ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

ರಾಜ್ಯಪಾಲರ ಸಂವಿಧಾನಿಕ ನಿರ್ಧಾರ ಹಾಗೂ ಸರ್ಕಾರದ ರಾಜಕೀಯ ಧೋರಣೆ

Comments

ಬರಹ

ಮೇಲ್ಮನೆ ನಾಮಕರಣಕ್ಕಾಗಿ ಕಳುಹಿಸಿದ್ದ ಮೂರು ಹೆಸರುಗಳಲ್ಲಿ ಶ್ರೀ ಸೋಮಣ್ಣ ಅವರ ಹೆಸರನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಸರ್ಕಾರ ಹಾಗೂ ಬಿ.ಜೆ.ಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದರೆ, ವಿರೋಧಪಕ್ಷಗಳಿ ಖುಷಿಯಾಗಿದೆ.


ಈ ತರದ ಪರಿಸ್ಥಿತಿ ಇದೇ ಮೊದಲೇ?


ಇಲ್ಲ. ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಒಬ್ಬರ ಹೆಸರನ್ನು ಆಗಿನ ರಾಜ್ಯಪಾಲರು ತಿರಸ್ಕರಿಸಿದ್ದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸದ ಕೃಷ್ಣ ಅವರು ತಿರಸ್ಕೃತರ ಬದಲಿಗೆ ಶ್ರೀ ಚಂದ್ರಶೇಖರ ಕಂಬಾರ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಅಲ್ಲಿ ಸಂವಿಧಾನಕ್ಕೆ ಗೆಲುವಾಗಿತ್ತು.


ಆದರೆ ಈಗ ಸ್ವತಃ ಎಡಿಯೂರಪ್ಪನವರೇ ರಾಜ್ಯಪಾಲರನ್ನು ಭೇಟಿಯಾಗಿ ಸೋಮಣ್ಣ ಅವರ ಹೆಸರನ್ನು ಒಪ್ಪಿಕೊಳ್ಳುವಂತೆ ಕೋರಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರು ಒಪ್ಪದಿರುವುದರಿಂದ ಮತ್ತೆ ಎರಡನೇ ಬಾರಿಗೂ ಸೋಮಣ್ಣ ಅವರ ಹೆಸರನ್ನೇ ಶಿಫಾರಸ್ಸು ಮಾಡಿ ರಾಜ್ಯಪಾಲರ ಮೇಲೆಯೇ ಒತ್ತಡ ಹೇರುವ ತಂತ್ರವನ್ನು ಅನುಸರಿಸುವ ಮಾತುಗಳು ಕೇಳಿಬಂದಿವೆ. ಆಗಲೂ ತಿರಸ್ಕರಿಸಿದರೆ, ಕಾನೂನು ಹೋರಾಟಕ್ಕೆ ಇಳಿಯುವ ಮಾತುಗಳು ಬಿ.ಜೆ.ಪಿ.ವಲಯದಲ್ಲಿವ್ಯಕ್ತವಾಗಿವೆ.


ಸಂವಿಧಾನ ಚೌಕಟ್ಟಿನಲ್ಲಿ ರಾಜ್ಯಪಾಲರ ಪರಮಾಧಿಕಾರವನ್ನು ಗೌರವಿಸಬೇಕೆ? ಅಥವಾ ಸರ್ಕಾರದ ರಾಜಕೀಯ ಧೊರಣೆಯನ್ನು ಮನ್ನಿಸಬೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet