ನಾನೂ ಹೋಗಿದ್ದೆ ಚಿತ್ರ ಸಂತೆಗೆ. ಅಲ್ಲಿದ್ದೆ ಸಂಜೆವರೆಗೆ...

ನಾನೂ ಹೋಗಿದ್ದೆ ಚಿತ್ರ ಸಂತೆಗೆ. ಅಲ್ಲಿದ್ದೆ ಸಂಜೆವರೆಗೆ...

ಇಂದು ಬೆಳಗ್ಗೆ (ಜನವರಿ ೩೧, ೨೦೧೦) ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಮುಗಿಸಿಕೊಂಡು, `ಅಂತರಂಗದ ಮಾತುಗಳ'ನ್ನು ಹಂಚಿಕೊಳ್ಳುತ್ತಾ ಇರುವಾಗ ಸ್ಥಳದಲ್ಲಿಯೇ ಸಂಪದ.ನೆಟ್ ನ ಸಂಪದಿಗರ ಪರಿಚಯದೊಂದಿಗೆ (ಹರಿಪ್ರಸಾದ್, ಹರ್ಷ, ವಿನಯ್, ರಶ್ಮಿ ಪೈ... ಇತ್ಯಾದಿ) `ಚಿತ್ರ ಸಂತೆ'ಗೆ ಹೋಗಿದ್ದೆ.  ಅಲ್ಲದೇ ಛಾಯಾಕನ್ನಡಿಯ ಶಿವೂ  ಸಹ ಸಿಕ್ಕಿದ್ದರು, ಅನುಭವ ಮಂಟಪದ ಫಾಲಚಂದ್ರ, ಹೀಗೆ ಇನ್ನೂ ಕೆಲವು ಸಹಬ್ಲಾಗಿಗರ ಪರಿಚಯವಾಯಿತು. 


ಕ್ಷಮಿಸಬೇಕು. ಇಲ್ಲಿ ನನಗೆ ಚಿತ್ರಗಳನ್ನು ಪೋಸ್ಟ್ ಮಾಡಲು ತಿಳಿಯುತ್ತಿಲ್ಲ. ಕಷ್ಟವಾಗುತ್ತಿದೆ.  ಆದ್ದರಿಂದ ಚಿತ್ರಗಳನ್ನು http://kshanachintane.blogspot.com ಇಲ್ಲಿ ಕಾಣಬಹುದು.


ಕಲಾವಿದರ ಈ  ಕಲೆಗೆ ಬೆಲೆ ಕಟ್ಟಲು ಸಾಧ್ಯವೇ ಎಂದು ಒಂದು ಕ್ಷಣ ಅನ್ನಿಸಿತು.  ಏಕೆಂದರೆ, ನಮ್ಮ ಸಂಸ್ಥೆಯ ಸಹೋದ್ಯೋಗಿಯೊಬ್ಬರ ಮಗಳೂ ಸಹ ಇಲ್ಲಿ ಸಂತೆಯಲ್ಲಿ ತಾನು ಬರೆದ ಚಿತ್ರಗಳನ್ನು ಪ್ರದರ್ಶಿಸಿದ್ದು, ಒಂದು ಚಿತ್ರವು ಮಾರಾಟವಾಗಿದ್ದ ಖುಷಿಗೆ (ಬೆಳಗ್ಗಿನಿಂದ ಇದ್ದರೂ ಸಂಜೆಗೆ ಈ ಖುಷಿ ಸಿಕ್ಕಿತಂತೆ) ಬೇರೆ ಕಲಾವಿದರ ಚಿತ್ರಗಳನ್ನು ನೋಡಿಬರಲು ಹೋಗಿದ್ದರು.  ಅದಕ್ಕೇ, ಹೇಳಿದ್ದು, ಕಲೆಗೆ ಬೆಲೆ ಕಟ್ಟಲು ಬಹಳ ಕಷ್ಟ ಎಂದು...


ಅಲ್ಲೊಂದಿಷ್ಟು ಚಿತ್ರಗಳನ್ನು ನನ್ನ ಪುಟ್ಟ ಕ್ಯಾಮೆರಾದಿಂದ ಸೆರೆಹಿಡಿದೆ.  ಕೆಲವನ್ನು ಇಲ್ಲಿ ಬ್ಲಾಗಿನಲ್ಲಿ ಅಂಚಿಸುತ್ತಿದ್ದೇನೆ.  ನೋಡಿ, ನಿಮಗೂ ಇಷ್ಟವಾಗಬಹುದು!


ಕೃಪೆ: ಅಲ್ಲಿ ನೆರೆದಿದ್ದ ಕಲಾವಿದರದ್ದು: ಫೋಟೋಗಳು: ಚಂದ್ರಶೇಖರ ಬಿ.ಎಚ್.

Rating
No votes yet

Comments