ಹಳ್ಳಿಯವರೆಂದರೆ ತತ್ಸಾರನ Mr.Urban Ladders

ಹಳ್ಳಿಯವರೆಂದರೆ ತತ್ಸಾರನ Mr.Urban Ladders

ಬರಹ

 

 ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ  ನೋವಿನ ಸಂಗತಿ...

 

 ಈ ಲೇಖನ ನಾನು ಸೇರಿದಂತೆ ಬಹಳ ಮಂದಿ ಹಳ್ಳಿಯವರ  ನೋವಿನ ಸಂಗತಿ...

 

ನೀವೇ ನೋಡಿ ನಮಗೆ ಹೇಗೆ ಅನ್ಯಾಯವಾಗುತ್ತಿದೆ ಎಂದು

 

1.ಹಳ್ಳಿಯವರಿಗಿದ್ದ ೫% ಅಂಕ ತೆಗೆದ್ದಿದ್ದಾರೆ, ಆದರೆ ಇಲ್ಲಿ ಪಾಪ ಓದುವುದಕ್ಕೆ ಆಗುವುದಿಲ್ಲ ಏಕೆಂದರೆ ವಿದ್ಯುತ್ತಿನ ಸಮಸ್ಯೆ . ನಗರದವರು ಎಲ್ಲ ಅಧುನಿಕ ಸೌಲಭ್ಯ ಬಳಸಿಕೊಂಡು ಓದುತಿದ್ದರೆ ಇಲ್ಲಿ ಇನ್ನು ಅಡುಗೂಲಜ್ಜಿ ಕಾಲದ ಪದ್ದತಿಯೇ.

 

ಇಲ್ಲಿ ನನಗೆ ನಾನು ಶಾಲಾ ದಿನಗಳಲ್ಲಿ ಬರೆದ ಚುಟುಕು ನೆನೆಪಾಗುತ್ತದೆ 

 

ಆಟವ ಆಡುತ್ತೆ ಕ.ಈ.ಬಿ. ಕರೆಂಟು

ಓದೋಕೆ ಬರೆಯೋಕೆ ಚಕ್ಕರ್ 

ನಾನೇನು ಮಾಡಲಿ ಓದೋಕೆ .

 

ಆದರೆ ಹತ್ತು ವರ್ಷ ಕಳೆದರು ಇನ್ನು ಏನು ಬದಲಾಗಿಲ್ಲ 

 

 

2.ಕೆಲಸಕ್ಕೆ ಅಂತ ಹೋದರೆ ಸಂದರ್ಶನದಲ್ಲಿ ಏನೋ ಒಂದು ಚೂರು english  ಸರಿಯಿಲ್ಲದಿರುವುದಕ್ಕೆ ಕೆಲಸ ಮಾಡುವ ಕಾರ್ಯಕ್ಷಮತೆ ಇದ್ದ್ದರು ಹೊರಹಾಕುತ್ತಾರೆ ಹಾಗೆ ನೋಡಿದರೆ ನಾವೇ ಈ ನಗರದವರಿಗಿಂತ ಹೆಚ್ಚು ವ್ಯಾಕರಣಬಧ್ಧವಾಗಿ ಇಂಗ್ಲೀಷನ್ನು ಮಾತಾಡೋದು .....

 

ಇಂಗ್ಲಿಷೆಂಬ ಮಾಯೆಯ ಮಾಯವನ್ನು ಅರಿತರು 

ಕನ್ನಡವನ್ನು ಪೂಜಿಸಿ ಎಲ್ಲವನ್ನು ಸಿಧ್ಧಿಸಿದರು 

ಕೆಲಸ ಸಿಗುತಿಲ್ಲವೋ ಮಂಕುತಿಮ್ಮ .

 

ಎಂದು ಡಿ.ವಿ.ಜಿ.ಯವರು ಬರೆಯುತಿದ್ದರೆನೋ  

 

3.ಇನ್ನು ಈ ನಗರದ ಕಾಲೇಜುಗಳಲ್ಲಿ ಹಳ್ಳಿಯವರೆಂದರೆ ಹಿಂಜರಿಯುತ್ತಾರೆ. ನನಗೂ ಈ ಅನುಭವ ಆಗಿತ್ತು ಆದರೆ ನಾವು ಕೆಲವು ಹಳ್ಳಿಯವರೇ ಸೇರಿ ಈ  ನಗರದವರಿಗಿಂತ ಬಹಳ ಚೆನ್ನಾಗಿ ನಮ್ಮ ಇವೆಂಟ್ ನಡೆಸಿದೆವು.

ಆದರೆ ಎಲ್ಲ ನಗರಿಗರು ಹೀಗೆ ಅಂತ ನಾನು ಹೇಳಲ್ಲ ಆದರೆ ಬಹು ಪಾಲು ಹೀಗೆ ಇರುತ್ತಾರೆ. ಇದಕ್ಕೆ ನಮ್ಮ ಸರ್ಕಾರ ಹಾಗು ಅದರ ಆಡಳಿತ ಹಾಗು ನಗರದವರ ಮೂಡ ನಂಬಿಕೆಗಳು ಕಾರಣ . ಆದರೆ ಹಳ್ಳಿಯವರನ್ನ ಅಸ್ಪ್ರುಷ್ಯರಂತೆ ನೋಡಬೀಡಿ ಎಂಬುದು ನನ್ನ ಕಳಕಳಿಯ ಬೇಡಿಕೆ ...

ನೀವು ಇದೇ ರೀತಿ ಅನುಭವಕ್ಕೆ ಒಳಗಾಗಿದ್ದಾರೆ ತಿಳಿಸಿ.

ಅಲ್ಲದೆ ನಗರದವರಾಗಿ ಹಳ್ಳಿಯವರಿಗೆ ಪ್ರೋತ್ಸಾಹಿಸಿದ್ದಾರೆ ಅದನ್ನು ತಿಳಿಸಿ. 

ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಿ.

 

ವಂದನೆಗಳು 

 ನಿಮ್ಮ ಪ್ರೀತಿಯ 

   ಗಣೇಶ