ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

ಬರಹ

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ .(National Volunteers Organization ) .

ಸ್ಥಾಪನೆ : ೧೯೨೫

ಸ್ಥಳ : ನಾಗಪುರ

ಸದಸ್ಯ ಬಲ : ೨೫ - ೬೦ ಲಕ್ಷ ( ಅಂದಾಜು )

 

"The RSS was established as a educational body whose objective was to train a group of Hindus, who on the basis of their character would work to unite the Hindu community so that India could become an Independent country and a creative ಸೊಸೈಟಿ "

 

ಇನ್ನು ನಾನು ನನ್ನ ಸ್ವಂತ ಅನುಭವಗಳನ್ನು ಸ್ವಲ್ಪ ಹಂಚಿಕೊಳ್ಳುತ್ತೇನೆ .ದಯವಿಟ್ಟು ಕೋಮು ಬೇಡ ಇದರಲ್ಲಿ .

ಒಬ್ಬರು ಇತ್ತೀಚಿಗೆ ಚರ್ಚೆ ಯಾ ಮಧ್ಯೆ " ಸಂಘ ದ ಕೀಳು ಅಭಿರುಚಿಯ ಸಾಹಿತ್ಯ " ಅಂದಿದ್ದು ನೋಡಿ ಮನಸ್ಸು ಮಡಚಿ ಮಲಗಿ ,ಯೋಚಿಸಿ ಹೇಳುತ್ತಿರುವ ಕೆಲವು ಮಾತುಗಳು ಅಷ್ಟೇ :

 

ಸಂಘದಲ್ಲಿ ಯಾವುದೇ ಕೀಳು ಅಭಿರುಚಿಯ ಸಾಹಿತ್ಯ ಇದುವರೆಗೆ ಬಂದಿಲ್ಲ . ಸಂಘ ಇಲ್ಲಿಯ ತನಕ ಯಾವತ್ತು ನಮ್ಮ ದೇಶ ದ ಸೌಹಾರ್ದ ಮುಸಲ್ಮಾನರನ್ನು ದ್ವೇಷಿಸಿ ಅಂದಿಲ್ಲ . ಸಂಘ ದ ತಾರ್ಕಿಕ ನಿಲುವು ಇದು ಹಿಂದೂ ರಾಷ್ಟ್ರ . ಇಲ್ಲಿ ನಮ್ಮ  ದೇಶದಲ್ಲಿ ಇರುವ ನಮ್ಮ ಎಲ್ಲ ಮುಸಲ್ಮಾನ ಬಾಂಧವರನ್ನು ಕೂಡ ನಮ್ಮವರು. ನಮ್ಮ ದೇಶವನ್ನು ಆಳಿದ ಆಂಗ್ಲರು ಪೋರ್ಚುಗೀಸರು  ಫ್ರೆಂಚರು, .......... (ಹಾಗೇನೆ  ಈಗ  ಇಟಲಿ ( !)( ಕ್ಷಮಿಸಿ ನಾನಂದಿದ್ದು ಬೋಫೋರ್ಸ್ ಹಗರಣದ ರೂವಾರಿ ಕ್ವಟ್ರೋಚ್ಚಿ ಸಹೋದರರ ಬಗ್ಗೆ ! ರಾಜಕೀಯ   ಲೇಪ ಬೇಡ )) ನಮ್ಮನ್ನು ಬಿಟ್ಟು ಹೋದಮೇಲೆ ನಮ್ಮ ಮೂಲಭೂತ ಸಂಸ್ಕೃತಿಕ ಥಳಹದಿಗಳಿಗೆ ಪೆಟ್ಟು ಬಿದ್ದಾಗ , ಹೌದು ಹಿಂದುಗಳನ್ನು ಒಗ್ಗಟ್ಟಗಿಸುವ ಅಗತ್ಯತೆ ಬಂದಿದೆ . ಹೀಗೆ ಮೇಲ್ಜಾತಿ ಕೀಲ್ಜಾಥಿ ಅನ್ನುತ್ತ ನಾವೇ ಕಿತ್ತದಿದ್ರೆ ಮುಂದೆ ಒಂದು ದಿನ ಜಗತ್ತಲ್ಲಿ ಹಿಂದೂಗಳ ಅಸ್ತಿತ್ವಕ್ಕೆ ದಕ್ಕೆ ಬಂದೆ ಬರುತ್ತೆ ಎಂದು ಮಾನ್ಯ ಹೆಗಡೆವಾರ್ ಅವರು ಸ್ಥಾಪ್ಪಿಸಿದ ಒಂದು ಸಮಾಜಮುಖಿ ಸಂಘಟನೆಯೇ RSS .    ಸಂಘ ದ ಇಲ್ಲಿಯ ಇತಿಹಾಸದಲ್ಲಿ ಇಲ್ಲಿ ತನಕ ಭಾರತೀಯತೆ ಯನ್ನು ಎತ್ತಿ ಹಿಡಿದ್ದದ್ದು ಬಿಟ್ಟರೆ ಬೇರೆ ಯಾವುದೇ ಸ್ವಂತ ಕಿಸೆ ಗೆ ತುಂಬಿಸುವ ಕೆಲಸ ಮಾಡುತ್ತಿಲ್ಲ . ಸಂಘ ದ ಯಾವು ದೇ ಕಾರ್ಯ ವಾಹ್ ಪ್ರಮುಖರು ದೇಶದ ಬ್ರಷ್ಟರ ಸಾಲಲ್ಲಿ ಬಂದಿಲ್ಲ. ಸಂಘಕ್ಕೆ ದುಡಿಯುವವರಲ್ಲಿ   ಎಸ್ಟೋ ಜನ ಬ್ರಮ್ಹಚಾರಿಗಳು . ಇದಕ್ಕೆ ವಾಜಪೇಯಿ , ಮೋದಿ , ಭಾಗವತ್ ಉದಾಹರಿಸಿದ್ರೆ ಸಾಲಲ್ಲ . ಸಾವಿರಾರು ಜನ ಇದ್ದಾರೆ . ಸಂಘ ಕ್ಕೆ ಇಂಥ ಹ ದೇಶ ಸೇವೆ ಗೆ ದುಡ್ಡೆಲ್ಲಿಂದ ಅಂತ ನೀವು ಕೇಳಿದ್ರೆ , ನಮ್ಮಂಥ ಹ ಸಂಘ ದ ಜನ ಗುರುಜಿ ಜನ್ಮ ದಿನದಂದು (ಗುರು ಪೂಜೆ) ಕೊಡುವ ಗುರು ದಕ್ಷಿಣೆ ಹಣ .  ಪಾಪ ಒಂದು ಮೂಲ ಉದ್ದೇಶ ಇಟ್ಟು ದೇಶ ಕಟ್ಟುವವರು ಸಂಘದವರು . ನಾನು ಸಂಘದಲ್ಲಿ ೧೫ ವರ್ಷಗಳ ಒಡನಾಟ ಇತ್ತುಕೊಂಡವ . ಸಂಘ ನನ್ನ ಯಾವುದೇ ದಿನಗಳಲ್ಲಿ ಸೌಹಾರ್ದ  ಮುಸಲ್ಮಾನ ಬಾಂಧವರ ಬಗ್ಗೆ ದ್ವೇಷ ತುಂಬಿ ಮಾತಾಡಿಲ್ಲ . ಸಂಘ ಜಾತಿಯತೆ , ಪ್ರತ್ಯೇಕತೆ , ಭಾಷಾವಾರು ಹೆಸರಲ್ಲಿ ದೇಶ ಒಡೆಯುವ ವಿಧಾನಗಳನ್ನು ವಿರೋಧಿಸುತ್ತದೆ .  ಸಂಘ ಮುಸಲ್ಮಾನ ವಿರೋಧಿ ಅನ್ನೋದು ಇಷ್ಟಕ್ಕೆ " ಭಯೋತ್ಪಾದಕರನ್ನು ಬಯ್ಯೋದಿಕ್ಕೆ " ಹಾಗೂ ಮತ್ಹಾನ್ಥರಗಳನ್ನುಮಾಡುವ ಮಿಷನರಿಗಳ ಆಷಾಢಭೂತಿ ಮುಖವಾಡಕ್ಕೆ .

 

ನಾನೊಬ್ಬ ಬ್ರಾಹ್ಮಣ ನಾಗಿ ನನ್ನ ೫ ನೆ ತರಗತಿಯಲ್ಲಿದ್ದಾಗ , ನಾನು ನನ್ನ ಶಾಖಾ ಪಾಟಿಗಳು ಸಂಪರ್ಕ ಅಂತ ಹೋಗಿ ತುಂಬಾ ಹರಿಜನರ ಮನೆಯಲ್ಲಿ ಊಟ ಮಾಡಿದ್ದೇವೆ, ತಂಗಿದ್ದೇವೆ. ಅವರ ಮಕ್ಕಳನ್ನು ಕರೆದುಕ್ಕೊಂದು ಕೂರಿಸಿ ಪಾಠ  ಹೇಳಿದ್ದೇವೆ . ಕುಡಿದು ಬಂದು ಗಲಾಟೆ ಮಾಡುವ ಮನೆ ಯಜಮಾನನ ಮಕ್ಕಳನ್ನು ಕರೆದು ಕೂರಿಸಿ , ದಿನವೂ ಭಾರತೀಯತೆ ಯಾ ಬೀಜ ಬಿಟ್ಟಿದ್ದೇವೆ. ನಮ್ಮ ಊರಲ್ಲಿ ಕೂಲಿ ಮಾಡಿ ಬದುಕುವ ಜನರಮಕ್ಕಳು ಇಂದಿಗೂ ಅಷ್ಟು ಸುಂದರಬದುಕು ಕಂಡಿದ್ದು ಸಂಘ ದಿಂದ, ಸಂಘ ಅವರಿಗೆ ಕಟ್ಟಿ ಕೊಟ್ಟ ಅ ಸಂಸ್ಕಾರ ದ ಬುತ್ತಿ ಊಟದಿಂದ . ಇದಕ್ಕೆ ಮಂಗಳೂರು ನಗರದಲ್ಲಿ ನಡೆದ ಪಥ ಸಂಚಲನಗಳೇ ಸಾಕ್ಷಿ . ಅಲ್ಲಿ ಬಂದವರು ಯಾರು ಹೋಗುವಾಗ , ಎರಡು ತೊಟ್ಟೆ ಸರಾಯಿ ಕುಡಿದು , ೧೦೦ ರ ನೋಟು ಜೋಬಿಗಿಳಿಸಿ ಹೋಗುವ ರಾಜಕೀಯ ಪುಡಾರಿಗಳ 'ಮಾಟಿನೀ ಶೋ' ಅಲ್ಲ ( ನಾನು ಹಾಸನ  ದಲ್ಲಿದ್ದಾಗ ಕಣ್ಣಾರೆ ನೋಡಿದ ಘಟನೆ ಮೇಲೆ ಹೇಳಿದ್ದು ! ವ್ಯಭವೀಕರಣ ಅಲ್ಲ )  . ಹಾಗೆ ಹೋಗುವಾಗ ಅದೇ ಕುಡುಕ ಅಪ್ಪನ ಅದೇ ಮಕ್ಕಳು ನಮ್ಮ ಜೊತೆ ಕೂತು ಪಾಠ ಓದಿದ ನಮ್ಮ ಸಹೋದರರು ಎಳ್ಳು ಹೋಗುವಾಗ ಮುಸಲ್ಮಾನ ದೂಷಣೆ ಯಾಗಲಿ , ವಿರೋಧವಾಗಲಿ ಮಾಡಲ್ಲ , ಬದಲಿಗೆ " ಭಾರತ್ ಮಾತಾ ಕಿ ಜೈ , ಶಿವಾಜಿ ಮಹಾರಾಜ್ ಕಿ ಜೈ " ಅನ್ನುತ್ತೇವೆ ಅಷ್ಟೇ .   ಪುರೋಹಿತಶಾಹಿ ಚಿಕ್ಕ ಮನಸ್ಸುಗಳನ್ನು ವಿರೋಧಿಸಿದ್ದು ಸಂಘ  ದ ಹೆಗ್ಗಳಿಕೆ . ಹುಡುಕಿ ನೋಡಿ , ಸಂಘ ದ ಅಂಗಳದಲ್ಲಿ ಇರುವ ಯಾರು FORBES  ಗುಂಪಲ್ಲಿ ಬರುವವರಲ್ಲ . ಒಂದು ರುಪಾಯಿ ಯು ನಮ್ಮ ದೇಶದ ಮಣ್ಣಿಂದ ಕದ್ದು ಜೋಬಿಗೆ ತುರುಕಿದವರಲ್ಲ .

 

ಹೇಳುವುದು ಸುಲಭ . " ಸಂಘ, ಕೋಮು ವಾದ "  ಅಂದು ಒಂದು ಮಿಲ್ಕ್ shake ಮಾಡಿ ಬರೆಯೋದು ಓದೋಕೆ ಮಜಾ ಇರುತ್ತೆ , ಸಂಘ ದ ಬಗ್ಗೆ ಗೊತ್ತೇ ಇಲ್ಲದವರಿಗೆ . 

 

ಆದರೆ ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ  ಸೇವೆ ಮಾಡುವ ಒಂದು ಸಂಘ . 

 

 ನಮ್ಮ ಕಯ್ಯಲ್ಲಿ ಆಗ್ಲಿಲ್ಲ ಅಂದ್ರೆ , ಪ್ರೋತ್ಸಾಹಿಸೋ ಗುಣ ಇಲ್ಲಾಂದ್ರು,  ಬಯ್ಯುವವರನ್ನು ನೋಡಿ ಬರೆದದ್ದು . ಸ್ವಯಂ ಅನುಭವ . ರಾಜಕೀಯ ಲೇಪ ಬೇಡ .

 

ಪ್ರೀತಿ ಇಂದ 

 

ಪ್ರವೀಣ ಸಾಯ