ಬಿನ್ ಫೈರ್ ಡಾಟ್ ಕಾಮ್

ಬಿನ್ ಫೈರ್ ಡಾಟ್ ಕಾಮ್

ಅಧ್ಯಾತ್ಮವು ನನ್ನ ಒಲವು.ಯಾಕೋ ಇತ್ತೀಚಿಗೆ ಓದುವುದರಲ್ಲಿ,ಬರೆಯುವುದರಲ್ಲಿ ಆಸಕ್ತಿ ಕಡಿಮೆಯಾಗಿದೆ.ತಿಳಿದವರ ಬಾಯಿಂದ ಕೇಳುವುದು ಇಷ್ಟವಾಗಿದೆ. ಕೇಳಿ ನನಗಿಚ್ಛೆಯಾಗಿದ್ದನ್ನು  ಹಲವುಭಾರಿ ಅಂತರ್ಜಾಲದಲ್ಲಿ ಬರೆದು ಹಂಚಿಕೊಂಡಿದ್ದೇನೆ.  ಕೇಳಿ ಮೆಚ್ಚಿದ್ದನ್ನು ರೆಕಾರ್ಡ್ ಮಾಡಿ ಧ್ವನಿಯನ್ನೇ  ಯಾವುದಾದರೂ ತಾಣಕ್ಕೆ ಪೇರಿಸುವ ಆಲೋಚನೆಯಲ್ಲಿದ್ದೆ.ಈ ಹುಡುಕಾಟದಲ್ಲಿ ನಾನು ಕಂಡಿದ್ದು  ಬಿನ್ ಫೈರ್ ಡಾಟ್ ಕಾಮ್. ಈ ತಾಣದಲ್ಲಿ ಒಂದಿಷ್ಟು ಆಡಿಯೋ ಕ್ಲಿಪ್ ಗಳನ್ನು ಪೇರಿಸಿರುವೆ. ನನ್ನ  ಕೆಲವು ಮಿತ್ರರು  ನನಗೆ ದೂರವಾಣಿಕರೆ ಮಾಡಿ ಈ ತಾಣದಲ್ಲಿ ಧ್ವನಿಯನ್ನು ಕೇಳುವ ಬಗೆ ಹೇಗೆ ಎಂದು ಕೇಳಿದ್ದಾರೆ.ಅವರಿಗಾಗಿ ಕೆಲವು ಮಾತುಗಳು ಇಲ್ಲಿವೆ.

www.binfire.com ಪ್ರವೇಶಿಸಿ

Down load centre  ಕ್ಲಿಕ್ಕಿಸಿ

public files ತೆರೆದು ಕೊಳ್ಳುತ್ತದೆ, ಅದರಲ್ಲಿ

Audio  ಕ್ಲಕ್ಕಿಸಿ

Browse ಕ್ಲಿಕ್ಕಿಸಿ

A to Z ಅಕ್ಷರಗಳು ಸಾಲಿನಲ್ಲಿ ಮೂಡುತ್ತವೆ.

ಫೈಲ್ ಹೆಸರಿನ ಮೊದಲಕ್ಷರ ಯಾವುದಿದೆಯೋ ಅದನ್ನು  A to Z ಸಾಲಿನಲ್ಲಿರುವ ಅದೇ ಅಕ್ಷರದ ಮೇಲೆ ಕ್ಲಿಕ್ಕಿಸಿ

view/play ಬಟನ್ ಕ್ಲಿಕ್ಕಿಸಿ ನಿಮಗೆ ಬೇಕಾದ ಧ್ವನಿಯನ್ನು ಈಗ ನೀವು ಕೇಳಿ. ಈ ತಾಣದಲ್ಲಿ ಯಾವ ಅಡೆತಡೆ ಇಲ್ಲದೆ ನಿರಂತರವಾದ ಧ್ವನಿಯು ನಮಗೆ ಇಷ್ಟವಾಗುತ್ತದೆ.

ನಾನು ಪೇರಿಸಿರುವ ಕೆಲವು ಕ್ಲಿಪ್ ಗಳ ವಿವರ ಕೆಳಗಿದೆ.

1.ಭಗವದ್ಗೀತೆ ಕುರಿತು ಉಪನ್ಯಾಸ  ಪೂಜ್ಯ ಸ್ವರ್ಣವಲ್ಲೀ ಶ್ರೀಗಳಿಂದ

2. ಬ್ರಹ್ಮ ಸತ್ಯಮ್  ಜಗನ್ಮಿತ್ಯಮ್- ಶೃಂಗೇರಿ ಜಗದ್ಗುರು ಪೂಜ್ಯ ಶ್ರೀ ಭಾರತೀ ತೀರ್ಥ ಸ್ವಾಮಿಗಳು

3.ಭ್ರಮೆ- ನನ್ನ ಕವನ ಹಾಡಿದ್ದಾರೆ ಶ್ರೀಮತಿ ಲಲಿತಾ ರಮೇಶ್

4. ಧ್ಯಾನ- ಭಗವದ್ಗೀತೆಯ ಧ್ಯಾನ ಶ್ಲೋಕಗಳು

5.  ಹೆತ್ತತಾಯ್ ತಂದೆಗಳ- ಭಾವಗೀತೆ

6. ಜನಪದ ಸಾಹಿತ್ಯ- ದಿ|| ಏ.ಎಸ್. ಕಾಳೇಗೌಡರ ಅಮೋಘ ವಾಗ್ಝರಿ

7. ಶಂಕರರ ಅದ್ವೈತ-೧ : ಶೃಂಗೇರಿ ಜಗದ್ಗುರು ಪೂಜ್ಯ ಶ್ರೀ ಭಾರತೀ ತೀರ್ಥ ಸ್ವಾಮಿಗಳು

8. ಶಂಕರರ ಅದ್ವೈತ-೨ : ಶೃಂಗೇರಿ ಜಗದ್ಗುರು ಪೂಜ್ಯ ಶ್ರೀ ಭಾರತೀ ತೀರ್ಥ ಸ್ವಾಮಿಗಳು

9. ಶಂಕರರ ಅದ್ವೈತ-೩ : ಶೃಂಗೇರಿ ಜಗದ್ಗುರು ಪೂಜ್ಯ ಶ್ರೀ ಭಾರತೀ ತೀರ್ಥ ಸ್ವಾಮಿಗಳು

10. ಶಂಕರರು ಕಂಡ ಭಾರತ- ಶ್ರೀ ಚಕ್ರವರ್ತಿ ಸೂಲಿಬೆಲೆ

11. ಸುಧೆ-೧ ರಿಂದ ಸುಧೆ-೯ಎ : ವೇದಾಧ್ಯಾಯೀ ಸುಧಾಕರ ಶರ್ಮರ

ಉಪನ್ಯಾಸ ಮಾಲೆ -ಎಲ್ಲರಿಗಾಗಿ ವೇದ[ಹತ್ತು ಉಪನ್ಯಾಸಗಳು]

12. ವೇದ ಎಲ್ಲರಿಗಾಗಿ: ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಮಾಲೆ

13.ವೇದ ವಿವರಣೆ-೧, ೨, ೩:  ವೇದಾಧ್ಯಾಯೀ ಸುಧಾಕರ ಶರ್ಮರ ಉಪನ್ಯಾಸ ಮಾಲೆ

14.  ವಿಶ್ವಮಂಗಲ: ಶ್ರೀ ಅನಂತನಾರಾಯಣರ ಉಪನ್ಯಾಸ

Rating
No votes yet