"ಒಹ್, ಇದ್ ನಂಬಳ ಪೊಣ್ಣ್"

"ಒಹ್, ಇದ್ ನಂಬಳ ಪೊಣ್ಣ್"

ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ಈ ವಿಷಯ. ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ. ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶಸ್ತಿ ಪಡೆದಳು. ಪ್ರಶಸ್ತಿ ಪ್ರದಾನ ಮಾಡಲು ಆಕೆಯನ್ನು ಕರೆದಾಗ ವಿದ್ಯಾಳನ್ನು ನೋಡಿದ ರೇಖಾ ಎಲ್ಲರೂ ಕೇಳುವಂತೆ ಉದ್ಗರಿಸಿದ್ದು "ಒಹ್, ಇದ್ ನಂಬಳ ಪೊಣ್ಣ್" ಅಂತ. ಅಂದರೆ ಒಹ್ ಈಕೆ ನಮ್ಮ ಹುಡುಗಿ ಎಂದು. ಈ ಭಾವನೆ ಕನ್ನಡಿಗರನ್ನು ಬಿಟ್ಟು ಎಲ್ಲಾ ರಾಜ್ಯದವರಿಗೂ ಇದೆಯಲ್ಲಾ ಯಾಕೆ ಎಂದು ನನ್ನ ಸೋದರಿ ಮುಗ್ಧಳಾಗಿ ಕೇಳಿದಳು. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂದು ನಾನು ಆಕೆಗೆ ಉತ್ತರಿಸದೆ ಪಿಕ್ ಅಪ್ ಟ್ರಕ್ ಹಿಂದೆ ಮುಗ್ಧವಾಗಿ ಕೂತು ಸವಾರಿ ಮಾಡುತ್ತಿದ್ದ ಒಂಟೆಯನ್ನು ನೋಡುತ್ತಾ  ಡ್ರೈವ್ ಮಾಡುತ್ತಿದ್ದೆ.            
Rating
No votes yet

Comments