’ ಕೊಲ್ಲೂರು ಶ್ರೀ ಮೂಕಾಂಬಿಕ ಅಮ್ಮನವರ ದೇವಸ್ಥಾನ ”
ಮೂಕಾಂಬಿಕ ಅಮ್ಮನವರ ದೇವಸ್ಥಾನದ ಪ್ರಮುಖ ಗರುಡಗಂಬ...
ಕೊಲ್ಲೂರು, ಕುಂದಾಪುರ ತಾಲ್ಲೂಕಿನಲ್ಲಿದೆ. ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಕರ್ನಾಟಕದ ಮಂಗಳೂರಿನಿಂದ, ಸುಮಾರು ೧೩೫ ಕಿ. ಮೀ.ದೂರದಲ್ಲಿದೆ. ಅತಿ ಹತ್ತಿರದ ರೈಲ್ವೆ ನಿಲ್ದಾಣವೆಂದರೆ, ’ಉಡುಪಿ’. ’ಮಂಗಳೂರು’, ’ಮೈಸೂರು’, ’ಬೆಂಗಳೂರಿಂದಲೂ ಅಲ್ಲಿಗೆ, ಹೋಗಬಹುದು. ಉಡುಪಿಯಿಂದ, ’ಶಿವಮೊಗ್ಗ’, ಮತ್ತು ’ಕಣ್ಣಾನೂರ್’ ಗೆ ಬಸ್ ಗಳು ಇವೆ. ’ಶಿವನಲಿಂಗ’ ವೇ, ’ಜ್ಯೋತಿರ್ಲಿಂಗ’ವೆಂದು ಪ್ರಧಾನವಾದ ದೇವತೆ. ’ಮೂಕಾಂಬಿಕ ಅಮ್ಮನವರ ಮೂರ್ತಿ’ ಯಮುಂದೆ ಈ ಜ್ಯೋತಿರ್ಲಿಂಗವಿದೆ. ’ಆದಿಶಂಕರ’ರು, ತಮ್ಮ ’ಸೌಂದರ್ಯಲಹರಿ ಸ್ತೋತ್ರ’ ವನ್ನು ಇಲ್ಲಿ ರಚಿಸಿದರು. ಅವರು ಜ್ಯೋತಿರ್ಲಿಂಗದ ಹಿಂದೆ ದೇವಿಯ ಲೋಹದ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅವುಗಳು ಚಿನ್ನದ ಛಾವಣಿ, ಮತ್ತು ಆಭರಣಗಳನ್ನು ಹೊಂದಿವೆ. ಅಮ್ಮನವರ ದೇವಾಲಯಕ್ಕೆ ದೇಶ-ವಿದೇಶದ ವಿವಿಧ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ.
’ಸೌಪರ್ಣಿಕಾ ಜೀವ-ನದಿ’ಯ ದಡದಲ್ಲಿ ಪಶ್ಚಿಮ ಘಟ್ಟಗಳ ಕೆಳಭಾಗದಲ್ಲಿ, ’ಸುಪರ್ಣ’ನೆಂಬ ’ಗರುಡ’ ಇಲ್ಲಿ ತಪಸ್ಸನ್ನು ಮಾಡಿ ಮುಕ್ತಿಯನ್ನು ಪಡೆದನಂತೆ. ದಡದಮೇಲೆ, ’ಸೌಪರ್ಣಿಕ’ ವೆಂದು ಹೆಸರು. ನದಿಯಲ್ಲಿ ಸ್ನಾನ ಮತ್ತು ದೇವಿಯ ದರ್ಶನವನ್ನುಮಾಡಿ ಪುನೀತರಾಗಬಹುದು. ’ಪರುಶರಾಮ ಮಹರ್ಷಿಗಳು,’ ಸ್ಥಾಪಿಸಿದ ೭ ಯಾತ್ರಾಸ್ಥಳಗಳಲ್ಲಿ ಇದೂ ಒಂದು. ಉಳಿದ ಕೆಲವು ಶಿವನಿಗೆ, ’ಗಣೇಶ’ ನಿಗೆ ಮತ್ತು ’ಸುಬ್ರಮಣ್ಯ’ರಿಗೆ, ಸಮರ್ಪಿತವಾಗಿವೆ. ’ಪಾರ್ವತಿ ದೇವಿ’ ಗೆ ಸಮರ್ಪಿತವಾಗಿರುವುದು ಇದೊಂದು ದೇಗುಲದೇ !
ಕೊಲ್ಲೂರಿನ ಅಕ್ಕಪಕ್ಕಗಳಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಪ್ರಸಿದ್ಧವಾದದ್ದು, ’ಅರಸಿನ ಮಕ್ಕಿ’. ಪ್ರಖ್ಯಾತ ಜಲಪಾತ. ’ಕೊಡಚಾದ್ರಿ ಪರ್ವತ ಶ್ರೇಣಿ’ ಅತ್ಯಾಕರ್ಶಕವಾದ ತಾಣ. ಪರ್ವ ಆರೋಹಣಕಾರರು, ಮತ್ತು ಚಾರಣಪ್ರಿಯರನ್ನು ಆಕರ್ಷಿಸುತ್ತವೆ. ೭ ಮುಕ್ತಿಸ್ಥಳಗಳಲ್ಲೊಂದು. ’ಕೊಲ್ಲೂರು’ ಒಂದು ಚಿಕ್ಕಗ್ರಾಮ, ’ಕುಂದಾಪುರ’ ದಿಂದ ೪೦ ಮೈಲಿದೂರದಲ್ಲಿದೆ. ಪಶ್ಚಿಮಘಟ್ಟಗಳ ತಟದಲ್ಲಿದೆ. ’ಮೂಕಾಂಬಿಕದೇವಸ್ಥಾನ’ಕ್ಕೆ ಪ್ರಸಿದ್ಧಿ. ಇದಲ್ಲದೆ, ಇಲ್ಲೊಂದು ಹೆಸರುವಾಸಿಯಾಗಿರುವ, ಅಭಯಾರಣ್ಯವಿದೆ, (ಕೊಲ್ಲೂರು ಅಭಯಾರಣ್ಯ)
ಕೊಲ್ಲೂರನ್ನು ತಲುಪಲು ಹಲವು ದಾರಿಗಳಿವೆ :
* ಮೊದಲನೆಯದು, ’ತಲ್ಲೂರು’-’ಹಟ್ಟಂಗಡಿ’-’ಕರ್ಕುಂಜೆ’-’ವಂಡ್ಸೆ’ ದಾರಿಯಲ್ಲಿ ಬರಬಹುದು.
* ಎರಡನೆಯದು, ’ಹೆಮ್ಮಾಡಿ-ವಂಡ್ಸೆ’ ( ಇದು ಅತಿ ಹತ್ತಿರದ ದಾರಿ. ’ನ್ಯಾಶನಲ್ ಹೈವೆ-೧೭,’ ನಲ್ಲಿ ಹಾಗೆಯೇ ಬಂದರೆ, ’ಕುಂದಾಪುರ’ ೭ ಕಿ. ಮೀ. ದೂರವಿದೆ. ’ಹೆಮ್ಮಾಡಿ’ಯಿಂದ ಬಲಕ್ಕೆ ತಿರುಗಿದರೆ, ’ಕೋಲ್ಲೂರು’ ಮುಟ್ಟಬಹುದು.)
* ಮೂರನೆಯದು, ’ಬೈಂದೂರು’ ಮುಖಾಂತರ. ಕುಂದಾಪುರ [೪೦ ಮ್ಕ್] ಹತ್ತಿರದ ರೈಲ್ವೆ ನಿಲ್ದಾಣ. ನಿಲ್ಲುತ್ತವೆ. ಸ್ಟೇಶನ್ ನಿಂದ ಟ್ಯಾಕ್ಸಿ ಅಥವಾ ಸಿಗುತ್ತವೆ. ಪ್ರಯಾಣಿಕರು ವಿರಮಿಸುವ ಕೊಠಡಿ ಇದೆ. (waiting rooms)
Railway Station telehone number: +91-8254-237365.
’ಬೈಂದೂರ್’ ನಲ್ಲಿ ರೈಲುಗಳು ನಿಲ್ಲುತ್ತವೆ. (೨೬ ಕಿ. ಮೀ.) ’ಕುಂದಾಪುರ’ ಮತ್ತು ’ಭಟ್ಕಳ’ದ ಮಧ್ಯೆ ಇದೆ. ಕೊಲ್ಲೂರಿಗೆ, ಪ್ರತಿ ಅರ್ಧ ಗಂಟೆಗೆ ಬಸ್ ಗಳು ಸಿಗುತ್ತವೆ. ಬೆಳಿಗ್ಯೆ ೬ ಗಂಟೆಯಿಂದ ರಾತ್ರಿ, ೮-೩೦ ರವರೆಗೆ. ರೈಲ್ವೆ ಸ್ಟೇಶನ್ ನಿಂದ ಬಸ್ ನಿಲ್ದಾಣಕ್ಕೆ ೩ ಕಿ. ಮೀ. ದೂರ. ಮಂಗಳೂರು ಹತ್ತಿರದ ’ಬಜ್ಪೆ ವಿಮಾನ ನಿಲ್ದಾಣ’. ’ಪ್ರಿಪೇಡ್ ಟ್ಯಾಕ್ಸಿಗಳು ಕೊಲ್ಲೂರಿಗೆ ಸಿಗುತ್ತವೆ.’ ೩ ಗಂಟೆ ಪ್ರಯಣ ಕೊಲ್ಲೂರಿಗೆ, [೧೫೦ ಕಿ. ಮೀ] ಕೊಲ್ಲೂರಿನಿಂದ ಉಡುಪಿಗೆ ೨ ಗಂಟೆ ಪ್ರಯಾಣ. ಬೆಂಗಳೂರಿನಿಂದ ಬರುವಾಗ, ಕೊಲ್ಲೂರಿಗೆ ಶಿವಮೊಗ್ಗ, ಮಂಗಳೂರಿನಿಂದಿಂದಲೂ ಹೋಗಬಹುದು. ಚೆನ್ನೈ ’ಕೊಲ್ಲೂರ್’, ’ಶೃಂಗೇರಿ’ ಮತ್ತು ’ಗುರುವಾಯೂರ್’ ನಿಂದಲೂ ಬಸ್ ವ್ಯವಸ್ಥೆ ಇದೆ.
ಅಮ್ಮನವರ ದೇವಸ್ಥಾನದ ಪ್ರಮುಖ ದ್ವಾರ....
-ಚಿತ್ರಗಳು : ಪ್ರಕಾಶ್, ವೆಂಕಟೇಶ್.