ಅವಿಸ್ಮರಣೀಯ ಗೆಲುವು

ಅವಿಸ್ಮರಣೀಯ ಗೆಲುವು

ಬರಹ

 ಹೃತ್ಪೂರ್ವಕ ಅಭಿನಂದನೆಗಳು ಭಾರತೀಯ ಕ್ರಿಕೆಟ್ ತಂಡಕ್ಕೆ. ಛಲದಿಂದ ಮತ್ತು ಗೆಲ್ಲಲೇ ಬೇಕೆಂದು ಅದ್ಭುತವಾಗಿ ಆಡಿ ಒಂದು ಕಡೆ ಭೂತದಂತೆ ಗೆಲುವನ್ನು ನಿರಾಕರಿಸಲು ನಿಂತಿದ್ದ ಭಾರತೀಯ ಸಂಜಾತ ಆಫ್ರಿಕಾದ ಹಾಶಿಮ್ ಆಮ್ಲರ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನವನ್ನು ಮೀರಿ ಭಾರತ ಸ್ಮರಣೀಯ ಗೆಲುವು ಸಾಧಿಸಿತು. ಸರಣಿ ಸಮವಾಗಿ ಕೊನೆಗೊಂಡರೂ ಎರಡೂ ಟೆಸ್ಟ್ಗಳು ಮನಸ್ಸಿನಲ್ಲಿ ಎಂದಿಗೂ ಇರುವಂತೆ ಮಾಡಿದವು. ಈಡನ್ ಗಾರ್ಡನ್ಸ್  ಮೈದಾನ ಇದೇ ರೀತಿಯ ಮನಮೋಹಕ ಕ್ರಿಕೆಟ್ ಪಂದ್ಯಗಳನ್ನು ನೀಡಿದ್ದು, ಇಂಥ ರೋಚಕ ಪಂದ್ಯಗಳಲ್ಲಿ ಸಾಮಾನ್ಯವಾಗಿ ಎದುರಾಳಿ ಬ್ಯಾಟ್ಸ್ ಮ್ಯಾನ್ಗಳೇ ಮಿಂಚಿದ್ದು ಹೆಚ್ಚು. 

ಭಾರತೀಯ ಗೆಲುವಿನಲ್ಲಿ ಮುಕ್ತಾಯಗೊಂಡ ಈ ಎರಡನೇ ಟೆಸ್ಟ್ ಭಾರತ, ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯವಲ್ಲ ಬದಲಿಗೆ ಹಾಶಿಮ್ ಆಮ್ಲ, ಮತ್ತು ಭಾರತದ ನಡುವಿನ ಹಣಾ ಹಣಿ ಎಂದು ಕೆಲವರ ಅಭಿಪ್ರಾಯ, ನೀವೇನಂತೀರಿ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet