ಕನ್ನಡಿಗ ಅಭಿಮನ್ಯು ಮಿಥುನ್ ದ.ಅಫ್ರಿಕ ಸರಣೆಗೆ ಅಯ್ಕೆ...

ಕನ್ನಡಿಗ ಅಭಿಮನ್ಯು ಮಿಥುನ್ ದ.ಅಫ್ರಿಕ ಸರಣೆಗೆ ಅಯ್ಕೆ...

ಬರಹ

ರಾಹುಲ್, ಭಾರಧ್ವಜ್ ನಂತರ ಯಾರು...?


ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-ದಾಸರಹಳ್ಳಿ ಯ ಪ್ರತಿಭೆ ಅಭಿಮನ್ಯು ಮಿಥುನ್ ೧೫ ಜನ ಸದಸ್ಯರ ತಂಡದಲ್ಲಿ ಅಯ್ಕೆಯಾಗಿ ಕನ್ನಡಿಗರಿಗೆ ಖುಷಿ ತಂದಿದ್ದಾನೆ. ಕೇವಲ "ಉತ್ತರ ಭಾರತ" ಮಯವಾಗಿದ್ದ ಇತ್ತೀಚಿಗಿನ ಕ್ರಿಕೆಟ್ ಅಯ್ಕೆ ಪ್ರಕ್ರಿಯೆ ನಮ್ಮ "ಕ್ರಿಶ್" ಶ್ರೀಕಂತ್ ರವರು ಬಂದ ಮೇಲೆ ದಕ್ಷಿಣದ ಮೇಲೆ ಕಣ್ಣು ಹಾಯಿಸಲು ಶುರು ಮಾಡಿದೆ. ಅದರ ಪ್ರತಿಫಲವೇ ನಮ್ಮ ಮಿಥುನಿನ ಅಯ್ಕೆ.


ಪ್ರಾರಂಭದಿಂದ ಟೆನ್ನಿಸ್ ಬಾಲ್ ನಲ್ಲಿ ಆಡಿ ಕೇವಲ ೩ ವರ್ಷದ ಹಿಂದೆ ಲೆದರ್ ಬಾಲ್ ಅಯ್ಕೆ ಮಾಡಿಕೊಂಡ ಮಿಥುನ್ ಅನಂತರ ಬೆಳೆದ ಎತ್ತರ ಖುದ್ದು ನಮ್ಮ ಕನ್ನಡ ನಾಡು ಕಂಡ ಶ್ರೇಷ್ಠ ಕ್ರಿಕೆಟ್ ದಿಗ್ಗಜರನ್ನು ಸಹ ದಂಗುಬಡಿಸಿತು. ಅಂಡರ್-೧೯, ಅಂಡರ್-೨೨, ರಣಜಿ ಯಲ್ಲಿ (ಎಲ್ಲವು ಅವರ ಮೊದಲ ಪಂದ್ಯಗಳಾಗಿದ್ದವು...) ಹಾಟ್ರಿಕ್ ಸಾಧನೆ, ೨೦೦೯-೧೦ ರ ಸಾಲಿನ ರಣಜಿ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸರದಾರ -- ೪೭.


ನೆನಪಿರಲಿ, ನಮ್ಮ ಕರುನಾಡಿಗೆ ೧೧ ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಸಿಗುತ್ತಿರುವ ಚಿನ್ನದಂತಹ ಅವಕಾಶ ಇದು... ನಮ್ಮ ಮಿಥುನ್ ಈ ಅವಕಾಶವನ್ನು ಸಾರ್ಥಕವಾಗಿ ಉಪಯೋಗಿಸಿ ಪ್ರಸನ್ನ, ಚಂದ್ರಶೇಖರ್, ಕುಂಬ್ಳೆ ಮತ್ತು ಶ್ರೀನಾಥ ರವರಂತೆ ಎತ್ತರಕ್ಕೆ ಬೆಳೆಯಲಿ ಎಂದು ಕನ್ನಡಿಗರ ಹಾರೈಕೆ... ಬನ್ನಿ ಎಲ್ಲರು ಸೇರಿ ಮಿಥುನ್ ರವರನ್ನು ಅಭಿನಂದಿಸೋಣ... :)