ನಾಲ್ಕು ದಿನ

ನಾಲ್ಕು ದಿನ

ಬರಹ

ಫ್ಯಾಮಿಲಿ ಪ್ಲಾನಿಂಗ್ ಬಂದ ಮೇಲೆ "ನಾವಿಬ್ಬರು ನಮಗಿಬ್ಬರು" ಬಂದು ಈಗ "ನಾವಿಬ್ಬರು ನಮಗೊಬ್ಬ" ಎಂಬ ಪಾಲಿಸಿ ಬಂದಿರುವುದಷ್ಟೇ. ಆದರೂ ಸಾಮಾನ್ಯವಾಗಿ ಈಗಿನ ಕುಟುಂಬದಲ್ಲಿ ನಾಲ್ಕು ಮಂದಿಯನ್ನು (ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು) ನಾವು ನೋಡಬಹುದಾಗಿದೆ. ಆದಾಗ್ಯೂ ಕುಟುಂಬದಲ್ಲಿ ಸಾಮರಸ್ಯ, ಶಾಂತಿ, ನೆಮ್ಮದಿ, ಸಮಾಧಾನ ಮತ್ತು ಪರಸ್ಪರ ಪ್ರೀತಿಯ ಅಭಾವವನ್ನು ನಾವು ಗಮನಿಸಬಹುದಾಗಿದೆ. ಹಾಗೆನಿಸಿದಾಗ ಬರೆದ ನಾಲ್ಕು ಸಾಲುಗಳು:


ನಾವಿರುವುದು ನಾಲ್ಕು ಜನ


ನಾವಿಲ್ಲರುವುದು ನಾಲ್ಕೇ ದಿನ


ಅಷ್ಟರಲ್ಲೇಕೀ ಬೇಗುದಿತನ


ಬಾಳಾಗಲೀ ನಿತ್ಯ ತನನ ತನನ