಮ್ಯೂಸಿಕ್ ಕ್ಲಬ್, ಡಾನ್ಸ್ ಕ್ಲಬ್, ಡ್ರ‍ಾಮಾ ಕ್ಲಬ್, ಫೈನ್ ಆರ್ಟ್ಸ್ ಕ್ಲಬ್, ರೋಬೋಟಿಕ್ಸ್ ಕ್ಲಬ್, ಹ್ಯಾಮ್ ಕ್ಲಬ್, ಎಲೆಕ್ಟ್ರಾನಿಕ್ಸ್ ಕ್ಲಬ್, ಗ್ಲೈಡಿಂಗ್ ಕ್ಲಬ್, ಆಸ್ಟ್ರ‍ಾನಮಿ ಕ್ಲಬ್, ಭಕ್ತಿವೇದಾಂತ ಕ್ಲಬ್(!), ಇಂಗ್ಲೀಶ್ ಲಿಟರರಿ ಕ್ಲಬ್, ಹಿಂದೀ ಸಾಹಿತ್ಯ ಸಭಾ, ಇತ್ಯಾದಿ ಇತ್ಯಾದಿ ಇದೆ ಎಂದು ತಿಳಿದು ಉತ್ಸುಕನಾಗಿದ್ದೆ. ಇಲ್ಲಿಗೆ ಬಂದೆಮೇಲೆ ತಿಳಿಯಿತು, ಡ್ರ‍ಾಮಾ, ಮತ್ತು ಮ್ಯೂಸಿಕ್ -ಇವೆರಡೇ, ಗೌರವಾನ್ವಿತವಾಗಿ ಕೆಲಸಮಾಡುತ್ತಿರುವುದು! ನನಗೆ I.I.Tಯ ಹೈಫ್ ನ ಮೊದಲ ಪರಿಚಯವಿದು. ಇದೇ ರೀತಿ, ಈ ವೀಡಿಯೋ. ವಿದ್ಯಾರ್ಥಿಗಳನ್ನು ಟರ್ಮಿನೇಟ್ ಮಾಡುವುದೇನೂ I.I.T K ಗೆ ಹೊಸದಲ್ಲ; ಈ ಮೀಡಿಯಾದವರು ಅನಗತ್ಯವಾಗಿ, ಅದನ್ನು ವಿಜೃಂಬಿಸಿದ್ದಾರೆ. ಅವರು ಹೇಳುವಂತೆ, ಇಲ್ಲಿ ಅಂತಹ ಪ್ರೆಶರ್ ಏನೂ ಇಲ್ಲ; ಪ್ರೊಫೆಸರ್ ಗಳು, ಬಹಳ ಆತ್ಮೀಯವಾಗಿಯೇ ಸಹಕಾರ ನೀಡುತ್ತಾರೆ. ಆ ವೀಡಿಯೋದಲ್ಲಿ ಕಂಡಿದ್ದು, I.I.T ಯ ಮೇಲೆ, ಮೀಡಿಯಾದವರ ಹದ್ದಿನಕಣ್ಣನ್ನು, ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಂಡದ್ದು. ಅಷ್ಟೋಂದು ಹೈಫ್ ಮಾಡಿದರೆ, ವಿದ್ಯಾರ್ಥಿಗಲಲ್ಲಿ ನೈಸರ್ಗಿಕವಾಗಿ ಬರುವ ಮನೋಭಾವವಿದು; ತಾವು ಮಾಡುವ ಸಣ್ಣ ಸಣ್ಣ ಕೆಲಸಗಳಿಗೂ, ಭರ್ಜರಿ ಪಬ್ಲಿಸಿಟಿ ಕೊಡುವ ಮನೋಭಾವವನ್ನು, ಇಲ್ಲಿನ ಹುಡುಗರು ಈಗಾಗಲೇ ಬೆಳೆಸಿಕೊಳ್ಳುತ್ತಿದ್ದಾರೆ. I.I.T ಎಲ್ಲೂ ಕಾಣದ ಸ್ವರ್ಗವೂ ಅಲ್ಲ; ನರಕವೂ ಅಲ್ಲ. ಇಲ್ಲಿರುವವರೂ ಮನುಷ್ಯರೇ. ದೇಶದ ಉನ್ನತ ಶಿಕ್ಷಣ ಸಂಸ್ಥೆ ಎನ್ನುವುದು ನಿಜ; ಆದರೆ, ಇಷ್ಟೋಂದು ಪಬ್ಲಿಸಿಟಿಯ ಅಗತ್ಯ, ನನಗಂತೂ ಕಾಣುತ್ತಿಲ್ಲ.

ಮೂರ್ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು. ಅಂದು ಬೆಳಿಗ್ಗೆ, ಕ್ಲಾಸ್ ಮುಗಿದ ನಂತರ, ಹಾಸ್ಟಲ್ ಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ, ಇಬ್ಬರು ಹುಡುಗರು ಮಾತಾಡಿಕೊಳ್ಳುತ್ತಿದ್ದದು ಕಿವಿಗೆ ಬಿತ್ತು. "ನಿನ್ನೆ ಮನೆಯಿಂದ ಫೋನ್ ಬಂದಿತ್ತು. ಕಳೆದ ಸೆಮಿಸ್ಟರ್ ಕೊನೆಯಲ್ಲಿ ನಮ್ಮ ದೋಸಾ(DOSA-Dean Of Student Affairs) ೩೮ ಜನ ಹುಡುಗರನ್ನು ಟರ್ಮಿನೇಟ್ ಮಾಡಿದ ವಿಷಯ ನ್ಯೂಸ್ ನಲ್ಲಿ ಪ್ರಸಾರವಾಯ್ತಂತೆ. ಗಾಬರಿಯಾಗಿ ಫೋನ್ ಮಾಡಿದ್ದರು ಹ್ಹಿ ಹ್ಹಿ" ಎಂದು ಮಾತಾಡಿಕೊಳ್ಳುತ್ತಿದ್ದರು. ಆಗ ನಾನು ನಕ್ಕು ಸುಮ್ಮನಾಗಿಬಿಟ್ಟೆ. ಹಾಸ್ಟಲ್ ಗೆ ಬಂದು, ಕಂಪ್ಯೂಟರ್ ಆನ್ ಮಾಡಿ, ಫೇಸ್ ಬುಕ್ ತೆರೆದೆ.(ಇಲ್ಲಿನ ಜನ, ಹಲ್ಲುಜ್ಜುವುದು ಮರೆತರೂ, ಫೇಸ್ ಬುಕ್ ಮರೆಯುವುದಿಲ್ಲ! ಅಷ್ಟರಮಟ್ಟಿಗೆ ಫೇಸ್ ಬುಕ್ ಇಲ್ಲಿ ಜನಪ್ರಿಯ; ಎಲ್ಲರೂ ಕಂಪ್ಯೂಟರ್ ಜತೆಗೇ ಮಲಗಿ ಏಳುವುದು! :D ಬೆಳಿಗ್ಗೆ ಎದ್ದೊಡನೆಯೇ ಕಂಪ್ಯೂಟರ್ ಆನ್ ಮಾಡುವುದು, ರಾತ್ರಿ ಮಲಗುವ ಮುನ್ನ ಆರಿಸುವುದು ಇಲ್ಲಿನ ಜೀವನ ಶೈಲಿ. ಕೆಲವರಂತೂ ಕಂಪ್ಯೂಟರನ್ನು ಆರಿಸುವುದೇ ಇಲ್ಲ! ಸ್ಲೀಪ್ ಮೋಡ್ ನಲ್ಲಿ ಇಟ್ಟು ಮಲಗುತ್ತಾರೆ!). ಗೆಳೆಯನೊಬ್ಬ ಫೇಸ್ ಬುಕ್ ನಲ್ಲಿ ಲಿಂಕ್ ಒಂದನ್ನು ಹಾಕಿದ್ದ. ಏನಿರಬಹುದೆಂದು ನೋಡಿದೆ-(http://khabar.josh18.com/videos/26585/01_2010/iit1510/) (ಇದರಲ್ಲಿ ೫ ಭಾಗಗಳಿವೆ; ತಪ್ಪದೇ ಎಲ್ಲವನ್ನೂ ನೋಡಿ).