ಈಗಿನ ತಾಯಿಯೂ....ನಮ್ಮ ಸರ್ಕಾರಗಳೂ..!!!

ಈಗಿನ ತಾಯಿಯೂ....ನಮ್ಮ ಸರ್ಕಾರಗಳೂ..!!!

ಹಿಂದೊಂದು ಕಾಲ ಇತ್ತು


ಮಗುವಿಗೆ ಹಸಿವಾದರೆ


ತಾಯಿಗೆ ತಿಳಿಯುತ್ತಿತ್ತು


ಅಳದೆನೇ ಮಗುವಿನ


ಹೊಟ್ಟೆಗೆ ಹೊತ್ತು ಹೊತ್ತಿಗೆ


ತಿನಿಸು ಸಿಗುತ್ತಿತ್ತು


 


ನಾಟಿ ಕಠಾವಿನ ಹೊಲದಿಂದ


ಯಾವ ಹೊತ್ತೂ ತಪ್ಪದಂತೆ ತನ್ನ


ಮನೆಗೆ ಹೋಗುತ್ತಿದ್ದಳು ಅಮ್ಮ


ಹಳೇ ಸೀರೆಯ ತೊಟ್ಟಿಲಿನಲ್ಲಿ


ಸುಖ ನಿದ್ರೆಯಲಿ ನಗುವ ಕಂದಗೆ


ಹಾಲು ಕುಡಿಸಿ ಬರುತ್ತಿದ್ದಳು ಅಮ್ಮ


 


ಈಗಿನ ಕಾಲ ಹಾಗಲ್ಲವೇ ಅಲ್ಲ


ಮಗು ಅತ್ತರೂ ಆ ತಾಯಿಯ


ಕಿವಿಗಳಿಗೆ ಕೇಳಿಸುವುದೇಇಲ್ಲ


ಕೆಲಸದಾಕೆಯ ಕೈಯಲ್ಲಿ


ಸಿಲುಕಿರುವ ಮಗು ಅಳಲೂ


ಈಗ ಧೈರ್ಯ ಮಾಡುವುದಿಲ್ಲ


 


ಮುಂಜಾನೆ ಮನೆ ಬಿಟ್ಟರೆ


ಆಕೆ ಮನೆಗೆ ಮರಳುವುದು


ಹೊತ್ತು ಕಂತಿದ ಮೇಲೇನೇ


ನಿದ್ದೆಯಲಿದ್ದರೆ ಮಗು ತನ್ನ


ತಾಯಿಯ ಗುರುತನ್ನೂ


ಒಮ್ಮೊಮ್ಮೆ ಮರೆತಂತೇನೇ


 


ಈಗಿನ ಸರಕಾರಗಳು ಮಾಡುವ


ಕೆಲಸಗಳೂ ಒಂದು ತರಹದಲಿ


ಹಾಗೇ ಆಗಿಬಿಟ್ಟಿವೆ ನೋಡಿ


ಈ ಭಂಡ ಸರ್ಕಾರಗಳೇನೂ


ಮಾಡುವುದಿಲ್ಲ ಜನರು ಅಳದೇ


ಇದ್ದರೆ ಅವನ್ನು ಕಾಡಿ ಬೇಡಿ


 


ಜನರು ಏನಾದರೂ ತಮಗೆ


ಕಷ್ಟ ಇದೆಯೆಂದರೆ ಸರ್ಕಾರಕ್ಕೆ


ಮೊದಲು ದಲ್ಲಾಳಿಗಳ ಆಗಮನ


ಆಸೆ ಹುಟ್ಟಿಸಿ, ಸುಮ್ ಸುಮ್ನೆ


ನಗಿಸಿ, ಸಿಕ್ಕ ಸಹಾಯದಲ್ಲೂ


ವಸೂಲಿ ಮಾಡಿಯೇ ನಿರ್ಗಮನ!!!


******************


 


- ಆಸು ಹೆಗ್ಡೆ


 (ನಾನು ನಿನ್ನೆ ತುಳು ಭಾಷೆಯಲ್ಲಿ ಬರೆದಿದ್ದ  ಮೂಲ ರೂಪ ಇಲ್ಲಿದೆ http://athradi.wordpress.com/2010/02/17/modern_mother/)

Rating
No votes yet