ಶಿಲ್ಪ ಕೌಶಲ

ಶಿಲ್ಪ ಕೌಶಲ

ಶಿಲ್ಪ ಕಲೆಯ ಅಧ್ಬುತ ಗಳನ್ನು ಕಂಡಿದ್ದೇವೆ. ಬೇಲೂರಿನ ಶಿಲಾ ಬಾಲಿಕೆ ಕಂಡಿದ್ದೇವೆ. ಅಲ್ಲಿನ ಶಿಲ್ಪಗಳಲ್ಲಿ ಮೂಗು - ಬಾಯಿಗಳಿಗೆ ಸಂಬಂಧ ಕಲ್ಪಿಸುವ ರಂಧ್ರಗಳನ್ನು ಕಂಡಿದ್ದೇವೆ. ದೇವಾಲಯದ ಎದುರಿನ ಗರುಡ ಗಂಭಗಳಡಿ ಕಾಗದ, ದಾರಗಳನ್ನು ತೂರಿಸಿ ನೋಡಿದ್ದೇವೆ. ಏಕ ಶಿಲೆಯ ಗೊಮ್ಮಟ, ಒಂದೇಕಲ್ಲಿನಲ್ಲಿ ಕೆತ್ತಿದ ಸರಪಳಿ ಹೀಗೆ ಅನೇಕ ಅಧ್ಬುತಗಳನ್ನು ಶಿಲ್ಪಿಗಳು ಸೃಷ್ಟಿಸಿದ್ದಾರೆ. ಹಾಗೆ ಹೈದರಾ ಬಾದಿನ ಸಾಲರ್ ಜಂಗ್‌  ಮ್ಯೂಸಿಯಂನಲ್ಲಿ ಅಮೃತ ಶಿಲೆಯಲ್ಲಿ ಕೆತ್ತಿದ ಮುಸುಕು ಧಾರಿ ಮಹಿಳೆಯನ್ನು ಕಂಡಿದ್ದೇವೆ. ಇವೆಲ್ಲವುಗಳೂ ಕಲಾವಿದರ ನೈಪುಣ್ಯತೆಯ ಸಂಕೇತಗಳು ಅಂತೆಯೇ ನಮ್ಮ ಬಳಿಯಲ್ಲಿರುವ ಈ ಅಧ್ಬುತವನ್ನು ತಮ್ಮ ಮುಂದಿಟ್ಟಿದ್ದೇನೆ. ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿನ ಉಮಾಮಹೇಶ್ವರ ದೇವರ ಲಿಂಗ. ಈ ಲಿಂಗದ ಶಿರೋ ಭಾಗದಲ್ಲಿ ಕೆಂಪಾದ ಒಂದು ಚಿತ್ತಾರ ಕಂಡು ಬರುತ್ತಿದೆ. ಇದು ಕಲ್ಲಿನಲ್ಲಿಯೇ ಇರುವ ಕೆಂಪು ಭಾಗವನ್ನು ಬಳಸಿಕೊಂಡು ಶಿಲ್ಪಿ ಶಿವಲಿಂಗದ ತಲೆಯ ಭಾಗದಲ್ಲಿ ಬರುವಂತೆ ಕೆತ್ತಿದ್ದಾನೆ ಎನ್ನುತ್ತಾರೆ. ಇದು ಶಿವ ತಲೆಯಲ್ಲಿ ಧರಿಸಿದ ಅರ್ಧಚಂದ್ರ ಎಂದು ವಿವರಣೆ ನೀಡುತ್ತಾರೆ. ಇದೂ ಒಂದು ವಿಶೇಷವಲ್ಲವೇ?

 

Rating
No votes yet

Comments